Advertisment

ಬೆಂಗಳೂರಲ್ಲಿ ಬೆಳಗಿನ ಜಾವ ಘೋರ ದುರಂತ.. ಬೆಂಕಿಯ ಕೆನ್ನಾಲಿಗೆಗೆ ನಾಲ್ವರು ಬಲಿಯಾಗಿರುವ ಶಂಕೆ

ನಗರತ್ ಪೇಟೆಯಲ್ಲಿ (Nagarathpet) ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿ ಘೋರ ದುರಂತ ನಡೆದಿದೆ. ದುರ್ಘಟನೆಯಲ್ಲಿ ಓರ್ವ ಪ್ರಾಣ ಕಳೆದುಕೊಂಡಿರೋದು ದೃಢಪಟ್ಟಿದ್ದು, ಇನ್ನೂ ಮೂವರು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿರುವ ಅನುಮಾನ ವ್ಯಕ್ತವಾಗಿದೆ.

author-image
Ganesh Kerekuli
bengalore fire incident
Advertisment

ಬೆಂಗಳೂರು: ನಗರತ್ ಪೇಟೆಯಲ್ಲಿ (Nagarathpet) ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿ ಘೋರ ದುರಂತ ನಡೆದಿದೆ. ದುರ್ಘಟನೆಯಲ್ಲಿ ಓರ್ವ ಪ್ರಾಣ ಕಳೆದುಕೊಂಡಿರೋದು ದೃಢಪಟ್ಟಿದ್ದು, ಇನ್ನೂ ಮೂವರು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿರುವ ಅನುಮಾನ ವ್ಯಕ್ತವಾಗಿದೆ. 

Advertisment

ಮದನ್ ಸಿಂಗ್ ಎಂಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಮನೆಯಲ್ಲಿ ಪತಿ, ಪತ್ನಿ ಸೇರಿ ಇಬ್ಬರು ಮಕ್ಕಳಿದ್ದರು ಎಂಬ ಮಾಹಿತಿ ಇದೆ. 8 ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದರು. ಉಳಿದ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. 

ಇದನ್ನೂ ಓದಿ: ರಾಕ್ಷಸರೂಪದ ಮೇಘಸ್ಫೋಟಕ್ಕೆ ಜೀವಬಿಟ್ಟವರ ಸಂಖ್ಯೆ 60ಕ್ಕೆ ಏರಿಕೆ.. ಕಣಿವೆ ನಾಡಲ್ಲಿ ಏನೆಲ್ಲ ಆಗೋಯ್ತು..

ರಾಜಸ್ಥಾನ ಮೂಲದ ಮದನ್ ಸಿಂಗ್ ಎಂಬಾತ, ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಈ ಪ್ಲಾಸ್ಟಿಕ್ ಮ್ಯಾಟ್ ಮಳಿಗೆಗಳನ್ನು ನೋಡಿಕೊಳ್ತಿದ್ದರು. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನೆಲಮಹಡಿ ಸೇರಿ ಎರಡು ಮಹಡಿಯಲ್ಲಿ ಪ್ಲಾಸ್ಟಿಕ್​ ಗೋಡಾನ್ ಇತ್ತು. ಮೂರನೇ ಮಹಡಿಯಲ್ಲಿ ಇವರ ಕುಟುಂಬ ವಾಸವಿತ್ತು. ನಾಲ್ಕನೇ ಮಹಡಿಯಲ್ಲಿ ಚಿಕ್ಕದಾದ ರೂಮ್ ಇದ್ದ ಬಗ್ಗೆ ಮಾಹಿತಿ ಇದೆ. 

Advertisment

ಶಾರ್ಟ್​ ಸರ್ಕ್ಯೂಟ್​ನಿಂದ ಪ್ಲಾಸ್ಟಿಕ್ ಮ್ಯಾಟ್ ಮಳಿಗೆ ಬೆಂಕಿ ಹೊತ್ತಿಕೊಂಡಿರುವ ಅನುಮಾನ ಇದೆ. ಒಟ್ಟು 6 ಅಗ್ನಿ ಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಇದನ್ನೂ ಓದಿ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru News Nagarathpet fire incident Bengaluru
Advertisment
Advertisment
Advertisment