Advertisment

ಲವ್​ ಜಿಹಾದ್ ಆರೋಪ ಪ್ರಕರಣ​​.. ಬೆಂಗಳೂರಲ್ಲಿ ಆರೋಪಿ ಅರೆಸ್ಟ್

‘ಲವ್ ಜಿಹಾದ್’ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಮೊಹಮ್ಮದ್ ಇಶಾಕ್ ಬಂಧಿತ ಆರೋಪಿ. ಆರೋಪಿ ಇಶಾಕ್ ಹಾಗೂ ಆತನ ಬಾವ ಸಂತ್ರಸ್ಥೆಗೆ ಪದೇ ಪದೇ ಮತಾಂತರಕ್ಕೆ ಒತ್ತಾಯ ಮಾಡಿರುವ ಆರೋಪ ಕೇಳಿಬಂದಿದೆ

author-image
Bhimappa
love jihad case
Advertisment

ಬೆಂಗಳೂರು: ‘ಲವ್ ಜಿಹಾದ್’ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಮೊಹಮ್ಮದ್ ಇಶಾಕ್ ಬಂಧಿತ ಆರೋಪಿ. 

Advertisment

ಆರೋಪ ಏನು..?

2024ರ ಅಕ್ಟೋಬರ್​​ 17ರಂದು ಯುವತಿಗೆ ಮೊಹಮ್ಮದ್ ಇಶಾಕ್‌ನ ಪರಿಚಯವಾಗಿತ್ತು. ಈ ಪರಿಚಯ ಸ್ನೇಹ ಮತ್ತು ಪ್ರೀತಿಯಾಗಿ ಬೆಳೆದಿತ್ತು. 2024ರ ಅಕ್ಟೋಬರ್​​ 30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ನಂತರ ಯುವತಿ ಜೊತೆ ಇಶಾಕ್ ಸಲುಗೆ ಬೆಳೆಸಿಕೊಂಡಿದ್ದ. ಆರೋಪಿ ಇಶಾಕ್, ಮದುವೆಯಾಗುವುದಾಗಿ ಸಂತ್ರಸ್ಥೆಗೆ ನಂಬಿಸಿದ್ದ. ಬಳಿಕ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. 

ಇಷ್ಟೆಲ್ಲ ಆದಮೇಲೆ ಆಕೆಯನ್ನ ಮತಾಂತರ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದ್ದು, ಆದರೆ ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಅಲ್ಲದೇ, 2025ರ ಸೆ.14ರಂದು ಮುಸ್ಲಿಂ ಯುವತಿಯೊಬ್ಬರ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ತಿಳಿದು ಪ್ರಶ್ನೆ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. 

ಇನ್ನು, ಆರೋಪಿ ಇಶಾಕ್ ಹಾಗೂ ಆತನ ಬಾವ ಸಂತ್ರಸ್ಥೆಗೆ ಪದೇ ಪದೇ ಮತಾಂತರಕ್ಕೆ ಒತ್ತಾಯ ಮಾಡಿರುವ ಆರೋಪ ಕೇಳಿಬಂದಿದೆ. ಸಂತ್ರಸ್ಥೆ ಜೊತೆ ಒಪ್ಪಿತ ಲೈಂಗಿಕ ಸಂಪರ್ಕ ಬೆಳಸಿ, ಮೋಸ ಮಾಡಲು ಯತ್ನಿಸಿದ್ದಾನೆ. ಈ ಕುರಿತು ಸಂತ್ರಸ್ಥೆ ಹೆಚ್​ಎಸ್​ಆರ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕೃತ್ಯವು ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ್ದರಿಂದ, ಅಮೃತಹಳ್ಳಿ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿದೆ. 

Advertisment

ಇದನ್ನೂ ಓದಿ:ಅಯ್ಯೋ ದುರ್ವಿಧಿಯೇ.. ಹೆಂಡತಿ ಜೊತೆ ಗಲಾಟೆ, ಮಲತಂದೆಯಿಂದಲೇ ಮಗಳ ಹತ್ಯೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Bangalore
Advertisment
Advertisment
Advertisment