/newsfirstlive-kannada/media/media_files/2025/09/25/sl-byrappa-2025-09-25-07-05-51.jpg)
ಕನ್ನಡ ಸಾಹಿತ್ಯ ಲೋಕದ ದೈತ್ಯ ಪ್ರತಿಭೆ.. ಅಕ್ಷರ ಲೋಕದ ತತ್ವಜ್ಞಾನಿ, ಸರಸ್ವತಿ ಸಮ್ಮಾನ್ ಪುರಸ್ಕೃತ, ಪದ್ಮಭೂಷಣ ಡಾ.ಎಸ್.ಎಲ್. ಭೈರಪ್ಪ ವಿಧಿವಶರಾಗಿದ್ದಾರೆ. ಇವತ್ತು ಪಂಚಭೂತಗಳಲ್ಲಿ ಭೈರಪ್ಪ ಲೀನರಾಗಲಿದ್ದಾರೆ.
ಇಂದು ಬೆಳಗ್ಗೆ 11.30ಕ್ಕೆ ಭೈರಪ್ಪ ಅವರ ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದ್ದು, ನಂತರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಬೆಳಗ್ಗೆ 10.30ರವರೆಗೂ ದರ್ಶನಕ್ಕೆ ವ್ಯವಸ್ಥೆ ಇದೆ. ಈಗಾಗಲೇ ಗಣ್ಯರು, ರಾಜಕೀಯನಾಯಕರು ಅಂತಿಮ ನಮನ ಸಲ್ಲಿಸಿದ್ದಾರೆ.
ಎಸ್​ಎಲ್​ ಭೈರಪ್ಪನವರ ಅಂತ್ಯಸಂಸ್ಕಾರದ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಭೈರಪ್ಪ ಅವರು ತಮ್ಮ ಅಂತ್ಯಸಂಸ್ಕಾರದ ಮೂರು ತಿಂಗಳ ಹಿಂದೆಯೇ ವಿಲ್ ಬರೆಸಿದ್ದು, ಇದೀಗ ಅದರ ಪ್ರತಿಗಳು ವೈರಲ್​ ಆಗಿದೆ. ವಿಲ್​ನಲ್ಲಿ ಮಕ್ಕಳು ಅಂತ್ಯಸಂಸ್ಕಾರ ಮಾಡದಂತೆ ಉಲ್ಲೇಖಿಸಿದ್ದಾರಂತೆ. ಹೀಗಾಗಿ ವಿಲ್‌ನಲ್ಲಿ ಇರುವಂತೆಯೇ ಅಂತ್ಯಸಂಸ್ಕಾರ ಮಾಡ್ಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಅದೇನೆ ಇರಲಿ ಸಾಹಿತ್ಯ ಪ್ರಪಂಚದಲ್ಲಿ ಹೊಸದೊಂದಕ್ಕೆ ಸಾಕ್ಷಿಯಾಗ್ತಿದ್ದ ಎಲ್.ಎಸ್ ಭೈರಪ್ಪ ಅವ್ರು ಬರೆದ ಬರಹಗಳಿಗೆ ಅವರೇ ಸಾಟಿ. ಕಾಂದಬರಿಗಳ ಮೂಲಕ ಕನ್ನಡದ ಕೀರ್ತಿ ಪತಾಕೆಯನ್ನು ಜಗದಗಲ ಹಾರಿಸಿದ ಆ ಚೇತನ ಇನ್ನು ನೆನಪು ಮಾತ್ರ. ತಮ್ಮ 94ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಭೈರಪ್ಪನವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಅಕ್ಷರಶಃ ಬಡವಾಗಿದೆ.
ಇದನ್ನೂ ಓದಿ:ಜಾತಿ ಗಣತಿಗೆ ಹೈಕೋರ್ಟ್​ 7 ಷರತ್ತು.. ಇವತ್ತು ಮಹತ್ವದ ಬೆಳವಣಿಗೆ ನಿರೀಕ್ಷೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.