/newsfirstlive-kannada/media/media_files/2025/09/10/ahoratra-2025-09-10-13-52-20.jpg)
ಬೆಂಗಳೂರು: ಅಹೋರಾತ್ರ ಅಲಿಯಾಸ್ ನಿತೇಶ್ ಕೃಷ್ಣ ಪ್ರಸಾದ್ ಅವರನ್ನು ಕೋರ್ಟ್ ಸಿಬ್ಬಂದಿ ವಶಕ್ಕೆ ಪಡೆದರು. ಕೋರ್ಟ್ ತೀರ್ಪು ಹಿನ್ನಲೆ ವಶಕ್ಕೆ ಪಡೆದು ನ್ಯಾಯಾಧೀಶ ಮುಂದೆ ಹಾಜರು ಪಡಿಸಲಾಯಿತು.
ಏನಿದು ಪ್ರಕರಣ..?
ಅಹೋರಾತ್ರ ವಿರುದ್ಧ ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರನ್ನ ನಿಂದಿಸಿದ ಆರೋಪ ಕೇಳಿಬಂದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 11ನೇ ಸೆಷನ್ಸ್ ಕೋರ್ಟ್, ಆಗಸ್ಟ್ 30 ರಂದು 15 ದಿನ ಜೈಲು ಶಿಕ್ಷೆ ವಿಧಿಸಿತ್ತು. ನ್ಯಾಯಾಧೀಶ ಗಣಪತಿ ಗುರುಸಿದ್ಧ ಬದಾಮಿ ಅವರು ತೀರ್ಪು ನೀಡಿದ್ದರು.
ಅಂತೆಯೇ ಅಹೋರಾತ್ರ ಕೋರ್ಟ್ಗೆ ಹಾಜರಾಗಬೇಕಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇವತ್ತು ಕೋರ್ಟ್ ಸಿಬ್ಬಂದಿ ವಶಕ್ಕೆ ಪಡೆದು ನ್ಯಾಯಾಧೀಶ ಮುಂದೆ ಒಪ್ಪಿಸಿದರು. ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಸಿದ್ಧತೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ