/newsfirstlive-kannada/media/media_files/2025/09/15/bmtc-bus-2025-09-15-08-47-05.jpg)
ಬೆಂಗಳೂರು: ರಸ್ತೆಯಲ್ಲೇ ಧಗಧಗನೆ ಬಿಎಂಟಿಸಿ ಬಸ್ ಹೊತ್ತಿ ಉರಿದಿದೆ. ಬೆಂಗಳೂರಿನ HAL ಸಿಗ್ನಲ್ ಬಳಿ ಚಲಿಸುತ್ತಿದ್ದಾಗ ಅನಾಹುತ ಸಂಭವಿಸಿದೆ.
ಬಸ್ಸಿನಲ್ಲಿ ಒಟ್ಟು 62 ಪ್ರಯಾಣಿಕರಿದ್ದು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಡ್ರೈವರ್ ಅಲರ್ಟ್ ಆಗಿ ಬಸ್ ನಿಲ್ಲಿಸಿದ್ದಾರೆ. ದುರಾದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಪ್ರಯಾಣಿಕರೆಲ್ಲ ಕೂಡಲೇ ಕೆಳಗೆ ಇಳಿದು ಜೀವ ಉಳಿಸಿಕೊಂಡಿದ್ದಾರೆ.
ಇನ್ನು ಬೆಂಕಿಯ ಕೆನ್ನಾಲಿಗೆಗೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಆರಂಭದಲ್ಲಿ ಯಾವುದೇ ಪ್ರಯೋಜನ ಆಗಿಲ್ಲ. ಸದ್ಯ ಬೆಂಕಿಯ ಕೆನ್ನಾಲಿಗೆಯನ್ನ ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿಯ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಬಿಎಂಟಿಸಿ ಹಿರಿಯ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ:62 ಪ್ರಯಾಣಿಕರಿದ್ದ BMTC ಬಸ್ ಧಗಧಗ.. ಸಿಗ್ನಲ್ನಲ್ಲಿ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ