ಮಗಳಿಗಾಗಿ ಕೆಂಪು ಚೆಟ್ನಿ ಮಾಡ್ಕೊಂಡು ಬಂದಿದ್ದೆ, ಮನೆ ಖರೀದಿಸಲು ಮುಂದಾಗಿದ್ದೆ -ನಂದಿನಿ ಅಮ್ಮನ ನೋವಿನ ಮಾತುಗಳು..

ಖ್ಯಾತ ಕಿರುತೆರೆ ನಟಿ ನಂದಿನಿ ಅವರ ಚಿಗಟೇರಿಯ ನಿವಾಸದಲ್ಲಿ ನೀರವಮೌನ ಆವರಿಸಿದೆ. ಮಗಳ ನೆನೆದು ತಾಯಿ ಬಸವರಾಜೇಶ್ವರಿ ಕಣ್ಣೀರು ಇಟ್ಟಿದ್ದಾರೆ. ಮಗಳ ಕಳೆದುಕೊಂಡ ನೋವಿನಲ್ಲಿ ಏನೆಲ್ಲ ಮಾತನ್ನಾಡಿದ್ದಾರೆ ಅನ್ನೋ ವಿವರ ಇಲ್ಲಿದೆ.

author-image
Ganesh Kerekuli
Actress Nandini mother (1)
Advertisment

ಖ್ಯಾತ ಕಿರುತೆರೆ ನಟಿ ನಂದಿನಿ ಅವರ ವಿಜಯನಗರ ಜಿಲ್ಲೆಯ ಚಿಗಟೇರಿಯ ನಿವಾಸದಲ್ಲಿ ನೀರವಮೌನ ಆವರಿಸಿದೆ. ಮಗಳ ನೆನೆದು ತಾಯಿ ಬಸವರಾಜೇಶ್ವರಿ ಕಣ್ಣೀರು ಇಟ್ಟಿದ್ದಾರೆ. 

ನಂದಿನಿ ಅಮ್ಮ ಹೇಳಿದ್ದೇನು..? 

ಟೀಚಿಂಗ್ ಕೆಲಸ ನಿನಗೆ ಇಷ್ಟವಾಗಲಿಲ್ಲ ಅಂದ್ರೆ ಬಿಡು. ಇಷ್ಟವಿದ್ದರೆ ಮಾಡು. ನೀನು ತುಂಬಾ ಸ್ಲಿಮ್ ಆಗುತ್ತಿದ್ಯಾ? ಆರೋಗ್ಯ ಕಡೆ ಗಮನ ಕೊಡು. ಅಲ್ಲಿ ಇಷ್ಟವಿದ್ದರೆ ಇರು. ಇಲ್ಲದಿದ್ದರೆ ಬಂದು ಬಿಡು. ಮನೆಯಲ್ಲಿ ಇರು. ನಮಗೆ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ ಎಂದಿದ್ದೆ. 

ಆಕೆ ಯಾವಾಗ ಬಂದರೂ ನಮ್ಮ ಮೇಲೆ ರೇಗುತ್ತಿದ್ದಳು. ಯಾವಾಗ ಮನೆಗೆ ಬಂದರೂ, ಮನೆಯಲ್ಲಿರು ಎನ್ನುತ್ತೀರಿ. ಮನೆ ಬಿಟ್ಟು ಬಾ ಎಂದು ಹೇಳ್ತೀರಿ. ನಿಮ್ಮನ್ನ ನಾನು ಬ್ಲಾಕ್​ ಲಿಸ್ಟ್​ಗೆ ಹಾಕ್ತೀರಿ ಎಂದು ಸಿಟ್ಟು ಸಿಟ್ಟು ಮಾಡಿದ್ದಳು. ನೋಡು ನಾವು ತಾಯಿಗಳ ಹೃದಯ ಹೇಳ್ತೀವಿ. 

ಮಕ್ಕಳ ಸಂಕ್ಟ ತಾಯಿಯಾಗಿ ನನಗೆ ಗೊತ್ತಾಗಲ್ಲ ಅನ್ಕೊಂಡಿದ್ಯಾ? ನೀನು ನಮ್ಮನ್ನ ಬ್ಲಾಕ್​ ಲಿಸ್ಟ್​ಗೆ ಹಾಕಬೇಡ. ನಮ್ಮಿಂದ ನಿನಗೆ ತೊಂದರೆ ಇಲ್ಲ. ನಿನಗೆ ನನ್ನ ಅಮ್ಮ ಬೇಜಾರು ಮಾಡ್ತಾಳೆ. ತಾಟು ಹಾಕ್ತಾಳೆ. ಕವನ ಹಾಕ್ತಾಳೆ ಅಂದ್ರೆ ನಾನೇ ಬ್ಲಾಕ್ ಮಾಡ್ತೀನಿ. ನಿನಗೆ ಕಾಲ್ ಮಾಡಿ  ಬೈಸಿಕೊಳ್ಳೋದು ಏನೂ ಇರಲ್ಲ. ನೀನು ಸಿಟ್ಟು ಮಾಡಬೇಡ. ಅಂದೇ ನಾನು ಆಕೆಯ ನಂಬರ್ ಬ್ಲಾಕ್ ಹಾಕಿದ್ದೆ. ಇವತ್ತಿಗೆ ಸರಿಯಾಗಿ 20 ದಿನ ಆಯಿತು. 

ಶನಿವಾರ ನಾನು ಬೆಂಗಳೂರಿಗೆ ಹೊರಟಿದ್ದೆ. ಇವಳಿಗಾಗಿ ನಾನು ತಿಂಡಿ ಮಾಡಿಕೊಂಡು ಹೋಗಿದ್ದೆ. ಮಗಳಿಗೆ ಕೆಂಪು ಚೆಟ್ನಿ ಅಂದ್ರೆ ಇಷ್ಟ ಅಂತಾ ಅದನ್ನು ಮಾಡಿಕೊಂಡು, ಎಳ್ಳು ಬೆಲ್ಲ ತೆಗೆದುಕೊಂಡು ಎಲ್ಲವನ್ನೂ ರೆಡಿ ಮಾಡಿಕೊಂಡು ಇದ್ದೆ. ಅಲ್ಲದೇ ರಜೆ ಇದ್ದರೆ ಮನೆಗೆ ಬಾ ಎಂದು ಹೇಳೋಣ ಅನ್ಕೊಂಡಿದ್ದೆ. 

ಶನಿವಾರ ಮುಗಿಸಿಕೊಂಡು ಭಾನುವಾರ ನಾನು ಅಮ್ಮನ ಮನೆಗೆ ಹೋಗಿದ್ದೆ. ಅಮ್ಮನ ಕರೆದುಕೊಂಡು ದೇವಸ್ಥಾನಕ್ಕೆ ಹೋಗೋದಿತ್ತು. ಅಮ್ಮನಿಗೆ ನಾನು ಹೇಳಿದ್ದೆ. ನಾನು ಇಲ್ಲಿಗೆ ಬಂದಿರುವ ವಿಚಾರ ಗೊತ್ತಾದರೆ ಸಿಟ್ಟು ಮಾಡ್ತಾಳೆ. ನಾನಿದ್ದಲ್ಲಿಗೆ ಬಾರದೇ ಅಲ್ಲಿಗೆ ಹೋಗಿದ್ದಿಯಾ ಎಂದು ಸಿಟ್ಟು ಮಾಡ್ತಾಳೆ. ಅದಕ್ಕೆ ಅವಳಿಗೆ ಬಂದಿರೋದು ಗೊತ್ತಾಗೋದು ಬೇಡ. ಫ್ರೀ ಆದಾಗ ಕಾಲ್ ಮಾಡ್ತೀನಿ ಎಂದಿದ್ದೆ. ಅದಕ್ಕೆ ಅಮ್ಮ ಸರಿ ಸಂಜೆ ಮಾಡು ಎಂದಿದ್ದಳು.

ಅಷ್ಟರೊಳಗೆ ನಾನು ಅಮ್ಮನ ಕರೆದುಕೊಂಡು ಹೋಗಿ, ನೆಲಮಂಗಲದಲ್ಲಿ ಒಂದೆರಡು ಮನೆ ನೋಡಿಕೊಂಡು ಬಂದಿದ್ವಿ. ಮನೆಯ ವಿಡಿಯೋಗಳನ್ನ ಮಾಡಿಕೊಂಡು ಬಂದಿದ್ದೆ. ಆಕೆಗೆ ತೋರಿಸಿ ಅವಳಿಗೆ ಇಷ್ಟವಾಗಿದ್ದರೆ ತಗೊಳ್ಳೋಣ ಅನ್ಕೊಂಡಿದ್ದೆ. ಅಷ್ಟರೊಳಗೆ ಬೆಳಗ್ಗೆ 4 ಗಂಟೆಗೆ ಕಾಲ್ ಬಂದಿದೆ ಎಂದು ಕಣ್ಣೀರು ಇಟ್ಟಿದ್ದಾರೆ.. 

ಅಷ್ಟರೊಳಗೆ ನಾವು ಹೋಗೋದ್ರೊಳ್ಗೆ ಎಲ್ಲ ಮುಗಿದಿತ್ತು. ಪೊಲೀಸರು ಕರೆ ಮಾಡಿ ನನಗೆ ತಿಳಿಸಿದ್ದರು. ಅಲ್ಲಿ ಪಿಜಿಯವರೂ ಬಂದಿದ್ದರು ಎಂದಿದ್ದಾರೆ. 

ಇದನ್ನೂ ಓದಿ: ಮಗಳಿಗೆ ಮುಂಗೋಪ ಜಾಸ್ತಿ ಇತ್ತು -ನಟಿ ನಂದಿನಿ ಅಮ್ಮ ಕಣ್ಣೀರು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

serial actress Nandini
Advertisment