Advertisment

ಹೊಟ್ಟೆಯಲ್ಲಿ ಮಗು ಕೊಟ್ಟು ಪರಾರಿ, ಅಪ್ಪ-ಅಮ್ಮ ಯಾರೂ ಇಲ್ಲ ಸಾರ್ -ಸಂತ್ರಸ್ತೆ ಕಣ್ಣೀರು

ಪ್ರಜ್ವಲ್ ರೇವಣ್ಣ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕ ಮೇಲೆ ಸಂತ್ರಸ್ತೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣ ಸೆರೆ ಹಿಡಿದುಕೊಂಡಿದ್ದಾನೆ. ಆತನ ಬಳಿ ಸುಮಾರು 2500 ವಿಡಿಯೋಗಳಿವೆ ಎಂದು ಆರೋಪಿಸಿದ್ದಾರೆ.

author-image
Ganesh Kerekuli
bengalore case (5)
Advertisment

ರಾಜ್ಯದಲ್ಲಿ ‘ಪ್ರಜ್ವಲ್ ರೇವಣ್ಣ  ಮಾದರಿ’ಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕ ಮೇಲೆ ಸಂತ್ರಸ್ತೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ನನ್ನನ್ನ ದೈಹಿಕವಾಗಿ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಅಲ್ಲದೇ ಕೆಲವು ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣವನ್ನು ಸೆರೆ ಹಿಡಿದುಕೊಂಡಿದ್ದಾನೆ. ಆತನ ಬಳಿ ಸುಮಾರು 2500 ವಿಡಿಯೋಗಳಿವೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ. 

Advertisment

ಇದನ್ನೂ ಓದಿ:2500 ವಿಡಿಯೋಗಳು! ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ

ಮ್ಯಾಥಿವ್ ಎಂಬ ವ್ಯಕ್ತಿ ವಿರುದ್ಧ  ಈ ಆರೋಪ ಕೇಳಿಬಂದಿದೆ. ಆಘಾತಕ್ಕೆ ಒಳಗಾಗಿರುವ ಸಂತ್ರಸ್ತೆ ಮಹಿಳಾ ಆಯೋಗದ ಕದ ತಟ್ಟಿದ್ದಾರೆ. ಮ್ಯಾಥಿವ್​ ಎನ್ನಲಾಗುತ್ತಿರುವ ಕೆಲ ಅಶ್ಲೀಲ ಫೋಟೋಗಳು, ವಿಡಿಯೋಗಳು ಸಂತ್ರಸ್ತೆ ಬಳಿಯಿವೆ. ಆ ವಿಡಿಯೋಗಳು ಸಂತ್ರಸ್ತೆ ಮಾಡುತ್ತಿರುವ ಆರೋಪಗಳಿಗೆ ಪುಷ್ಟಿ ನೀಡುತ್ತಿವೆ. ಕೆಲ ಯುವತಿಯರು, ಮಹಿಳೆಯರ ಜೊತೆಗಿನ ವಿಡಿಯೋಗಳು ಅದಾಗಿವೆ. 

ಆರೋಪ ಏನು..? 

ನನ್ನ ಪ್ರಗ್ನೆನ್ಸಿ ಪಾಸಿಟೀವ್ ಬಂದಿದೆ. ನಂಗೆ ಕೇರ್ ಮಾಡೋರು ಯಾರೂ ಇಲ್ಲ. ನನಗೆ ಅವನ ಬಿಟ್ಟರೆ ಬೇರೆ ಯಾರೂ ಇಲ್ಲ. ಪೇರೆಂಟ್ಸ್​ ಇಲ್ಲ. ಒಡ ಹುಟ್ಟಿದವರು ಇಲ್ಲ. ಈಗ ನನಗೆ ಊಟಕ್ಕೆ ಕೂಡ ಇಲ್ಲ. ಹಾಗೆ ಮಾಡಿ ಹೋಗಿದ್ದಾನೆ. ಹೊಟ್ಟೆಯಲ್ಲಿ ಒಂದು ಮಗು ಕೊಟ್ಟು ಹೇಗೆ ಓಡಿ ಹೋಗಲು ಮನಸ್ಸು ಬಂತು ಅಂತಾ ಗೊತ್ತಾಗುತ್ತಿಲ್ಲ. ಈಗ ಅಪ್ಪ, ಅಮ್ಮನ ಕಣ್ಣೀರು ಹಾಕಿಸಲು ಆಗಲ್ಲ ಎನ್ನುತ್ತಾನೆ. ಮಾಡುವ ಮೊದಲು ಯಾಕೆ ಯೋಚನೆ ಮಾಡಿಲ್ಲ. 

‘ನೀ ಹಿಂದೂ ,ನಾನ್ ಕ್ರಿಶ್ಚಿಯನ್. ನಾನು ನಿನ್ನೆ ಹೇಗೆ ಮದುವೆ ಆಗಲಿ ಎಂದು ಆಕೆಗೆ ಹೇಳಿದ್ದಾನೆ. ನಿನ್ನ ಮದ್ವೆಯಾಗೋಕೆ ಆಗಲ್ಲ ಎಂದಿದ್ದಾನೆ. ನಾನೀಗ ಒಂದು ತಿಂಗಳ ಗರ್ಭಿಣಿ. ನಾನೇನು ಮಾಡಲಿ? ಕೋಣನಕುಂಟೆ ಪೊಲೀಸ್ ಠಾಣೆಗೆ ಹೋದಾಗ ಕೇಸ್ ತೆಗೆದುಕೊಳ್ಳಲು ನಿರಾಕರಣೆ ಮಾಡಿದ್ದಾರೆ. ಅದೇ ಕಾರಣಕ್ಕೆ ಸಂತ್ರಸ್ತೆ ಮಹಿಳಾ ಆಯೋಗದ ಮೊರೆ ಹೋದೆ. ಮಹಿಳಾ ಆಯೋಗದಿಂದ ಕೋಣನಕುಂಟೆ ಪೊಲೀಸರಿಗೆ ಮೌಖಿಕ ಸೂಚನೆ ಸಿಕ್ಕಿದೆ. ಆದರೂ ಕೂಡ ಪೊಲೀಸರು ಸರಿಯಾಗಿ ರೆಸ್ಪಾನ್ಸ್ ಮಾಡಿಲ್ಲ. 

ನನಗೆ ಈಗಾಗಲೇ ಮದುವೆಯಾಗಿತ್ತು. ಒಂದು ಹೆಣ್ಣು ಮಗು ಇದೆ. ಕಾನೂನು ಪ್ರಕಾರ ಡಿವೋರ್ಸ್ ಪಡೆದು ದೂರವಾಗಿದ್ದೇನೆ. ಮಗಳು ಖಾಸಗಿ ಶಾಲೆಯಲ್ಲಿ ಈ ಮ್ಯಾಥಿವ್​ನ ಪರಿಚಯ ಆಯಿತು. ಮ್ಯಾಥಿವ್, ಆ ಶಾಲೆಯಲ್ಲಿ ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕನಾಗಿ ಕೆಲಸ ಮಾಡ್ತಿದ್ದಾನೆ. 

ಇಬ್ಬರ ನಡುವಿನ ಪರಿಚಯ, ಆತ್ಮೀಯತೆಗೆ ತಿರುಗಿ ಒಟ್ಟಿಗೆ ವಾಸ ಮಾಡಿದೇವು. ನಂತರ ಚರ್ಚ್ ಒಂದರ  ಮುಂದೆ ಮದ್ವೆಯಾದೇವು. ಆತ ಜೊತೆಗಿದ್ದಾಗ ಏಕಾಂತ ಕ್ಷಣವನ್ನು ವಿಡಿಯೋ ಮಾಡಿಕೊಂಡಿದ್ದಾನೆ. ನನ್ನದು ಮಾತ್ರವಲ್ಲ, ಕೆಲ ಯುವತಿ ಹಾಗೂ ಮಹಿಳೆಯರ ಜೊತೆಗೂ ಈತ ಹೀಗೆಯೇ ಮಾಡಿದ್ದಾನೆ. ಮೊನ್ನೆ ರಾತ್ರಿ ಮಲಗಿದ್ದಾಗ ನನ್ನ ಮೊಬೈಲ್ ಸಮೇತ ಪರಾರಿ ಆಗಿದ್ದಾನೆ. ನನ್ನ ಮೊಬೈಲ್​ನಲ್ಲಿ ಮತ್ತಷ್ಟು ಸಾಕ್ಷಿ ಇತ್ತು. ಅದಕ್ಕೆ ಮೊಬೈಲ್ ಸಮೇತ ಜೂಟ್ ಆಗಿದ್ದಾನೆ. 

-ನೊಂದ ಮಹಿಳೆ

Advertisment

ಇದನ್ನೂ ಓದಿ:ಮ್ಯಾಥಿವ್ ಬಳಿ 2500 ಅಶ್ಲೀಲ ವಿಡಿಯೋ ಆರೋಪ.. ಸಂತ್ರಸ್ತೆಗೆ ಮೋಸ ಮಾಡಿದ್ದು ಹೇಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru case Belagavi news
Advertisment
Advertisment
Advertisment