/newsfirstlive-kannada/media/media_files/2025/10/06/keerthana-2025-10-06-09-03-59.jpg)
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮರ ಬಿದ್ದು ಯುವತಿ ಜೀವ ಕಳೆದುಕೊಂಡಿದ್ದಾಳೆ. 24 ವರ್ಷದ ಕೀರ್ತನಾ ಮೃತ ದುರ್ದೈವಿ.
ಸೋಲದೇವನಹಳ್ಳಿಯಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಮರ ಮುರಿದು ಬಿದ್ದಿದೆ. ಮರದ ಕೊಂಬೆಗಳು ಬಡಿದ ಹೊಡೆತಕ್ಕೆ ಕೀರ್ತನಾ ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನು, ಅದೃಷ್ಟವಶಾತ್ ಆಕೆಯ ಜೊತೆಗಿದ್ದ ಸ್ನೇಹಿತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೀರ್ತನಾ ಅವರ ಸ್ನೇಹಿತೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದು ಬೈಕ್​ನಲ್ಲಿದ್ದ ಭಾಸ್ಕರ್​ ಅನ್ನೋರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ನಿನ್ನೆ ರಾತ್ರಿ 7 ಗಂಟೆಯ ಸುಮಾರಿಗೆ ದುರಂತ ಸಂಭವಿಸಿದೆ. ಯುವತಿಯ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಸೋಲದೇವನಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ‘ಬೇಜಾರು ಏನೆಂದರೆ..’ ಮನೆಯಿಂದ ಆಚೆ ಬಂದು ಕಿಚ್ಚನ ಎದುರು RJ ಅಮಿತ್ ಮಾತು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ