/newsfirstlive-kannada/media/media_files/2025/12/13/monika-love-story-4-2025-12-13-16-37-05.jpg)
ಈ ರೀಲ್ಸು, ಲೈಕ್ಸು, ಚಾಟ್ಸು.. ಅದೆಷ್ಟು ಸಂಸಾರ ಹಾಳು ಮಾಡಿದ್ಯೋ ಗೊತ್ತಿಲ್ಲ.. ಕಳೆದ ಮೂರ್ನಾಲ್ಕು ದಿನಗಳಿಂದ ಮಂಜು-ಲೀಲಾ ‘ಮತ್ತೆ ಒಂದಾದ’ ಸುದ್ದಿ ಟ್ರೆಂಡಿಂಗ್​ನಲ್ಲಿತ್ತು. ಇದೀಗ ಮತ್ತೊಂದು ಅಂತಹುದೇ ಒಂದು ಸುದ್ದಿ ಸ್ಫೋಟಗೊಂಡಿದೆ. ಕಟ್ಕೊಂಡವ್ನ ಬಿಟ್ಟು, ಪ್ರೀತಿಸಿದವ್ನ ಮದ್ವೆಯಾಗಿ.. ಈಗ ಅವ್ನೂ ಬೇಡವೆಂದು 12 ವರ್ಷದ ಕಂದಮ್ಮನ ಅನಾಥ ಮಾಡಿ ಪೊಲೀಸಪ್ಪನ ಜೊತೆ ಪರಾರಿ ಆಗಿದ್ದಾಳೆ!
ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಟೋರಿಯ ವಿವರ ಹೀಗಿದೆ.. ಈ ಕತೆಯ ಹೀರೋಯಿನ್ ಮೋನಿಕಾ. ಮೂಲತಃ ಮೈಸೂರಿನ ರೀಲ್ಸ್ ರಾಣಿ. ಮೈತುಂಬಾ ಮೇಕಪ್ ಹಾಕೊಳ್ಳೋದು, ರೀಲ್ಸ್ ಮಾಡೋದೇ ಕಾಯಕ. ಮೊದಲನೇ ಪತಿಗೆ ಗುಡ್​ಬೈ ಹೇಳಿದ್ದ ಈಕೆ, 15 ವರ್ಷಗಳ ಹಿಂದೆ ಪ್ರೀತಿಸಿದ ಪ್ರಿಯಕರನ ಕೈಹಿಡಿದ್ದಳು. ಸಾಕ್ಷಿ ಎನ್ನುವಂತೆ 12 ವರ್ಷದ ಮಗನಿದ್ದಾನೆ. ಈಗ ಮಗ ಹಾಗೂ ಗಂಡನ ಬಿಟ್ಟು, ‘ಕನಸೋ ಇದು, ನನಸೋ ಇದು’ ಎಂದಿದ್ದಾಳೆ.
ಇದನ್ನೂ ಓದಿ:ಜನವರಿ 6ಕ್ಕೆ ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕಾರ -ಇಕ್ಬಾಲ್ ಹುಸೇನ್
/filters:format(webp)/newsfirstlive-kannada/media/media_files/2025/12/13/monika-love-story-2-2025-12-13-16-23-51.jpg)
ಓಡಿ ಹೋಗುವ ಮುನ್ನ..
ಪೊಲೀಸನ ಹೆಸರು ರಾಘವೇಂದ್ರ. ಮೂಲತಃ ಉತ್ತರ ಕರ್ನಾಟಕದವ. ಬೆಂಗಳೂರಿನ HSR ಲೇಔಟ್ ಠಾಣೆಯ ‘ಹೊಯ್ಸಳ ಡ್ರೈವರ್’. ಈತನಿಗೂ ಮದ್ವೆಯಾಗಿ ಮಗು ಇದೆ. ರೀಲ್ಸ್ ಮಾಡ್ತಿದ್ದ ಮೋನಿಕಾ, ಕಳೆದ ಜೂನ್​ನಲ್ಲಿ ಇನ್​​ಸ್ಟಾಗ್ರಾಮ್ ಮೂಲಕ ಪರಿಚಯ ಮಾಡ್ಕೊಂಡಿದ್ದಾಳೆ. ಪರಿಚಯ ಸ್ನೇಹಕ್ಕೆ ತಿರುಗಿದೆ, ಪ್ರೀತಿಯೂ ಆಗಿದೆ. ಕಳೆದ ಎರಡ್ಮೂರು ತಿಂಗಳಿನಿಂದ ಪ್ರೀತಿ-ಪ್ರೇಮದಲ್ಲಿ ತೇಲಾಡಿದ್ದಾಳೆ.. ‘ನೀನೇ ಎಲ್ಲಾ, ನೀನಿಲ್ಲದೇ ಏನೂ ಇಲ್ಲ’ ಅಂತಾ ಪೊಲೀಸಪ್ಪ ಕೂಡ ಆಕೆಯ ಕೈಕೈ ಹಿಡಿದು ತಿರುಗಾಡಿದ್ದಾನಂತೆ.
ಮುಂದೆ ಏನಾಯ್ತು..
ಇಬ್ಬರ ಮಧ್ಯೆ ಪ್ರೀತಿ ಚಿಗುತ್ತಿದ್ದಂತೆಯೇ ಅಂದ್ರೆ ಮೂರು ತಿಂಗಳ ಹಿಂದೆ ಮೋನಿಕಾ, ಠಾಣೆ ಮೆಟ್ಟಿಲೇರಿದ್ದಾಳೆ. ಪ್ರಿಯಕರ ರಾಘವೇಂದ್ರ ಮಾಡಿದ ಪ್ಲಾನ್​ನಂತೆ, ಚಂದ್ರಲೇಔಟ್ ಠಾಣೆಗೆ ಬಂದು ಗಂಡನ ವಿರುದ್ಧ ದೂರು ಕೊಟ್ಟಿದ್ದಾಳೆ. ನನ್ನ ಜೀವನ ರೂಪಿಸಿಕೊಳ್ಳಲು ನಾನು ಹೋಗ್ತಿದ್ದೇನೆ, ನನ್ನ ಗಂಡನಿಗೆ ಕರೆಸಿ ಬುದ್ಧಿ ಹೇಳಿ ಎಂದು ದೂರಿದ್ದಾಳೆ.
ಇದನ್ನೂ ಓದಿ: ಮಕ್ಕಳ ಅಶ್ಲೀಲ ವಿಡಿಯೋ ಅತಿಯಾಗಿ ವೀಕ್ಷಣೆ : ರಾಯಚೂರಿನ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ ಕೇಸ್ ದಾಖಲು
/filters:format(webp)/newsfirstlive-kannada/media/media_files/2025/12/13/monika-love-story-1-2025-12-13-16-24-02.jpg)
ದೂರಿನ ಬೆನ್ನಲ್ಲೇ ಚಂದ್ರಲೇಔಟ್ ಪೊಲೀಸರು ಗಂಡನಿಗೆ ಕರೆ ಮಾಡಿ ಕರೆಸಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಪೊಲೀಸರಿಗೆ ದೂರು ನೀಡುವವರೆಗೂ ಮೋನಿಕಾಳ ಕಳ್ಳಾಟ ಪತಿಗೆ ಗೊತ್ತೇ ಇರಲಿಲ್ಲ. ಇತ್ತ ಗಂಡ ಠಾಣೆಗೆ ಬರುತ್ತಿದ್ದಂತೆಯೇ ಮನೆಗೆ ಬಂದಾಕೆ, 160 ಗ್ರಾಂ ಚಿನ್ನಾಭರಣ, 1.80 ಲಕ್ಷ ಹಣದೊಂದಿಗೆ ಮನೆಬಿಟ್ಟಿದ್ದಾಳೆ.
ಮಗನ ಕೊಲ್ಲೋದಾಗಿ ಬೆದರಿಕೆ
ಪೊಲೀಸರ ತನಿಖೆ ಎದುರಿಸಿ ಗಂಡ ಮನೆಗೆ ಬಂದ. ಮನೆಯಲ್ಲಿ ಮೋನಿಕಾ ಇರಲಿಲ್ಲ. ಕಾಲ್ ಮಾಡಿದರೆ ಎತ್ತಲಿಲ್ಲ. ಕೊನೆಗೆ ಮೋನಿಕಾಳ ಇನ್​ಸ್ಟಾಗ್ರಾಮ್ ಓಪನ್ ಮಾಡಿದಾಗ ರಾಘವೇಂದ್ರ ಜೊತೆ ಮಾತನ್ನಾಡಿರುವ ಚಾಟ್​​ ಹಿಸ್ಟ್ರಿ ಸಿಕ್ಕಿದೆ. ಅಸಲಿ ಸತ್ಯ ತಿಳಿದ ಮೋನಿಕಾಳ ಪತಿ ಕೂಡಲೇ ಚಂದ್ರಲೇಔಟ್ ಪೊಲೀಸ್ ಠಾಣೆಗೆ ಓಡೋಡಿ ಬಂದಿದ್ದಾರೆ.
ಈ ವಿಚಾರ ಹಿರಿಯ ಅಧಿಕಾರಿಗಳಿಗೆ ಗೊತ್ತಾಗ್ತಿದ್ದಂತೆ ಪೊಲೀಸಪ್ಪನ ಸಸ್ಪೆಂಡ್ ಮಾಡಿ ಆದೇಶ ನೀಡಿದ್ದಾರೆ. ಸಸ್ಪೆಂಡ್ ಆಗಿದ್ರೂ ಬುದ್ಧಿ ಕಲಿಯದ ರಾಘವೇಂದ್ರ, ಮುರ್ನಾಲ್ಕು ತಿಂಗಳ ನಂತರ ಮತ್ತೆ ಡ್ಯೂಟಿಗೆ ಬರ್ತೀನಿ ಎಂದು ಧಿಮಾಕು ತೋರಿಸಿದ್ದಾನಂತೆ. ಅಲ್ಲದೇ, ಮೋನಿಕಾಳ ಪತಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಮನೆಯಲ್ಲಿರುವ 12 ವರ್ಷದ ಮಗನನ್ನು ಸಾಯಿಸೋದಾಗಿ ಹೆದರಿಸಿದ್ದಾನಂತೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us