‘ದಾದಾ’ ಅಗಲಿಕೆಯಿಂದ ಕಣ್ಣೀರಲ್ಲಿ ಮುಳುಗಿದ ಕುಟುಂಬ.. ಪವಾರ್​ ತುಂಬು ಕುಟುಂಬ ಹೇಗಿದೆ..?

ಮಹಾರಾಷ್ಟ್ರ ರಾಜಕಾರಣದ ಧ್ರುವತಾರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾಗಿರುವುದು ಇಡೀ ದೇಶಕ್ಕೆ ಆಘಾತ ತಂದಿದೆ. ಅಜಿತ್ ಪವಾರ್ ಅವರ ಕುಟುಂಬವು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಸಕ್ರಿಯವಾಗಿತ್ತು. ಅವರ ಕುಟುಂಬದ ಬಗ್ಗೆ ಇಲ್ಲಿದೆ ಮಾಹಿತಿ ಇಲ್ಲಿದೆ.

author-image
Ganesh Kerekuli
Ajit Pawar (10)
Advertisment

ಮಹಾರಾಷ್ಟ್ರ ರಾಜಕಾರಣದ ಧ್ರುವತಾರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾಗಿರುವುದು ಇಡೀ ದೇಶಕ್ಕೆ ಆಘಾತ ತಂದಿದೆ. ಬಾರಾಮತಿಗೆ ತೆರಳುವ ವೇಳೆ ಸಂಭವಿಸಿದ ದುರಂತದಲ್ಲಿ ಅಜಿತ್ ಪವಾರ್ ಜೊತೆ ಪ್ರಯಾಣಿಸುತ್ತಿದ್ದವರೂ ಮೃತಪಟ್ಟಿದ್ದಾರೆ. ತಾಂತ್ರಿಕ ದೋಷದಿಂದಾಗಿ ವಿಮಾನ ಕ್ರ್ಯಾಶ್ ಲ್ಯಾಂಡಿಂಗ್ ಆಗಿ, ಬೆಂಕಿ ಹೊತ್ತಿಕೊಂಡಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ಅಜಿತ್ ಪವಾರ್ ಅವರದ್ದು ತುಂಬು ಕುಟುಂಬ

ಅಜಿತ್ ಪವಾರ್ ಅವರ ಕುಟುಂಬವು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಸಕ್ರಿಯವಾಗಿತ್ತು. ಅವರ ಕುಟುಂಬದ ಬಗ್ಗೆ ಇಲ್ಲಿದೆ ಮಾಹಿತಿ ಇಲ್ಲಿದೆ. 

ಪತ್ನಿ ಸುನೇತ್ರಾ ಪವಾರ್: ಅಜಿತ್ ಪವಾರ್ ಪತ್ನಿ ಸುನೇತ್ರಾ ಕೇವಲ ಗೃಹಿಣಿಯಾಗಿರದೇ ಪವಾರ್​ಗೆ ರಾಜಕೀಯ ಜೀವನದ ದೊಡ್ಡ ಶಕ್ತಿಯಾಗಿದ್ದರು. ಚುನಾವಣಾ ಪ್ರಚಾರ, ರೋಡ್ ಶೋ ಮತ್ತು ಱಲಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಪುತ್ರರು: ಅಜಿತ್ ಅವರಿಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ಪಾರ್ಥ್ ಪವಾರ್, ಇವರು ಈಗಾಗಲೇ ರಾಜಕೀಯಕ್ಕೆ ಪ್ರವೇಶಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕಿರಿಯ ಮಗ ಜಯ್ ಪವಾರ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ತಂದೆಯ ರಾಜಕೀಯ ಮತ್ತು ವ್ಯವಹಾರದ ಬೆನ್ನೆಲುಬಾಗಿದ್ದರು.

ಸೊಸೆ: ಜಯ್ ಪವಾರ್ ಖ್ಯಾತ ಉದ್ಯಮಿಯ ಪುತ್ರಿ ಋತುಜಾ ಪಾಟೀಲ್​ರನ್ನು ವಿವಾಹ ಆಗಿದ್ದಾರೆ.
ಸಹೋದರ-ಸಹೋದರಿ: ಅಜಿತ್ ಪವಾರ್ ಅವರ ಅಣ್ಣ ಶ್ರೀನಿವಾಸ್ ಪವಾರ್. ಇವರು ದೊಡ್ಡ  ಉದ್ಯಮಿ. ಸಹೋದರಿ ವಿಜಯಾ ಪಾಟೀಲ್ ಕೂಡ ಕುಟುಂಬದ ಪ್ರಮುಖ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ದಟ್ಟ ಮಂಜು, ಕುಸಿದ ಗೋಚರತೆ ಮಟ್ಟದ ಕಾರಣದಿಂದ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ ಸಾಧ್ಯತೆ

Ajit Pawar (9)

ಶರದ್ ಪವಾರ್ ಮಾರ್ಗದರ್ಶನ

ಅಜಿತ್ ಪವಾರ್ ಅವರ ರಾಜಕೀಯ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟಿದ್ದು ಚಿಕ್ಕಪ್ಪ. ಅವರು ಬೇರೆ ಯಾರೂ ಅಲ್ಲ, ಎನ್‌ಸಿಪಿ ಸ್ಥಾಪಕ ಶರದ್ ಪವಾರ್. ಅಜಿತ್, ಶರದ್ ಪವಾರ್ ಅವರನ್ನೇ ತಮ್ಮ ರಾಜಕೀಯ ಗುರು ಎಂದು ಭಾವಿಸಿದ್ದರು. ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಅಜಿತ್​ಗೆ ಸೋದರ ಸಂಬಂಧಿಯಾಗಿದ್ದಾರೆ. 

ಬಾಲ್ಯ ಮತ್ತು ಸಂಘರ್ಷದ ದಿನಗಳು..


ಜುಲೈ 22, 1959 ರಂದು ಜನಿಸಿದ ಅಜಿತ್ ಪವಾರ್ ಬಾಲ್ಯ ಅಷ್ಟು ಸುಲಭವಾಗಿರಲಿಲ್ಲ. ತಂದೆ ಅನಂತರಾವ್ ಪವಾರ್ ಮುಂಬೈನ ‘ರಾಜಕಮಲ್ ಸ್ಟುಡಿಯೋ’ದಲ್ಲಿ ಕೆಲಸ ಮಾಡುತ್ತಿದ್ದರು. ಅಜಿತ್​ಗೆ ಕೇವಲ 18 ವರ್ಷವಾಗಿದ್ದಾಗ ತಂದೆ ನಿಧನರಾದರು. ಈ ಕಾರಣದಿಂದ ಅವರು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಕುಟುಂಬದ ಜವಾಬ್ದಾರಿ ಹೊತ್ತರು. 

ಇದನ್ನೂ ಓದಿ: 124 ಕೋಟಿ ಆಸ್ತಿಯ ಒಡೆಯ ‘ದಾದಾ’ ಅಜಿತ್ ಪವಾರ್.. LIC ಇಲ್ಲದಿದ್ದರೂ, ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಕೋಟಿ ಕೋಟಿ..!

Ajit Pawar (8)

ರಾಜಕೀಯ ಪಯಣದ ಆರಂಭ

1982ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮಂಡಳಿ ಸದಸ್ಯರಾಗುವ ಮೂಲಕ ಅಜಿತ್ ಪವಾರ್ ರಾಜಕೀಯ ಜೀವನ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಬೆಳೆದರು. ಆರು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರು, ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನಿರ್ಗಮನದ ನೋವು

ಅಜಿತ್ ಪವಾರ್ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಮಾಧ್ಯಮಗಳಿಂದ ದೂರವಿಡಲು ಇಷ್ಟಪಡುತ್ತಿದ್ದರು. ಆದರೆ ಕುಟುಂಬದವರೊಂದಿಗೆ ಸಮಯ ಕಳೆಯುವುದನ್ನು ಅವರು ಎಂದಿಗೂ ಮರೆಯುತ್ತಿರಲಿಲ್ಲ. ಅವರ ನಿಧನವು ಮಹಾರಾಷ್ಟ್ರ ರಾಜಕಾರಣಕ್ಕೆ ಮಾತ್ರವಲ್ಲದೆ, ಪವಾರ್ ಕುಟುಂಬಕ್ಕೂ ತುಂಬಲಾರದ ನಷ್ಟವಾಗಿದೆ. ‘ಅಜಿತ್ ದಾದಾ’ ಈ ಹಠಾತ್ ನಿರ್ಗಮನವು ಮಹಾರಾಷ್ಟ್ರದ ಇತಿಹಾಸದಲ್ಲಿ ಒಂದು ಕರಾಳ ದಿನವಾಗಿ ಉಳಿಯಲಿದೆ.

ಇದನ್ನೂ ಓದಿ:Ajit Pawar Death News Live: ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

plane crash Ajit Pawar Baramati
Advertisment