/newsfirstlive-kannada/media/media_files/2025/09/26/women-thalita-2025-09-26-11-17-54.jpg)
ಬೆಂಗಳೂರು: ರಾಜಧಾನಿ ಬೆಂಗಳೂರು ದಿನೇ ದಿನೇ ಒಳ್ಳೆ ಸುದ್ದಿಗಳಿಗಿಂತ ಕೆಟ್ಟ ಸುದ್ದಿಗಳಿಂದಲೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗ್ತಿದೆ. ಆದ್ರೆ ಇಂಥದ್ದೇ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ. ಬಟ್ಟೆ ಅಂಗಡಿ ಮಾಲೀಕನೊಬ್ಬ ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ.
ಏನಿದು ಪ್ರರಕಣ..?
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿ ಮಾಲೀಕ ಉಮೇದ್ ರಾಮ್ ಮಹಿಳೆಯೊಬ್ಬಳು ತನ್ನ ಅಂಗಡಿಯಿಂದ ಬಟ್ಟೆ ಕದ್ದಿದ್ದಾಳೆ ಎಂದು ಹೀನಾಯವಾಗಿದ ಥಳಿಸಿದ್ದಾನೆ. ರಸ್ತೆಯಲ್ಲಿಯೇ ಮಹಿಳೆಯನ್ನು ಎಳೆದಾಡಿ, ಖಾಸಗಿ ಅಂಗಕ್ಕೆ ಬೂಟ್ ಕಾಲಲ್ಲಿ ಒದ್ದಿದ್ದಾನೆ. ಮಹಿಳೆ ನೋವಿನಿಂದ ಅಂಗಳಾಚಿದ್ರೂ ಮಾಲೀಕ ಮನಬಂದಂತೆ ಥಳಿಸಿದ್ದಾನೆ. ಈ ದೃಶ್ಯಗಳು ಸ್ಥಳೀಯರ ಮೊಬೈಲ್​ಗಳಲ್ಲಿ ಸೆರೆಯಾಗಿವೆ.
ಪೊಲೀಸರ ನಿರ್ಲಕ್ಷ್ಯ ಏಕೆ..?
ಅಮಾನವೀಯವಾಗಿ ಹಲ್ಲೆಗೊಳಗಾದ ಮಹಿಳೆಯ ಪರ ನಿಲ್ಲಬೇಕಾದ ಕೆ.ಆರ್ ಮಾರ್ಕೆಟ್ ಪೊಲೀಸರು ಮಹಿಳೆಯ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಮಹಿಳೆ ದೂರು ಕೊಡಲು ಮುಂದಾದ್ರು ಪೊಲೀಸರು ಕ್ಯಾರೆ ಎಂದಿಲ್ಲ, ಪೂರ್ವಪರ ಪರಿಶೀಲಿಸದೆ ಮಹಿಳೆಯ ಮೇಲೆ ಪೊಲೀಸರು ಕ್ರಮಕೈಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕರವೇ ಕಾರ್ಯಕರ್ತರು, ಅಮಾನೀಯವಾಗಿ ಹಲ್ಲೆ ಮಾಡಿದ ಮಾಲೀಕನ ವಿರುದ್ಧ ಪೊಲೀಸರ ನಡೆ ಬಗ್ಗೆ ಪ್ರಶ್ನಿಸಿದ್ದಾರೆ. ಕಳ್ಳತನದ ಕೇಸ್ ಹಾಕಿ ಮಹಿಳೆಯನ್ನ ಜೈಲಿಗಟ್ಟಿರುವ ಪೊಲೀಸರು, ಮಾಲೀಕನ ವಿರುದ್ಧ ಕ್ರಮ ಏಕೆ ಜರುಗಿಸಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಘಟನೆಯ ಕುರಿತು ಮಾಧ್ಯಮಗೂ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಟಿ ಮಾರ್ಕೆಟ್ ಪೊಲೀಸರು ಕೇಸ್ ದಾಖಲಿ ಉಮೇದ್ ರಾಮ್ ಹಾಗೂ ಮಹೇಂದ್ರ ಶರ್ಮಾರನ್ನು ರಾತ್ರಿಯೇ ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪೊಲೀಸರಿಗೆ ಸೂಚಿಸಿದ್ದಾರೆ.