Advertisment

ಟ್ರಂಪ್​ಗೆ ಮತ್ತೆ ತೆರಿಗೆ ದಾಹ.. ಔಷಧಿಗಳ ಮೇಲೆ ಶೇಕಡಾ 100 ಸುಂಕ ವಿಧಿಸಿ ಉದ್ದಟತನ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)​​ ಮತ್ತೊಮ್ಮೆ ಸುಂಕಗಳಿಗೆ ಸಂಬಂಧಿಸಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಔಷಧ ವಲಯದ (Pharma Imports) ಮೇಲೆ ಶೇ.100 ರಷ್ಟು ಸುಂಕವನ್ನು ವಿಧಿಸಿದ್ದಾರೆ. ಅಂದರೆ ಅಮೆರಿಕಗೆ ಮಾರಾಟವಾಗುವ ಔಷಧಿಗಳು ಶೇ.100 ರಷ್ಟು ಸುಂಕಕ್ಕೆ ಒಳಪಟ್ಟಿರುತ್ತವೆ.

author-image
Ganesh Kerekuli
Trump tariff
Advertisment

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)​​ ಮತ್ತೊಮ್ಮೆ ಸುಂಕಗಳಿಗೆ ಸಂಬಂಧಿಸಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಔಷಧ ವಲಯದ (Pharma Imports) ಮೇಲೆ ಶೇ.100 ರಷ್ಟು ಸುಂಕವನ್ನು ವಿಧಿಸಿದ್ದಾರೆ. ಅಂದರೆ ಅಮೆರಿಕಗೆ ಮಾರಾಟವಾಗುವ ಔಷಧಿಗಳು ಶೇ.100 ರಷ್ಟು ಸುಂಕಕ್ಕೆ ಒಳಪಟ್ಟಿರುತ್ತವೆ. 

Advertisment

ಅಮೆರಿಕಾಗೆ ರಫ್ತು ಮಾಡುವ ಔಷಧಿ ಕಂಪನಿಗಳ ಮೇಲೆ ಟ್ರಂಪ್ ಸುಂಕ ಸಮರ ಸಾರಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿರುವ ಟ್ರಂಪ್, ಔಷಧ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಿಸುತ್ತಿರೋದಾಗಿ ಹೇಳಿದ್ದಾರೆ. ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸದ ಹೊರತು ಅಕ್ಟೋಬರ್ 1, 2025 ರಿಂದ ಹೊಸ ಸುಂಕ ಜಾರಿಗೆ ಬರುತ್ತಿದೆ. ಯಾವುದೇ ಬ್ರಾಂಡ್ ಅಥವಾ ಪೇಟೆಂಟ್ ಪಡೆದ ಔಷಧ ಉತ್ಪನ್ನಗಳ ಮೇಲೆ 100 ಪ್ರತಿಶತ ಸುಂಕ ವಿಧಿಸುತ್ತೇವೆ ಎಂದಿದ್ದಾರೆ. ಅಂದರೆ ಅಮೆರಿಕ ಹೊಸ ನಿಯಮದ ಪ್ರಕಾರ, ಈಗಾಗಲೇ ಉತ್ಪಾದನಾ ಘಟಕವನ್ನು ಅಲ್ಲಿ ಸ್ಥಾಪಿಸಿದ್ದರೆ, ಅದು ಸುಂಕಗಳಿಗೆ ಒಳಪಡುವುದಿಲ್ಲ. ವಿನಾಯತಿ ಸಿಗಲಿದೆ. 

ಇದನ್ನೂ ಓದಿ:ಇವತ್ತು SL ಭೈರಪ್ಪ ಅವರ ಅಂತ್ಯಕ್ರಿಯೆ.. ಗೊಂದಲ ಸೃಷ್ಟಿಸಿದ ವಿಲ್

Donald_Trump (1)

ಭಾರತಕ್ಕೆ ಪೆಟ್ಟು

ಆ ಮೂಲಕ ಭಾರತವನ್ನು ಪರೋಕ್ಷವಾಗಿ ಟ್ರಂಪ್ ಗುರಿಯಾಗಿಸಿಕೊಂಡಿದ್ದಾರೆ.  ಅಮೆರಿಕಾಗೆ ದೊಡ್ಡ ಪ್ರಮಾಣದಲ್ಲಿ ಔಷಧ ರಫ್ತು ಮಾಡುವ ದೇಶ ಭಾರತ ಆಗಿದೆ. ಕಳೆದ ವರ್ಷ ಭಾರತ-ಅಮೆರಿಕ ನಡುವೆ 87 ಶತಕೋಟಿ ಡಾಲರ್‌ ವಿವಾಹಿಟು ನಡೆದಿದೆ. ಭಾರತ ಜೆನೆರಿಕ್ ಔಷಧಿಗಳ ಅತಿದೊಡ್ಡ ರಫ್ತುದಾರ. 

ಅಡುಗೆ ಸಾಮಗ್ರಿಗಳ ಮೇಲೆ ಶೇ. 50 ರಷ್ಟು ಸುಂಕ

ಮತ್ತೊಂದು ಪೋಸ್ಟ್‌ನಲ್ಲಿ ಟ್ರಂಪ್, ‘ಅಕ್ಟೋಬರ್ 1, 2025 ರಿಂದ ಅಡುಗೆಮನೆಯ ಕ್ಯಾಬಿನೆಟ್‌ಗಳು, ಸ್ನಾನಗೃಹದ ವ್ಯಾನಿಟಿಗಳು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸುತ್ತೇವೆ. ಹೆಚ್ಚುವರಿಯಾಗಿ ಪೀಠೋಪಕರಣಗಳ ಮೇಲೆ ಶೇಕಡಾ 30 ರಷ್ಟು ಸುಂಕ ವಿಧಿಸಲಾಗುವುದು. ಕಾರಣ ಇತರ ದೇಶಗಳು ಈ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕಗೆ ಸಾಗಿಸುತ್ತಿವೆ. ಇದು ಅನ್ಯಾಯ, ರಾಷ್ಟ್ರೀಯ ಭದ್ರತೆಗಾಗಿ ನಾವು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ. 

Advertisment

ಇದನ್ನೂ ಓದಿ:ಜಾತಿ ಗಣತಿಗೆ ಹೈಕೋರ್ಟ್​ 7 ಷರತ್ತು.. ಇವತ್ತು ಮಹತ್ವದ ಬೆಳವಣಿಗೆ ನಿರೀಕ್ಷೆ

USA PREZ DONALD TRUMP and modi

ಭಾರಿ ಟ್ರಕ್‌ಗಳಿಗೆ ಶೇ 25 ರಷ್ಟು ಸುಂಕ

ವಿದೇಶಗಳಿಂದ ನಾವು ನಮ್ಮ ಹೆವಿ ಟ್ರಕ್ ತಯಾರಕರನ್ನು ರಕ್ಷಿಸಲು ಮುಂದಾಗಿದ್ದೇವೆ. ಅಕ್ಟೋಬರ್ 1ರಿಂದ ಜಾರಿಗೆ  ಬರುವಂತೆ ಪ್ರಪಂಚದ ಇತರ ಭಾಗಗಳಲ್ಲಿ ತಯಾರಾಗುವ ಎಲ್ಲಾ ಹೆವಿ ಟ್ರಕ್‌ಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸುತ್ತಿದ್ದೇನೆ. ಇದು ಪೀಟರ್‌ಬಿಲ್ಟ್ , ಕೆನ್‌ವರ್ತ್, ಫ್ರೈಟ್‌ಲೈನರ್ ಮತ್ತು ಇತರ ಪ್ರಮುಖ ಟ್ರಕ್ ಉತ್ಪಾದನಾ ಕಂಪನಿಗಳನ್ನು ವಿದೇಶಿ ಹಸ್ತಕ್ಷೇಪದಿಂದ ರಕ್ಷಿಸುತ್ತದೆ ಅಂತಾ ಟ್ರಂಪ್ ಘೋಷಣೆ ಮಾಡಿದ್ದಾರೆ. 

ಇದನ್ನೂ ಓದಿ:ಭಾರತ vs ಪಾಕಿಸ್ತಾನ ಫೈನಲ್ ಮ್ಯಾಚ್​.. 41 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲು

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Tariff On Pharma Imports Trump Putin Alaska summit DONALD TRUMP trump and modi
Advertisment
Advertisment
Advertisment