/newsfirstlive-kannada/media/media_files/2025/10/03/darshan-2025-10-03-08-43-31.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಎರಡನೇ ಬಾರಿಗೆ ಜೈಲು ಸೇರಿರುವ ಆರೋಪಿ ದರ್ಶನ್​ಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ. ​​ಸೆಂಟ್ರಲ್ ಜೈಲ್​ಗೆ ಹೋದ ಎರಡು ತಿಂಗಳಲ್ಲಿ ಮೊದಲ ಬಾರಿಗೆ ಜೈಲಾಧಿಕಾರಿಗೆ ದರ್ಶನ್ ದೂರು ನೀಡಿದ್ದಾರೆ.
ಬೆನ್ನು ನೋವು ಎಂದು ನಾಲ್ಕು ದಿನಗಳ ಹಿಂದೆ ಜೈಲಾಧಿಕಾರಿಗೆ ದೂರು ನೀಡಿದ್ದಾರೆ. ಕೊನೆಗೆ ಜೈಲಿನ ವೈದ್ಯಾಧಿಕಾರಿಗಳು ಅಲ್ಲಿಗೆ ತೆರಳಿ ಚಿಕಿತ್ಸೆ ನೀಡಿದ್ದಾರೆ. ಅಂತೆಯೇ ಪ್ರತಿ ನಿತ್ಯ ದರ್ಶನ್ ಹೆಲ್ತ್ ರಿಪೋರ್ಟ್ ಪಡೆಯುತ್ತಿದ್ದಾರೆ. ಪ್ರತಿನಿತ್ಯ ವೈದ್ಯರು ದರ್ಶನ್​​ ಅವರನ್ನು ತಪಾಸಣೆ ನಡೆಸ್ತಿದ್ದಾರೆ.
ಫಂಗಸ್ ಹಾಗೂ ವ್ಯವಸ್ಥೆ ಸರಿಯಿಲ್ಲ ಎಂದು ದರ್ಶನ್​​ ಕೋರ್ಟ್​ಗೆ ಹೇಳಿದ್ದರು. ಇದೀಗ ಮೊದಲ ಬಾರಿಗೆ ಬೆನ್ನು ನೋವಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಬಳ್ಳಾರಿ ಜೈಲಿನ ದಿನಗಳಲ್ಲಿ ದರ್ಶನ್ ತೀವ್ರ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ನಂತರ ಕೋರ್ಟ್ ಮೊರೆ ಹೋಗಿ ಚಿಕಿತ್ಸೆಗಾಗಿ ಜಾಮೀನು ಪಡೆದು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದ ಬಳಿಕ ಬೆನ್ನು ನೋವು ಸ್ವಲ್ಪ ಸುಧಾರಿಸಿತ್ತು. ಇದೀಗ ಮತ್ತೆ ಬೆನ್ನುನೋವು ಉಲ್ಬಣಗೊಂಡಿದೆ.
ಇದನ್ನೂ ಓದಿ: ಸಾಮಾನ್ಯ ಖೈದಿ ಸಂಬಂಧಿಕರಂತೆ ಕಾದು ನಟ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ : ನಟ ದರ್ಶನ್ ಭೇಟಿಗೆ ಎರಡೂವರೆ ಗಂಟೆ ಕಾದ ಪತ್ನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ