/newsfirstlive-kannada/media/media_files/2025/10/18/kruthika-reddy-2025-10-18-08-54-32.jpg)
ಹೆತ್ತು ಹೊತ್ತು ಸಾಕಿದ ಮಕ್ಕಳು ಇನ್ಯಾರದೋ ಮಸಲತ್ತಿಗೆ ಬಲಿಯಾದ್ರೆ ಆ ನೋವು ಎಂತದ್ದು ಅನ್ನೋದನ್ನ ಮೃತ ಕೃತಿಕಾ ರೆಡ್ಡಿ ತಂದೆ-ತಾಯಿ ಬಿಚ್ಚಿಟ್ಟಿದ್ದಾರೆ. ಅಳಿಯನ ರೂಪದಲ್ಲಿ ಕುಟುಂಬ ಸೇರಿದ ಯಮಕಿಂಕರ ಮಹೇಂದ್ರ ರೆಡ್ಡಿ ಮಾಡಿದ ಮೋಸವನ್ನ ನೆನೆದು ಬೇಸರಗೊಂಡಿದ್ದಾರೆ. ಈ ಮಧ್ಯೆ ಕೃತಿಕಾನ ಕೊಂದಿದ್ದು ಯಾಕೆ ಅನ್ನೋ ಸತ್ಯವನ್ನ ಪೊಲೀಸರ ಮುಂದೆ ಮಹೇಂದ್ರ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: ಬಿಗ್​ಬಾಸ್ ಮನೆಗೆ ವೈಲ್ಡ್ ಕಾರ್ಡ್​ ಎಂಟ್ರಿ.. ಯಾಱರು ಬರ್ತಿದ್ದಾರೆ..?
ಕೃತಿಕಾ ರೆಡ್ಡಿ.. ಇವತ್ತು ಈಕೆ ಈ ಭೂಮಿ ಮೇಲೆ ಇಲ್ಲ.. ಏಳೇಳು ಜನ್ಮದಲ್ಲೂ ಜೊತೆಯಾಗಿರ್ತೀನಿ ಅಂತ ಸಪ್ತಪದಿ ತುಳಿದವ ಮಾಡಿದ ಮೋಸಕ್ಕೆ ಬಲಿಯಾಗಿ ಆಕೆ ಹೆತ್ತವರಿಗೆ ಬರೀ ನೆನಪಾಗಿ ಉಳಿದಿದ್ದಾಳೆ. ಪೊಲೀಸರ ಮುಂದೆ ನವಟಂಕಿ ನಾಟಕವಾಡಿದ್ದ ಮೋಸಗಾರ ಮಹೇಂದ್ರ ಕೊನೆಗೂ ಕೃತಿಕಾ ಕೊಲೆಗೆ ಕಾರಣವೇನು ಅನ್ನೋ ಸತ್ಯ ಬಾಯ್ಬಿಟ್ಟಿದ್ದಾನೆ. ಪೊಲೀಸರ ವಿಚಾರಣೆಯಲ್ಲಿ ಕೃತಿಕಾಗೆ ಅನಸ್ತೇಷಿಯಾ ಕೊಟ್ಟಿದ್ದು ನಾನೆ ಅಂತ ಮಹೇಂದ್ರ ಒಪ್ಪಿಕೊಂಡಿದ್ದಾನಂತೆ.
ಮಹೇಂದ್ರನ ರಿವೇಂಜ್​!?
ನನಗೆ ಕೃತಿಕಾಳಂತ ರೋಗಿಷ್ಟೆಯನ್ನ ಮದುವೆ ಮಾಡಿದ್ರು ಅದಕ್ಕೆ ರಿವೆಂಜ್ ತೀರಿಸಿಕೊಂಡೆ ಅಂತ ಹೇಳಿದ್ದಾನಂತೆ. ಕೃತ್ತಿಕಾಳ ಪೋಷಕರು ನನಗೆ ವಂಚನೆ ಮಾಡಿದ್ರು, ತಾನು ಒಂದೊಳ್ಳೆ ಜೀವನದ ಕನಸು ಕಂಡಿದ್ದೆ.. ಆದ್ರೆ ಒಬ್ಬ ರೋಗಿಷ್ಟೆಯನ್ನ ಮದುವೆ ಮಾಡ್ಸಿದ್ರು.. ಅವಳು ಏನೇ ತಿಂದರೂ ಕುಡಿದರೂ ವಾಂತಿ ಮಾಡ್ತಿದ್ಲು.. ಪಾರ್ಟಿ ಸಂಧರ್ಭದಲ್ಲಿ ಕೂಡ ಇದೇ ರೀತಿ ಮಾಡಿ ಮುಜುಗರ ಮಾಡ್ತಿದ್ಲು.. ಸ್ನೇಹಿತರು ಕೂಡ ಆಗಾಗ ಮೂದಲಿಸುತ್ತಿದ್ರು.. ಸ್ನೇಹಿತರು ನೀನು ಚೆನ್ನಾಗಿದ್ಯ ನಿಂಗೆ ಯಾಕೆ ರೋಗ ಬಂದಿರೋ ಹೆಂಡತಿ ಅಂತ ತಮಾಷೆ ಮಾಡ್ತಿದ್ರು.. ಅದ್ಧೂರಿಯಾಗಿ ಖರ್ಚು ಮಾಡಿ ಮದುವೆ ಮಾಡ್ಸಿದ್ದ ಮೇಲಾದ್ರೂ ಗೊತ್ತಾಗಬೇಕಿತ್ತು.. ಪತ್ನಿಯಿಂದ ದೂರ ಆಗಬೇಕು ಹಾಗೂ ನನಗೆ ಸಿಗಬೇಕಾದ ಪ್ರೀತಿಗಾಗಿ ತಾನು ಬೇರೆಯವರನ್ನ ಪ್ರೀತಿ ಮಾಡಿದ್ದೆ.. ನಂತರ ಕೃತ್ತಿಕಾ ಸಾವನ್ನಪ್ಪಿದರೆ ಯುವತಿಯ ಜೊತೆ ಇರಬಹುದು ಎಂಬ ಕಾರಣಕ್ಕೆ ಹತ್ಯೆಗೆ ಪ್ಲಾನ್ ರೂಪಿಸಿದ್ದೆ ಎಂದು ಮಹೇಂದ್ರ ಹೇಳಿದ್ದಾನಂತೆ.. ಇನ್ನೂ ಮಹೇಂದ್ರ ಪತ್ನಿ ಸತ್ತು ಕೆಲವೇ ದಿನಗಳಲ್ಲಿ ಗೋವಾದ ಬೀಚ್​ನಲ್ಲಿ ಜಾಲಿ ಮಾಡಿದ್ದ.. ಎಲ್ಲ ಆಗೋಯ್ತು ಇನ್ಮೇಲ್ ಆರಾಮಾಗ್ ಇರೋಣ ಅಂತ ಪ್ಲಾನ್ ಮಾಡಿದ್ದ.. ಕೃತಿಕಾಳನ್ನ ಕೊಲೆ ಮಾಡಿ ಬೇರೆ ಮದುವೆಯಾಗಿ ವಿದೇಶಕ್ಕೆ ಹಾರಲು ಮಹೇಂದ್ರ ಪ್ಲಾನ್ ಮಾಡಿದ್ನಂತೆ.. ಸದ್ಯ ಮಹೇಂದ್ರನ ಮದುವೆ ಆಗೋಕೆ ರೆಡಿಯಾಗಿದ್ದ ಆ ಯುವತಿ ಯಾರು ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಇದನ್ನೂ ಓದಿ:ದೀಪಾವಳಿ.. ಪಟಾಕಿ ಸಿಡಿಸುವಾಗ ಈ 7 ವಿಷಯ ಮರೆಯಬೇಡಿ.. ಇಲ್ಲದಿದ್ದರೆ..
ರಾಕ್ಷಸ ಅಳಿಯ ಎಂದ ಕೃತಿಕಾ ತಾಯಿ
ಮಗಳನ್ನ ಕಳೆದುಕೊಂಡು ನೋವಿನಲ್ಲೇ ದಿನಕಳೆಯುತ್ತಿರೋ ಡಾ. ಕೃತಿಕಾ ರೆಡ್ಡಿ ಪೋಷಕರು ಇವತ್ತು ಮಗಳ ಸಾವಿನ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ರು. ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ ಕೃತಿಕಾ ತಾಯಿ ಸೌಜನ್ಯಾ, ಕೃತಿಕಾಗೆ ಆರೋಗ್ಯ ಸಮಸ್ಯೆ ಇದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದ ಮಹೇಂದ್ರನ ಮುಖವಾಡವನ್ನ ಕಳಚಿಟ್ರು.. ಮಹೇಂದ್ರನ ಸುಳ್ಳು ಆರೋಪಗಳನ್ನ ಮಾಡಿ ದಿಕ್ಕು ತಪ್ಪಿಸುತ್ತಿದ್ದಾನೆ. ಆತ ರಾಕ್ಷಸ ಅಂತ ಕೃತಿಕಾ ತಾಯಿ ಅಸಮಾಧಾನ ಹೊರಹಾಕಿದ್ರು.
ಒಟ್ನಲ್ಲಿ ಕಣ್ಣನ್ನ ರೆಪ್ಪೆ ಕಾಪಾಡುವ ಹಾಗೆ 27 ವರ್ಷ ಕೃತಿಕಾ ರೆಡ್ಡಿಯನ್ನ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ಹೆತ್ತವರಿಗಾದ ಅನ್ಯಾಯ ನಿಜಕ್ಕೂ ಬೇಸರ ತರಿಸುವಂತದ್ದು.. ಈ ಕುಟುಂಬದ ಅದೆಷ್ಟೋ ಕನಸುಗಳಿಗೆ ಕೊಳ್ಳಿ ಇಟ್ಟ ಮಹೇಂದ್ರ ರೆಡ್ಡಿಗೆ ಕಠಿಣ ಶಿಕ್ಷೆ ಕೊಡಬೇಕು ಅನ್ನೋದಷ್ಟೇ ಸದ್ಯಕ್ಕೆ ಕೃತಿಕಾ ಪೋಷಕರಿಗೆ ಇರೋ ಒತ್ತಾಸೆ.
ಇದನ್ನೂ ಓದಿ: ದೀಪಾವಳಿ.. ಪಟಾಕಿ ಸಿಡಿಸುವಾಗ ಈ 7 ವಿಷಯ ಮರೆಯಬೇಡಿ.. ಇಲ್ಲದಿದ್ದರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ