ಇತ್ತೀಚೆಗೆ ಕಳ್ಳರದ್ದೂ ಕೋಟಿ ಕೋಟಿ ಲೆಕ್ಕ.. ಬೆಂಗಳೂರಲ್ಲಿ 18 ಕೋಟಿ ಚಿನ್ನಾಭರಣ ದೋಚಿದ ಗಂಡ-ಹೆಂಡ್ತಿ

ಮನೆಗೆಲಸಕ್ಕೆ ಬಂದವರನ್ನು ಅತಿಯಾಗಿ ನಂಬುವ ಮುನ್ನ ಎಚ್ಚರ! ಕೆಲಸಕ್ಕೆ ಸೇರಿದ ಕೇವಲ 20 ದಿನದಲ್ಲೇ ದಂಪತಿಯೊಂದು ಮನೆ ಮಾಲೀಕನಿಗೆ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯ ಯಮಲೂರಿನಲ್ಲಿ ನಡೆದಿದೆ.

author-image
Ganesh Kerekuli
House theft
Advertisment

ಬೆಂಗಳೂರು: ಮನೆಗೆಲಸಕ್ಕೆ ಬಂದವರನ್ನು ಅತಿಯಾಗಿ ನಂಬುವ ಮುನ್ನ ಎಚ್ಚರ! ಕೆಲಸಕ್ಕೆ ಸೇರಿದ ಕೇವಲ 20 ದಿನದಲ್ಲೇ ದಂಪತಿಯೊಂದು ಮನೆ ಮಾಲೀಕನಿಗೆ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯ ಯಮಲೂರಿನಲ್ಲಿ ನಡೆದಿದೆ.

ಯಮಲೂರಿನ ಬಿಲ್ಡರ್ ಮನೆಯಲ್ಲಿ ದೈತ್ಯ ಕಳ್ಳತನ

ಯಮಲೂರಿನ ನಿವಾಸಿ, ಖ್ಯಾತ ಬಿಲ್ಡರ್ ಶಿವಕುಮಾರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ದಿನೇಶ್ ಮತ್ತು ಕಮಲಾ ಎಂಬ ದಂಪತಿ ಈ ಕೃತ್ಯದ ಕಿಂಗ್‌ಪಿನ್‌ಗಳು. ಇವರು ಕಳೆದ 20 ದಿನಗಳ ಹಿಂದಷ್ಟೇ ಮನೆಗೆಲಸಕ್ಕೆ ಸೇರಿಕೊಂಡಿದ್ದರು. ಕಮಲಾ ಮನೆಯ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರೆ, ದಿನೇಶ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದ.

ಇದನ್ನೂ ಓದಿ: ‘ದಾದಾ’ ಅಗಲಿಕೆಯಿಂದ ಕಣ್ಣೀರಲ್ಲಿ ಮುಳುಗಿದ ಕುಟುಂಬ.. ಪವಾರ್​ ತುಂಬು ಕುಟುಂಬ ಹೇಗಿದೆ..?

ಏನೆಲ್ಲಾ ಕಳುವಾಗಿದೆ?

ಪ್ರಾಥಮಿಕ ವರದಿಯ ಪ್ರಕಾರ, ಆರೋಪಿಗಳು ಮನೆಯ ಲಾಕರ್ ಒಡೆದು ಈ ಕೆಳಗಿನ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. 
ಚಿನ್ನ ಹಾಗೂ ವಜ್ರ: 11.5 ಕೆಜಿ
ಬೆಳ್ಳಿ: 5 ಕೆಜಿ
ನಗದು: 11.5 ಲಕ್ಷ ರೂಪಾಯಿ
ಒಟ್ಟಾರೆ ಕಳುವಾದ ಸ್ವತ್ತಿನ ಮೌಲ್ಯ ಸುಮಾರು 18 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಪಕ್ಕಾ ಸ್ಕೆಚ್ ಹಾಕಿ ದೋಚಿದ ನೇಪಾಳಿ ಗ್ಯಾಂಗ್..!

ಇದು ಆಕಸ್ಮಿಕವಾಗಿ ನಡೆದ ಕಳ್ಳತನವಲ್ಲ, ಬದಲಾಗಿ ಪಕ್ಕಾ ಪ್ಲಾನ್ ಮಾಡಿ ನಡೆಸಿದ ಕೃತ್ಯ ಎನ್ನಲಾಗಿದೆ. ಶಿವಕುಮಾರ್ ಅವರ ಮನೆಯಲ್ಲಿ ಕಳೆದ 9 ತಿಂಗಳಿನಿಂದ ವಿಕಾಸ್ ಮತ್ತು ಮಾಯಾ ಎಂಬ ದಂಪತಿ ಕೆಲಸಕ್ಕಿದ್ದರು. ಅವರು ಕೆಲಸ ಬಿಟ್ಟು ಹೋಗುವಾಗ ತಮ್ಮ ಬದಲಿಗೆ ದಿನೇಶ್ ಮತ್ತು ಕಮಲಾ ದಂಪತಿಯನ್ನು ಕೆಲಸಕ್ಕೆ ಸೇರಿಸಿದ್ದರು. ಈ 20 ದಿನಗಳಲ್ಲಿ ದಂಪತಿ ಮನೆಯವರ ನಂಬಿಕೆಯನ್ನು ಸಂಪೂರ್ಣವಾಗಿ ಗಳಿಸಿದ್ದರು.

ಕಳ್ಳತನ ನಡೆದಿದ್ದು ಹೇಗೆ?

ಜನವರಿ 25ರಂದು ಬಿಲ್ಡರ್ ಶಿವಕುಮಾರ್ ಅವರು ಸ್ನೇಹಿತರ ಜೊತೆಗೆ ಫಿಲಿಪೈನ್ಸ್ ಪ್ರವಾಸಕ್ಕೆ ತೆರಳಿದ್ದರು. ಅದೇ ಸಮಯದಲ್ಲಿ ಅವರ ಪತ್ನಿ, ಪುತ್ರ ಮತ್ತು ಸೊಸೆ ಸಂಬಂಧಿಕರ ಮನೆಗೆ ಹೋಗಿದ್ದರು. ಮನೆಯಲ್ಲಿ ಒಬ್ಬಾಕೆ ಕೆಲಸದವಳು ಮಾತ್ರ ಇದ್ದಳು.

ಇದನ್ನೂ ಓದಿ: NCP ಹಾಗೂ ಅಜಿತ್ ಪವಾರ್‌ಗೆ ಯಾರು ರಾಜಕೀಯ ಉತ್ತರಾಧಿಕಾರಿ ಆಗ್ತಾರೆ? ಮಹಾರಾಷ್ಟ್ರ ರಾಜಕೀಯದಲ್ಲಿ ಚರ್ಚೆ

House theft (1)

ಸಂಚಿನ ಭಾಗವಾಗಿ ಕಮಲಾ ಆ ಕೆಲಸದವಳನ್ನು "ಹೊರಗೆ ಹೋಗಿ ಬರೋಣ" ಎಂದು ಪುಸಲಾಯಿಸಿ ಕರೆದೊಯ್ದಿದ್ದಾಳೆ. ಈ ಗ್ಯಾಪ್‌ನಲ್ಲಿ ದಿನೇಶ್ ತನ್ನ ಐದಾರು ಮಂದಿ ಸಹಚರರನ್ನು ಮನೆಗೆ ಕರೆಸಿಕೊಂಡಿದ್ದಾನೆ. ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡಬಾರದೆಂದು ಮೊದಲು ಯುಪಿಎಸ್ (UPS) ಆಫ್ ಮಾಡಿದ್ದಾನೆ. ಬಳಿಕ ನೆಲಮಹಡಿ ಮತ್ತು ಮೊದಲ ಮಹಡಿಯ ಬೆಡ್‌ರೂಂನಲ್ಲಿದ್ದ ಲಾಕರ್‌ಗಳನ್ನು ಒಡೆದು ಎಲ್ಲಾ ಚಿನ್ನಾಭರಣಗಳೊಂದಿಗೆ ಎಸ್ಕೇಪ್ ಆಗಿದ್ದಾರೆ.

ಪೊಲೀಸರಿಂದ ತನಿಖೆ ಚುರುಕು

ಮನೆಯವರು ವಾಪಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಮಾರತ್ತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ನೇಪಾಳಿ ಮೂಲದ ದಂಪತಿ ಮತ್ತು ಅವರ ಗ್ಯಾಂಗ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 3.80 ಲಕ್ಷ ರೂಪಾಯಿಗೆ ಏರಿಕೆ, ಚಿನ್ನದ ಬೆಲೆ 10 ಗ್ರಾಂಗೆ 1.65 ಲಕ್ಷ ರೂಪಾಯಿಗೆ ಏರಿಕೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Robbery
Advertisment