/newsfirstlive-kannada/media/media_files/2025/08/23/ganesha-2025-08-23-21-59-50.jpg)
‘‘ಗಣಪತಿ ಬಪ್ಪ ಮೋರೆಯಾ ಮಂಗಳ ಮೂರ್ತಿ ಮೋರೆಯಾ’’ ಇನ್ನೇನೂ ಗೌರಿ ಗಣೇಶ ಹಬ್ಬ ಬಂದೇಬಿಡ್ತು. ಎಲ್ಲೆಲ್ಲೂ ಶುರು ವಿನಾಯಕನ ಸಂಭ್ರಮ. ಹಬ್ಬಕ್ಕೆ ಇನ್ನು ಒಂದು ವಾರ ಇರುವಾಗಲೇ ಸಿಲಿಕಾನ್ ಸಿಟಿಗೆ ಮುಂಬೈನಿಂದ ಗಣಪ ಬಂದಿದ್ದಾನೆ.
ಮುಂಬೈ ಹಾಗೂ ಸೊಲ್ಲಾಪುರ ಕುಶಲಕರ್ಮಿಗಳಿಂದ 30 ದಿನಗಳಿಂದ ಸಿದ್ಧಗೊಂಡ ಚಾಮರ ಕರ್ಣನ ರೂಪ ಎಷ್ಟು ಅದ್ಭುತವಾಗಿದೆ ಅಲ್ವಾ. ಬರೋಬ್ಬರಿ 12 ಲಕ್ಷ ಖರ್ಚು ಮಾಡಿ ಅಮೆರಿಕನ್ ಡೈಮಂಡ್ನಿಂದ ಈ ಗಣಪತಿಯನ್ನ ತಯಾರಿಸಲಾಗಿದೆ. ಆರು ಅಡಿ ಎತ್ತರದ ಬಹಳ ವಿಶೇಷವಾದ ಗಣಪ ಮೂರ್ತಿ ಇದಾಗಿದ್ದು, ಮಿಲ್ಕ್ ಕಾಲೋನಿಯ ಸ್ವಸ್ತಿಕ್ ಯುವಕರ ಸಂಘದಿಂದ 40ನೇ ವರ್ಷದ ಗಣಪತಿ ಉತ್ಸವಕ್ಕೆ ಇದನ್ನ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ: ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬ ಆಚರಿಸಿದ ಬಿಗ್ಬಾಸ್ ಖ್ಯಾತಿಯ ಧನರಾಜ್ ಆಚಾರ್ ದಂಪತಿ
ಲಂಬೋದರನ ಮೂರ್ತಿಯಷ್ಟೇ ವಿಶೇಷವಾಗಿಲ್ಲ. ಈತ ಕೂರುವ ಮಂಟಪ ಕೂಡ ಅಷ್ಟೇ ವೈಶಿಷ್ಟ್ಯತೆಯಿಂದ ಕೂಡಿದೆ. ಬರೀ ಮಂಟಪಕ್ಕೇನೇ 30 ಲಕ್ಷ ವೆಚ್ಚ ಮಾಡಲಾಗಿದೆ. ಕಳೆದ ವರ್ಷ ‘ಕೈಲಾಸನಾಥ ದೇವಸ್ಥಾನ’ ಹೋಲುವ ಮಂಟಪ ನಿರ್ಮಾಣ ಮಾಡಿದ್ರು. ಈ ಬಾರಿ ವಾರಣಾಸಿಯ ‘ಕಾಶಿವಿಶ್ವನಾಥ ದೇವಾಲಯ’ ಹೋಲುವ ಮಂಟಪ ಸಿದ್ಧಪಡಿಸಲಾಗ್ತಾಯಿದೆ.
ಆಗಸ್ಟ್ 27ನೇ ತಾರೀಖಿನಿಂದ ಸೆಪ್ಟೆಂಬರ್ 5ನೇ ತಾರೀಖಿನವರೆಗೂ ಗಣೇಶನ ಹಬ್ಬ ಆಚರಣೆಗೆ ಸ್ವಸ್ತಿಕ್ ಯುವಕರ ಸಂಘ ಸಜ್ಜಾಗಿದೆ. ಅದೇನೇ ಹೇಳಿ ನಗರದಲ್ಲಿ ವೆರೈಟಿ ವೆರೈಟಿ ಗಣಾಧ್ಯಕ್ಷನ ದರ್ಶನ ಆಗೋದಂತು ಪಕ್ಕ. ಸುಮುಖನ ಸಂಭ್ರಮಕ್ಕೆ ಕೌಂಟ್ಡೌನ್ ಶುರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ