ನಟಿ ನಂದಿನಿ ಪ್ರಕರಣಕ್ಕೆ ಟ್ವಿಸ್ಟ್​.. ಸಿಕ್ಕ ಡೈರಿಯಲ್ಲಿ ಏನಿದೆ..?

ಕಿರುತೆರೆ ನಟಿ‌ ನಂದಿನಿ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನಂದಿನಿ ವಾಸವಿದ್ದ ಪಿಜಿಯ ರೂಮಿನಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ತನ್ನ ದುಡುಕಿನ ನಿರ್ಧಾರದ ಬಗ್ಗೆ ಅದರಲ್ಲಿ ಕಾರಣ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

author-image
Ganesh Kerekuli
serial-actress-Nandini (12)
Advertisment

ಬೆಂಗಳೂರು: ಕಿರುತೆರೆ ನಟಿ‌ ನಂದಿನಿ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನಂದಿನಿ ವಾಸವಿದ್ದ ಪಿಜಿಯ ರೂಮಿನಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ತನ್ನ ದುಡುಕಿನ ನಿರ್ಧಾರದ ಬಗ್ಗೆ ಅದರಲ್ಲಿ ಕಾರಣ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. 

ಡೈರಿಯಲ್ಲಿ ನಟಿ ಕೆಲವು ವಿಚಾರಗಳನ್ನ ಉಲ್ಲೇಖಿಸಿದ್ದಾರೆ. ನನಗೆ ಸರ್ಕಾರಿ ಕೆಲಸ ಇಷ್ಟವಿಲ್ಲ. ನನಗೆ ನಟನೆ ಅಂದ್ರೆ ತುಂಬಾ ಇಷ್ಟ. ಮನೆಯಲ್ಲಿ ಯಾರೂ ನನ್ನ ಮಾತನ್ನು ಕೇಳುತ್ತಿಲ್ಲ. Sorry Amma ಎಂದು ಬರೆದಿಟ್ಟಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: ‘ಅಮ್ಮಾ ಕ್ಷಮಿಸಿ ಬಿಡು..’ ನಟಿ ನಂದಿನಿ ಕೇಸ್‌ಗೆ ಮಹತ್ವದ ಸುಳಿವು ಪತ್ತೆ

serial-actress-Nandini (9)

ಇನ್ನು, ನಂದಿನಿ ಬೆಂಗಳೂರಿನ ಹೆಸರುಘಟ್ಟ ಬಳಿಯ ಖಾಸಗಿ ಕಾಲೇಜಿನಲ್ಲಿ ಬಿ.ಇ ವ್ಯಾಸಂಗ ಮಾಡುತ್ತಿದ್ದರು. ಆದರೆ ಕಾಲೇಜಿಗೆ ಸರಿಯಾಗಿ ತೆರಳದೇ ಆಕ್ಟಿಂಗ್ ಕ್ಲಾಸ್​ಗೆ ಹೋಗ್ತಿದ್ರು. ಆರ್.ಆರ್.ನಗರದಲ್ಲಿರುವ ಆಕ್ಟಿಂಗ್ ಕ್ಲಾಸ್​ಗೆ ನಂದಿನಿ ಹೋಗುತ್ತಿದ್ದರು. ಇದು ನಂದಿನಿ ಕುಟುಂಬಸ್ಥರಿಗೆ ಇಷ್ಟವಾಗಿರಲಿಲ್ಲ. 

ಇದನ್ನೂ ಓದಿ: ‘ನೀನಾದೆ ನಾ’ ಖ್ಯಾತಿಯ ಕನ್ನಡದ ಸೀರಿಯಲ್‌ ನಟಿ ಹಠಾತ್‌ ನಿಧನ

serial-actress-Nandini (13)

ಮಗಳು ಸರ್ಕಾರಿ ಉದ್ಯೋಗಿ ಆಗಬೇಕೆಂದು ಒತ್ತಾಯಿಸುತ್ತಿದ್ದರು. ತಂದೆ ಸರ್ಕಾರಿ ಉದ್ಯೋಗದಲ್ಲಿ ಇದ್ದಾಗಲೇ ಮೃತರಾಗಿದ್ದರು. ಅದೇ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಸಿಕ್ಕಿತ್ತು. ತಂದೆಯ ಶಿಕ್ಷಕ ವೃತ್ತಿ ಮಗಳಿಗೆ ಅನುಕಂಪದ ಆಧಾರದಲ್ಲಿ ಬಂದಿತ್ತು.  ಆದರೆ ನಟಿ ನಂದಿನಿಗೆ ಶಿಕ್ಷಕ ವೃತ್ತಿಗೂ ಮಿಗಿಲಾಗಿ ನಟನೆ ಬಗ್ಗೆ ಆಸಕ್ತಿಯಿತ್ತು. ಇದೇ ವಿಚಾರಕ್ಕೆ ನಂದಿನಿ ಹಾಗೂ ಕುಟುಂಬಸ್ಥರ ಮಧ್ಯೆ ಮನಸ್ತಾಪವಿತ್ತು ಎನ್ನಲಾಗಿದೆ.  

ಇದನ್ನೂ ಓದಿ:ಚಿಗಟೇರಿ ಗ್ರಾಮದಲ್ಲಿ ನಟಿ ನಂದಿನಿ ಅಂತ್ಯಕ್ರಿಯೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

serial actress Nandini
Advertisment