/newsfirstlive-kannada/media/media_files/2025/08/30/laxmi-hebbalkar-2025-08-30-14-36-07.jpg)
ಇಂದು ಕುಂದಾನಗರಿ ಬೆಳಗಾವಿಯಲ್ಲಿ ಕಬ್ಬು ಬೆಳೆ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೋಳಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ನ್ಯೂಸ್ ಫಸ್ಟ್ ಸಿಇಓ ರವಿಕುಮಾರ್ ಅವರು ಮಾತಾಡಿದ್ದಾರೆ.
ಕಬ್ಬು ಬೆಳೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು..?
ಉತ್ತಮ ಕಬ್ಬು ಇಳುವರಿಗೆ ಕೈಗೊಳ್ಳಬೇಕಾದ ಸುಧಾರಿತ ಬೇಸಾಯ ಕ್ರಮಗಳು, ಕಬ್ಬು ಬೆಳೆಗೆ ಮಣ್ಣಿನ ಆರೋಗ್ಯ ಕಾಪಾಡುವುದು, ಗೊಣ್ಣೆ ಹುಳು ಸಮಸ್ಯೆಗೆ ಪರಿಹಾರ ಹಾಗೂ ತಂತ್ರಜ್ಞಾನದ ಮೂಲಕ ಕಬ್ಬು ಬೆಳೆ ಇಳುವರಿ ಹೆಚ್ಚಿಸುವ ಬಗ್ಗೆ ಈ ಕಾರ್ಯಕ್ರಮ ರೈತರಿಗೆ ಸಮಗ್ರ ಮಾಹಿತಿ ಒದಗಿಸಲಿದೆ.
ನಾನು ರೈತರ ಮಗಳು. ಮೊನ್ನೆಯಷ್ಟೇ ನಾವೆಲ್ಲಾ 79 ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಿದ್ದೇವೆ. 79 ವರ್ಷದ ಹಿಂದೆ ನಮ್ಮ ದೇಶದ ಹಾಗೂ ರೈತರ ಪರಿಸ್ಥಿತಿ ಯಾವ ರೀತಿ ಇತ್ತು. ಜನರ ಜೀವನ ಹೇಗಿತ್ತು. ನಮ್ಮ ದೇಶದಲ್ಲಿ ಒಂದು ಹೊತ್ತು ಊಟ ಮಾಡಲು ಆಗ್ತಾ ಇರಲಿಲ್ಲ. ಅಷ್ಟೊಂದು ಬಡ ರಾಷ್ಟ್ರವಾಗಿತ್ತು. ಕಿತ್ತು ತಿನ್ನುವಂತ ಬಡತನ ಇತ್ತು. ಇತ್ತೀಚಿನ ದಿನಗಳಲ್ಲಿ ಕಾಂಪಿಟೇಷನ್ ಜಾಸ್ತಿ ಆಗುತ್ತಿದೆ. ಬರ್ತಾ ಬರ್ತಾ ರೈತರ ಸಂಖ್ಯೆ ಕಡಿಮೆ ಆಗುತ್ತಿದೆ. ಈಗ ರೈತನ ಮಕ್ಕಳು ದೊಡ್ಡ ದೊಡ್ಡ ಊರಿನಲ್ಲಿ ವೈದ್ಯರು, ಇಂಜಿನಿಯರ್ ಆಗಬೇಕು ಅಂತ ಅಂದುಕೊಳ್ಳುತ್ತಿದ್ದಾರೆ. ಆದರೆ ಈಗ ತಂತ್ರಜ್ಞಾನ ಅಳವಡಿಸಿಕೊಂಡು ಮಾನವ ಸಂಪನ್ಮೂಲ ಕಡಿಮೆ ಆಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಎಲ್ಲ ತಿಳಿದುಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದರು.
ಈ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ನ್ಯೂಸ್ ಫಸ್ಟ್ ನ ಎಂ.ಡಿ ಎಸ್ ರವಿಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಹೆಚ್.ಡಿ.ಕೋಳೆಕರ್, ಸಾಯಿಲ್ ಸೈನ್ಯ ಅಗ್ರಿಕಲ್ಚರಲ್ ಕೆಮಿಸ್ಟ್ರಿ ಕೃಷಿ ವಿವಿ, ಜಿಕೆವಿಕೆ ಬೆಂಗಳೂರಿನ ಪ್ರೊಫೆಸರ್ ಆದ ಡಾ.ಚನ್ನಕೇಶವ ಎಸ್, ಧಾರವಾಡ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚನ್ನಪ್ಪ ಅಂಗಡಿ, ಬೆಂಗಳೂರಿನ ಸಾಯಿಲ್ ಟ್ರಸ್ಟ್ ಮುಖ್ಯಸ್ಥರಾದ ಪಿ.ಶ್ರೀನಿವಾಸ್, ಮತ್ತಿಕೊಪ್ಪ ಸಾಯಿಲ್ ಸೈನ್ಸ್ ನ ಎಸ್.ಎಂ.ವಾರದ ಸೇರಿದಂತೆ ರೈತರು ಉಪಸ್ಥಿತರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ