ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್​.. ನಿಮ್ಮ ಸೇವೆಗಾಗಿ ಇವತ್ತಿನಿಂದ ಮತ್ತೊಂದು ಟ್ರೈನ್

ಬೆಂಗಳೂರಿನ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಹಳದಿ ಮಾರ್ಗದ ಮೆಟ್ರೋ ಟ್ರೈನ್​ಗಳು ಸಂಚರಿಸುತ್ತಿವೆ. ಆದರೆ ಇದುವರೆಗೂ 3 ಮೆಟ್ರೋ ಮಾತ್ರ 25 ನಿಮಿಷಕ್ಕೊಂದರಂತೆ ಸಂಚರಿಸುತ್ತಿದ್ದವು. ಇಂದಿನಿಂದ ಮತ್ತೊಂದು ಹೊಸ ಮೆಟ್ರೋ ಹಳದಿ ಮಾರ್ಗಕ್ಕೆ ಸೇರ್ಪಡೆ ಆಗುತ್ತಿದೆ.

author-image
Chandramohan
Updated On
Namma metro yellow line
Advertisment

ಹಳದಿ ಮಾರ್ಗ ಮೆಟ್ರೋ (Yellow line metro) ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ಬಿಎಂಆರ್‌ಸಿಎಲ್ ನೀಡಿದೆ. ಇವತ್ತಿನಿಂದ ಮತ್ತೊಂದು ರೈಲು ಹಳದಿ ಮಾರ್ಗದಲ್ಲಿ ಸೇರ್ಪಡೆಯಾಗಿದೆ. 

ಉದ್ಘಾಟನೆಯಾದ ದಿನ ಅಂದರೆ ಆಗಸ್ಟ್ 10 ರಿಂದ ಮೂರು ರೈಲುಗಳು ಮಾತ್ರ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದವು. ಇವತ್ತಿನಿಂದ ಮತ್ತೊಂದು ರೈಲು ಹಳದಿ ಮಾರ್ಗದಲ್ಲಿ ಸೇರ್ಪಡೆಯಾಗಿದೆ.  ಬೆಳಗ್ಗೆಯಿಂದ 19 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಮಾಡಲಿವೆ. ಈ ಮೊದಲು 25 ನಿಮಿಷಕ್ಕೊಂದು ಮೆಟ್ರೋ ರೈಲು ಹಳದಿ ಮಾರ್ಗದಲ್ಲಿ ಓಡಾಡುತ್ತಿದ್ದವು.

ಸೋಮವಾರದಿಂದ ಶನಿವಾರದವರೆಗೆ ಇನ್ಮೇಲೆ 6 ಗಂಟೆಗೆ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಈ ಮೊದಲು ಬೆಳಗ್ಗೆ 6.30ಕ್ಕೆ ಹಳದಿ ಮಾರ್ಗದಲ್ಲಿ ರೈಲು ಆರಂಭವಾಗುತ್ತಿತ್ತು. ಭಾನುವಾರ ಎಂದಿನಂತೆ ಬೆಳಗ್ಗೆ 7 ಗಂಟೆಗೆ ಮೆಟ್ರೋ ವಾಣಿಜ್ಯ ಸಂಚಾರ ಶುರುವಾಗಲಿದೆ. ಆರ್.ವಿ ರಸ್ತೆ ಯಿಂದ ರಾತ್ರಿ 11-55ಕ್ಕೆ ಕೊನೆಯ ರೈಲು ಸಂಚರಿಸಲಿದೆ. ಬೊಮ್ಮಸಂದ್ರದಿಂದ ರಾತ್ರಿ 10-42 ಕ್ಕೆ ಕೊನೆಯ ರೈಲು ಎಂದಿನಂತೆ ಸಂಚರಿಸಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಅಧಿಕೃತವಾಗಿ ಈ ಮಾಹಿತಿ ನೀಡಿದೆ. ಮುಖ್ಯವಾಗಿ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಐ.ಟಿ. ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಾರೆ. ಬೊಮ್ಮಸಂದ್ರ ಮಾರ್ಗದಲ್ಲಿ ಸಾಕಷ್ಟು ಐ.ಟಿ.ಕಂಪನಿಗಳಿವೆ. ಹೀಗಾಗಿ ನಾಲ್ಕನೇ ರೈಲು ಹಳದಿ ಮಾರ್ಗಕ್ಕೆ ಸೇರ್ಪಡೆಯಾಗಿರುವುದು ಐ.ಟಿ. ಉದ್ಯೋಗಿಗಳು ಸೇರಿದಂತೆ ಬೊಮ್ಮಸಂದ್ರ, ಅನೇಕಲ್ ಮಾರ್ಗದಲ್ಲಿ ಸಂಚಾರ ಮಾಡುವವರಿಗೆ ಅನುಕೂಲ ಆಗಲಿದೆ. 

ಇದನ್ನೂ ಓದಿ:ಐಫೋನ್ 17 ಸರಣಿ ರಿಲೀಸ್.. ಭಾರತದಲ್ಲಿ ರೇಟ್ ಎಷ್ಟು? ಯಾವಾಗ ಸಿಗುತ್ತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Namma metro Metro Yellow Line Elevated metro corridor
Advertisment