ಖಾಸಗಿ ಸ್ಲೀಪರ್​​ ಬಸ್​​ನಲ್ಲಿ ಒಬ್ಬ ಕಾಮುಕ ಡ್ರೈವರ್​.. ಅಪ್ರಾಪ್ತೆಗೆ ಕಿರುಕುಳ ಕೊಟ್ಟವನಿಗೆ ಬಿತ್ತು ಬಿಸಿಬಿಸಿ ಕಜ್ಜಾಯ..!

ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಖಾಸಗಿ ಸ್ಲೀಪರ್​ ಬಸ್​​ನಲ್ಲಿ ಪ್ರಕರಣ ನಡೆದಿದ್ದು, ಬೆಳಗ್ಗೆ ಬೆಂಗಳೂರಿಗೆ ಬರುತ್ತಿದ್ದಂತೆಯೇ ಕಾಮುಕನಿಗೆ ಬಿಸಿಬಿಸಿ ಕಜ್ಜಾಯ ಸಿಕ್ಕಿದೆ.

author-image
Ganesh Kerekuli
bengaluru thalita
Advertisment

ಬೆಂಗಳೂರು: ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್​​ ಬಸ್​ನಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪ ಕೇಳಿಬಂದಿದೆ. ಅಲ್ಲದೇ, ಬೆಂಗಳೂರಿಗೆ ಬಸ್ ಬರುತ್ತಿದ್ದಂತೆಯೇ ಕಿರುಕುಳ ನೀಡಿದ್ದಾನೆ ಎನ್ನಲಾಗಿರುವ ವ್ಯಕ್ತಿಗೆ ಅಪ್ರಾಪ್ತೆಯ ಅಣ್ಣ ಹಾಗೂ ತಾಯಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.  

ಆಗಿದ್ದೇನು?

ಹೈದರಾಬಾದ್​​ನಿಂದ ಕ್ರಾಸ್ ಇಂಡಿಯಾ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ 15 ವರ್ಷದ ಅಪ್ರಾಪ್ತ ಯುವತಿ ಬೆಂಗಳೂರಿಗೆ ಬರುತ್ತಿದ್ದಳು. ಈ ವೇಳೆ ಮೊಬೈಲ್ ಚಾರ್ಜ್​ ಮಾಡಲು ಡ್ರೈವರ್​​ಗೆ ಫೋನ್ ನೀಡಿದ್ದಳು. ಸ್ವಲ್ಪ ಸಮಯದ ಬಳಿಕ ಮೊಬೈಲ್​ ವಾಪಸ್ ಕೇಳಿದಾಗ ಸ್ಪೇರ್ ಡ್ರೈವರ್ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.

ಸ್ಪೇರ್ ಡ್ರೈವರ್ ಆರೀಫ್.. ನೀನು ನನಗೆ ಕಿಸ್ ಕೊಟ್ಟರೆ ಮೊಬೈಲ್ ಕೊಡ್ತೀನಿ ಎಂದಿದ್ದಾನೆ. ಅಲ್ಲದೇ ಯುವತಿ ಮಲಗಿದ್ದ ಸೀಟ್​ಗೆ ಬಂದು ಕಿರುಕುಳ ನೀಡಿದ್ದಾನೆ. ಇದರಿಂದ ಗಾಬರಿಯಾದ ಅಪ್ರಾಪ್ತೆ, ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. 

ಬೆಳಗ್ಗೆ ಬೆಂಗಳೂರಿನ ಚಾಲುಕ್ಯ ಸರ್ಕಾಲ್ ಬಳಿ‌ ಬರುತ್ತಿದ್ದಂತೆ ಯುವತಿಯ ತಾಯಿ ಮತ್ತು ಅಣ್ಣ ಬಸ್​ ಅಡ್ಡಗಟ್ಟಿದ್ದಾರೆ. ಸ್ಪೇರ್ ಡ್ರೈವರ್ ಆರೀಫ್​ನ ಬಸ್ಸಿನಿಂದ ಕೆಳಗಿಳಿಸಿ ವಿಚಾರಿಸಿದ್ದಾರೆ. ನಂತರ ಚೆನ್ನಾಗಿ ತದಕಿದ್ದಾರೆ. ಕೊನೆಗೆ ತಪ್ಪಾಯ್ತು ಎಂದು ಕ್ಷಮೆ ಕೇಳಿದ್ದಾನೆ. ಹಿಗ್ಗಾ -ಮುಗ್ಗಾ ಥಳಿಸಿದ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಇದನ್ನೂ ಓದಿ: ಬೆಂಗಳೂರಿನ ಹೆಬ್ಬಾಳದಲ್ಲಿ ನಿವೃತ್ತ ಎಸಿಪಿ ಸುಬ್ಬಣ್ಣ ಮೇಲೆ ದಾಳಿ, ಚಿನ್ನಾಭರಣ ದರೋಡೆ: ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

cross india sleeper bus hydarabad Bengaluru News
Advertisment