/newsfirstlive-kannada/media/media_files/2025/09/19/bommaiah_jagadeesh_shettar-2025-09-19-22-24-23.jpg)
ಬೆಳಗಾವಿ: ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಗೊಂದಲ ಏರ್ಪಟ್ಟಿದ್ದು ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶದ ವೇದಿಕೆ ಮೇಲೆ ಮಹಾರಾಷ್ಟ್ರದ ಶಿವಸೇನೆ ಸಂಘಟನೆಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಮನೋಹರ್ ದೊಂಡೆ ಭಾಷಣ ಮಾಡುತ್ತಿದ್ದರು. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸುವುದು ಬೇಡ. ವೀರಶೈವ ಲಿಂಗಾಯತ ಎಂದು ಬೆರೆಸುವಂತೆ ಕರೆ ನೀಡಿದರು. ಇದಕ್ಕೆ ವೇದಿಕೆ ಮೇಲೆಯೇ ಎದ್ದು ನಿಂತು ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಾನ ಕಾಪಾಡಿದ ಸಂಜು.. ಒಮಾನ್ ವಿರುದ್ಧ ಬ್ಯಾಟಿಂಗ್​ಗೆ ಕಷ್ಟ ಪಟ್ಟ ಟೀಮ್ ಇಂಡಿಯಾ, ಟಾರ್ಗೆಟ್ ಎಷ್ಟು?
ಇದು ಅಲ್ಲದೇ ಮನೋಹರ್ ದೊಂಡೆ ತಮ್ಮ ಭಾಷಣದಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಹೆಸರು ಪ್ರಸ್ತಾಪ ಮಾಡಿದರು. ಹಿಂದುತ್ವ ಪ್ರತಿಪಾದಿಸುವ ಅಮಿತ್ ಶಾ ಅವರ ಧರ್ಮವೂ ಕೂಡ ಬೇರೆ ಎಂದು ಉಲ್ಲೇಖ ಮಾಡಿದ್ದರು. ಇದರಿಂದ ಗರಂ ಆದ ಇಬ್ಬರು ಮಾಜಿ ಸಿಎಂಗಳು ಮಾತನಾಡುವಾಗ ನಮಗೆ ಶಿಷ್ಟಚಾರ ಹೇಳಿದ್ರಿ. ಈಗ ಶಿಷ್ಟಚಾರ ಉಲ್ಲಂಘನೆ ಆಗಿದೆ, ಎಲ್ಲಿ ಹೋಗಿದೆ ಎಂದು ಮಹಾರಾಷ್ಟ್ರದ ಶಿವಸೇನೆ ಮುಖಂಡನ ಮಾತಿಗೆ ಬಸವರಾಜ ಬೊಮ್ಮಾಯಿ ಬೇಸರಗೊಂಡರು.
ಮಾತನಾಡಲು ಆರಂಭಿಸಿದರೆ ನಾವು ಇದಕ್ಕಿಂತ ಹೆಚ್ಚು ಮಾತನಾಡುತ್ತೇವೆ ಎಂದು ಹೇಳುತ್ತ ವೇದಿಕೆಯಿಂದ ಎದ್ದು ಹೊರಡಲು ಉಭಯ ನಾಯಕರು ಮುಂದಾಗಿದ್ದರು. ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಇಬ್ಬರು ವೇದಿಕೆ ಮೇಲೆಯೇ ಎದ್ದು ಆಕ್ರೋಶ ಹೊರ ಹಾಕಿದರು. ಆದರೆ ಈ ವೇಳೆ ಮಧ್ಯೆ ಪ್ರವೇಶಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹಿರಿಯ ನಾಯಕರನ್ನು ಸಮಾಧಾನ ಪಡಿಸಿದರು. ಮುಂದೆ ಇಂತಹ ತಪ್ಪುಗಳು ಆಗದಂತೆ ದಿಂಗಾಲೇಶ್ವರ ಶ್ರೀ ಅವರು ಭರವಸೆ ನೀಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ