/newsfirstlive-kannada/media/media_files/2025/10/25/pradush-2025-10-25-19-57-10.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ A-14 ಪ್ರದೋಷ್​​ಗೆ 20 ದಿನ ಮಧ್ಯಂತರ ಜಾಮೀನು ಸಿಕ್ಕಿದೆ. ಇಂದು ಸಂಜೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಯಾಕೆ..?
ಅನಾರೋಗ್ಯದಿಂದ ಬಳಲುತ್ತಿದ್ದ ಪ್ರದೋಷ್ ತಂದೆ ಸುಬ್ಬರಾವ್ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರ ಹಾಗೂ ಇತರ ಕಾರ್ಯಗಳನ್ನು ಮುಗಿಸಲು 20 ದಿನ ಮಧ್ಯಾಂತರ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ಕೋರಿ ಪ್ರದೂಷ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ.
ಪ್ರದೋಷ್ ಪರವಾಗಿ ಹಿರಿಯ ವಕೀಲ ದಿವಾಕರ್ ವಾದ ಮಂಡಿಸಿದ್ದರು. ವಾದ, ಪ್ರತಿವಾದ ಆಲಿಸಿದ 57 ನೇ ಸಿಸಿಹೆಚ್ ಕೋರ್ಟ್ ತೀರ್ಪು ಪ್ರಕಟ ಮಾಡಿದೆ. ನ್ಯಾಯಾಧೀಶ ಐಪಿ ನಾಯಕ್ ಅವರು ತೀರ್ಪು ಪ್ರಕಟ ಮಾಡಿದ್ದಾರೆ.
ಇದನ್ನೂ ಓದಿ: ನಟ ದರ್ಶನ್‌ಗೆ ಜೈಲಿನಲ್ಲಿ ಹಾಸಿಗೆ, ತಲೆದಿಂಬು ನೀಡದ ಬಗ್ಗೆ ಕೋರ್ಟ್ ವಿಚಾರಣೆ : ವಾದ-ಪ್ರತಿವಾದ ಹೇಗಿತ್ತು? ಏನೇನಾಯ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us