/newsfirstlive-kannada/media/media_files/2025/11/19/belagavi-three-youths-2025-11-19-12-51-52.jpg)
ಬೆಳಗಾವಿ ಜಿಲ್ಲೆಯ ಅಮನ್ ನಗರದಲ್ಲಿ ದಾರುಣ ಘಟನೆ ನಡೆದಿದೆ. ಮನೆಯಲ್ಲಿ ಬುಟ್ಟಿಯೊಂದರಲ್ಲಿ ಬೆಂಕಿ ಹಾಕಿ, ಹೊಗೆ ಬರುವಂತೆ ಮಾಡಿಕೊಂಡು ಮಲಗಿದ್ದ ನಾಲ್ವರಲ್ಲಿ ಮೂವರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ.
ರಿಹಾನ್ ಮತ್ತಿ (22), ಸರ್ಪರಾಜ್ ಹರಪ್ಪನಹಳ್ಳಿ (22), ಮೋಯಿನ್ ನಾಲಬಂದ್ (22) ಮೃತ ದುರ್ದೈವಿಗಳು. ಮತ್ತೋರ್ವ ಶಾನ್ವಾಜ್ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಮನೆಗೆ ಕಿಟಕಿಗಳಿಲ್ಲದೇ ವೆಂಟಿಲೇಶನ್ ಆಗದೇ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us