/newsfirstlive-kannada/media/media_files/2025/08/11/namma-metro-1-2025-08-11-23-15-28.jpg)
ನಮ್ಮ ಮೆಟ್ರೋ
ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಆತ್ಮಹತ್ಯೆ ಯತ್ನ ಪ್ರಕರಣ ನಡೆದಿದೆ. ರಾತ್ರಿ 10.20ರ ಸುಮಾರಿಗೆ ಮೆಜೆಸ್ಟಿಕ್ ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯೆ ಯತ್ನ ನಡೆದಿದೆ ಎಂದು ವರದಿಯಾಗಿದೆ.
ಫ್ಲಾಟ್ ಫಾರಂ ನಂಬರ್ ಒಂದರಲ್ಲಿ ನಿಂತಿದ್ದ 35 ವರ್ಷದ ವ್ಯಕ್ತಿ ಮೆಟ್ರೋ ಫ್ಲಾಟ್ ಫಾರಂಗೆ ಜಿಗಿದಿದ್ದಾನೆ. ಮೆಟ್ರೋ ರೈಲು ಬರ್ತಿದ್ದಂತೆ ಟ್ರ್ಯಾಕ್ಗೆ ಜಿಗಿದಿದ್ದಾನೆ. ಇದರಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರಿಣಾಮ ಗ್ರೀನ್ ಲೈನ್ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಎಂಆರ್ಸಿಎಲ್.. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಓರ್ವ ಪ್ರಯಾಣಿಕ ರೈಲಿನ ಮುಂಭಾಗ ಜಿಗಿದಿದ್ದ. ಆತನನ್ನು ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ವ್ಯವಸ್ಥೆಯನ್ನು ಮತ್ತೆ ಸುಗಮಗೊಳಿಸಲಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಇದನ್ನೂ ಓದಿ: 38 ವರ್ಷಗಳ ಹಿಂದಿನ ಧರ್ಮಸ್ಥಳ ಪದ್ಮಲತಾ ಕೇಸ್ಗೆ ಟ್ವಿಸ್ಟ್.. SIT ಮುಂದೆ ಸಹೋದರಿ ಇಟ್ಟ ಬೇಡಿಕೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ