/newsfirstlive-kannada/media/media_files/2025/09/26/psi-scam-2025-09-26-10-09-11.jpg)
ಚಿಕ್ಕಮಗಳೂರು: 2014ರಲ್ಲಿ ಪಿಎಸ್​ಐ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆಯಾ ಎಂಬ ಅನುಮಾನಗಳು ಶುರುವಾಗಿವೆ. ಗಂಡ-ಹೆಂಡತಿ ಮಧ್ಯೆ ನಡೆದ ಜಗಳದಿಂದ ಹೊರ ಬಂದಿರುವ ವಿಚಾರಗಳು ಇದಕ್ಕೆ ಪುಷ್ಟಿ ನೀಡಿವೆ.
ಏನಿದು ಗಂಡ ಹೆಂಡತಿ ಜಗಳ..?
ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಳಸಾ ತಾಲೂಕಿನಲ್ಲಿ ನಿತ್ಯಾನಂದಗೌಡ ಪಿಎಸ್​ಐ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಪಿಎಸ್​ಐ ನಿತ್ಯಾನಂದಗೌಡನ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಅದೇ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಆಗಿದೆ. ಜಗಳದ ನಂತರ ಅವರ ಪತ್ನಿ ಸಾರ್ವಜನಿಕವಾಗಿ ‘ಪಿಎಸ್ಐ ಪರೀಕ್ಷೆಯ ಅಕ್ರಮಗಳ’ ಬಗ್ಗೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.
ಮುಂದೆ ಏನಾಯ್ತು..?
ಈ ವಿಚಾರ ಸಾರ್ವಜನಿಕ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಪ್ರಶ್ನೆ ಪತ್ರಿಕೆಯನ್ನ ಅಂದು ಪ್ರಿಂಟ್ ಮಾಡಿಸಿಕೊಟ್ಟಿದ್ದಾಳೆ ಎನ್ನಲಾಗುತ್ತಿರುವ ಮಹಿಳೆಗೆ ಆತಂಕ ಶುರುವಾಗಿದೆ. ಗಾಬರಿಯಾದ ಈ ಮಹಿಳೆ ನಿತ್ಯಾನಂದ ಗೌಡಗೆ ಕಾಲ್ ಮಾಡಿದ್ದಾರೆ ಎನ್ನಲಾಗಿದೆ. ಕರೆ ಮಾಡಿ ಮಾತನ್ನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ. ಆ ಆಡಿಯೋದಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಬಗ್ಗೆ ಸುಳಿವು ಸಿಗುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಭಾರೀ ಮಳೆಯ ಎಚ್ಚರಿಕೆ.. ಯಾವೆಲ್ಲ ಜಿಲ್ಲೆಗಳಿಗೆ ಅಲರ್ಟ್​..?
ಇಬ್ಬರು ಮಧ್ಯೆ ನಡೆದ ಸಂಭಾಷಣೆ ಹೀಗಿದೆ..
ಪ್ರಿಟಿಂಗ್ ಪ್ರೆಸ್​​ನಲ್ಲಿ ಕೆಲಸ ಮಾಡ್ತಿದ್ದಳು ಎನ್ನಲಾಗಿರುವ ಮಹಿಳೆ ಆತಂಕದಲ್ಲಿ ಮಾತನ್ನಾಡಿದ್ದಾರೆ. ನಿಮ್ಮ ಕಾಲಿಗೆ ಬೀಳ್ತೀನಿ. ತನಿಖೆ ಮಾಡಿದ್ರೆ ತೊಂದರೆ ಆಗುತ್ತದೆ. ಆಮೇಲೆ ನನ್ನ ಮರ್ಯಾದೆ ಏನು? ಇಲ್ಲಿಗೆ ಬಂದು ಸ್ಥಳ ಮಹಜರು ಅಲ್ಲ ಮಾಡಿದ್ರೆ ಪ್ರಾಬ್ಲಂ ಆಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಕಾಲಿಗೆ ಬೀಳ್ತೀನಿ, ಕೇಸ್ ಆದ್ರೆ, ತನಿಖೆ ಮಾಡಿದ್ರೆ, ಸ್ಪಾಟ್ ಮಹಜರ್ ಮಾಡಿದ್ರೆ..? ಎಂದು ಪ್ರಶ್ನೆ ಮಾಡಿದ್ದಾಳೆ.
ಅದಕ್ಕೆ ಪ್ರತಿಕ್ರಿಯಿಸಿರುವ ನಿತ್ಯಾನಂದ ಗೌಡ.. ಯಾವ ಬದನೆಕಾಯಿಯೂ ಆಗಲ್ಲ, ಸುಮ್ಮನಿರಿ ಎಂದು ಧೈರ್ಯ ತುಂಬಿದ್ದಾರೆ. ನಾನು ಪ್ರಿಂಟಿಂಗ್ ಪ್ರೆಸ್​ನಲ್ಲಿ ಕೆಲಸ ಮಾಡಿದ್ದು ನಿಜ, ನನಗೆ ಪ್ರಶ್ನೆಪತ್ರಿಕೆ ಸಿಕ್ಕಿಲ್ಲ, ನಾನು ನೋಡಿಲ್ಲ, ನಾನು ಯಾರಿಗೂ ಕೊಟ್ಟಿಲ್ಲ ಎಂದು ಹೇಳಿ. ಏನೂ ಆಗಲ್ಲ ಎಂದು ಸಮಾಧಾನ ಮಾಡಿದ್ದಾರೆ.
ಇದನ್ನೂ ಓದಿ:ಟ್ರಂಪ್​ಗೆ ಮತ್ತೆ ತೆರಿಗೆ ದಾಹ.. ಔಷಧಿಗಳ ಮೇಲೆ ಶೇಕಡಾ 100 ಸುಂಕ ವಿಧಿಸಿ ಉದ್ದಟತನ..!
ದೂರು ದಾಖಲು..!
ಆಡಿಯೋ ವೈರಲ್ ಬೆನ್ನಲ್ಲೇ ಕಳಸ ತಾಲೂಕಿನ ತಾಪಂ ಮಾಜಿ ಸದಸ್ಯ ರಫೀಕ್ ಅನ್ನೋರು ಚಿಕ್ಕಮಗಳೂರು ಜಿಲ್ಲೆಯ ಎಸ್​ಪಿಗೆ ದೂರು ನೀಡಿದ್ದಾರೆ. ಪ್ರಶ್ನೆಪತ್ರಿಕೆ ಪಡೆದು ಎಕ್ಸಾಂ ಪಾಸ್ ಆಗಿರೋದಾಗಿ ಅನುಮಾನ ಬಂದಿದೆ, ತನಿಖೆ ಮಾಡುವಂತೆ ದೂರು ನೀಡಿದ್ದಾರೆ. 2014 ರಲ್ಲಿ PSI ಪರೀಕ್ಷೆ ನಡೆದಿತ್ತು. ಆಗ ರಾಜ್ಯದ ಸುಮಾರು 200ಕ್ಕೂ ಮಂದಿ ಪರೀಕ್ಷೆ ಬರೆದು ಪ್ರಮೋಷನ್ ಪಡೆದಿದ್ದರು. ಈ ಆಡಿಯೋದಿಂದ ಇಡೀ ಪರೀಕ್ಷೆಯೇ ಅಕ್ರಮ ಆಗಿರುವ ಶಂಕೆ ಇದೆ. ಇದೀಗ ಅವರೆಲ್ಲರಿಗೂ ಭಯ ಶುರುವಾಗಿದೆ.