/newsfirstlive-kannada/media/media_files/2025/12/30/actress-nandini-mother-2025-12-30-14-50-24.jpg)
ವಿಜಯನಗರ: ಖ್ಯಾತ ಕಿರುತೆರೆ ನಟಿ ನಂದಿನಿ ಅವರ ಚಿಗಟೇರಿಯ ನಿವಾಸದಲ್ಲಿ ನೀರವಮೌನ ಆವರಿಸಿದೆ. ಮಗಳ ನೆನೆದು ತಾಯಿ ಬಸವರಾಜೇಶ್ವರಿ ಕಣ್ಣೀರು ಇಟ್ಟಿದ್ದಾರೆ.
ನಾನು ಶಿಕ್ಷಕಿಯಾಗಿದ್ದೆ, ನಮ್ಮ ಯಜಮಾನರು ಶಿಕ್ಷಕರಾಗಿ ಕೆಲಸ ಮಾಡ್ತಿದ್ರು. ಅವರು ತೀರಿಕೊಂಡ ಬಳಿಕ ಅನುಕಂಪ ಆಧಾರಿತ ನೌಕರಿ ಮಾಡಲು ಹೇಳಿದಾಗ ಬೇಡ ಅಂದಳು. ಅದನ್ನ ಅಲ್ಲೇ ಬಿಟ್ಟಿದ್ವಿ. ಬಳಿಕ ಅವಳೇ ಮತ್ತೆ ಕೆಲಸ ಮಾಡ್ತೀನಿ ನೋಡಿ ಎಂದಾಗ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ವಿ.
ಇದನ್ನೂ ಓದಿ: ಚಿಗಟೇರಿ ಗ್ರಾಮದಲ್ಲಿ ನಟಿ ನಂದಿನಿ ಅಂತ್ಯಕ್ರಿಯೆ
/filters:format(webp)/newsfirstlive-kannada/media/media_files/2025/12/30/serial-actress-nandini-6-2025-12-30-06-40-24.jpg)
ಮತ್ತೆ ಮರಳಿ ಫೋನ್ ಮಾಡಿ ಕೆಲಸ ಬೇಡ ಅಂದಳು. ಮಗಳಿಗೆ ಮುಂಗೋಪ ಜಾಸ್ತಿ ಇತ್ತು, ಸಿಟ್ಟು ಸಿಟ್ಟು ಮಾಡುತ್ತಿದ್ದಳು. ಅವಳಿಗೆ ನಾವೇನೂ ವಿರೋಧ ಮಾಡಿರಲಿಲ್ಲ. ಈಗ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ನನ್ನ ಮಗಳು ಬಂಗಾರ ಎಂದು ಕಣ್ಣೀರು ಇಟ್ಟಿದ್ದಾರೆ.
ನಾನು ಶಿಕ್ಷಕಿಯಾಗಿ ಮಕ್ಕಳಿಗೆ ನನ್ನ ಮಗಳ ಹಾಗೆ ಸಾಧನೆ ಮಾಡಿ ಅಂತಾ ಹೇಳುತ್ತಿದ್ದೆ. ಈಗ ನೋಡಿದ್ರೆ ನನ್ನ ಮಗಳು ಸಾಧನೆ ಮಾಡಿದ್ಲು. ಆದ್ರೆ ದುಡುಕಿ ಈ ಥರ ಮಾಡಿಕೊಂಡಿದ್ದಾಳೆ. ನನ್ನ ಮಗಳ ಥರ ಯಾರು ಕೂಡಾ ಇಂಥ ಕಠಿಣ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಕಣ್ಣೀರು ಇಟ್ಟಿದ್ದಾರೆ.
ಇದನ್ನೂ ಓದಿ: ನಟಿ ನಂದಿನಿ ಪ್ರಕರಣಕ್ಕೆ ಟ್ವಿಸ್ಟ್​.. ಸಿಕ್ಕ ಡೈರಿಯಲ್ಲಿ ಏನಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us