/newsfirstlive-kannada/media/media_files/2025/08/11/dharmastala-padmalata-2025-08-11-21-28-27.jpg)
ಧರ್ಮಸ್ಥಳದ ಸುತ್ತಮುತ್ತಲ ಕಾನನದಲ್ಲಿ ಅಸ್ಥಿಪಂಜರಕ್ಕಾಗಿ ಎಸ್​ಐಟಿ ಶೋಧ ಮುಂದುವರಿದಿದೆ. 3-4 ದಿನಗಳಿಂದ ಎಲ್ಲರ ಗಮನ ಸೆಳೆದಿರುವ ಪಾಯಿಂಟ್​ 13ರ ರಹಸ್ಯ ಇವತ್ತು ಕೂಡ ಬಯಲಾಗಿಲ್ಲ. ಜಿಪಿಆರ್​ ವ್ಯವಸ್ಥೆ ಮಾಡಿದ್ರೂ.. ಮರ-ಗಿಡಗಳಿಂದಾಗಿ, ನಾಳೆಗೆ ಪೋಸ್ಟ್​ಪೋನ್​ ಆಗಿದೆ. ಇದರ ಮಧ್ಯೆ 39 ವರ್ಷಗಳ ಹಿಂದಿನ ಅಸಹಜ ಸಾ*ವಿನ ಕೇಸ್​​ ಮತ್ತೆ ಮುನ್ನಲೆಗೆ ಬಂದಿದ್ದು, ಮರು ತನಿಖೆಗೆ ಒತ್ತಾಯ ಕೇಳಿ ಬಂದಿದೆ.
ಜಿಪಿಆರ್​ ಯಂತ್ರ​ ಬಂದ್ರೂ ಸ್ಪಾಟ್​ 13ರಲ್ಲಿ ನಡೆಯದ ಪರಿಶೋಧನೆ
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಸದ್ಯ ಎಲ್ಲರ ಕುತೂಹಲ ಕೆರಳಿಸಿರುವ ಪಾಯಿಂಟ್​ 13ರ ಸ್ಥಳದಲ್ಲಿ ಇವತ್ತು ಕೂಡ ಸ್ಥಳಮಹಜರು ನಡೆದಿಲ್ಲ. ಜಿಪಿಆರ್​ ಯಂತ್ರ ಬಂದ್ರೂ 13ನೇ ಪಾಯಿಂಟ್​​ನಲ್ಲಿ ಅಸ್ಥಿಪಂಜರಕ್ಕಾಗಿ ಉತ್ಖನನ ನಾಳೆಗೆ ಮುಂದೂಡಿಕೆ ಆಗಿದೆ.
ಇದನ್ನೂ ಓದಿ:ಉಗ್ರರ ಟಾರ್ಗೆಟ್ ಆಗಿತ್ತು ಧರ್ಮಸ್ಥಳದ ಮಂಜುನಾಥ ದೇಗುಲ.. ಕುಕ್ಕರ್ ಬ್ಲಾಸ್ಟ್ ಕೇಸ್​ನ ಸತ್ಯ ಬಯಲು
/filters:format(webp)/newsfirstlive-kannada/media/media_files/2025/08/09/dharmasthala-case-2025-08-09-21-06-13.jpg)
ಮಾಸ್ಕ್​ಮಾನ್​.. ಅನಾಮಿಕ ದೂರುದಾರ ಈ ಮೊದಲು 13 ಸ್ಥಳಗಳನ್ನು ಗುರುತಿಸಿದ್ದ. ಈ ಪೈಕಿ 12 ಪಾಯಿಂಟ್​ಗಳಲ್ಲಿ ಮಹಜರು ಮಾಡಲಾಗಿದೆ. ಇದರಲ್ಲಿ 6ನೇ ಸ್ಥಳ ಬಿಟ್ಟರೆ ಬೇಱವುದರಲ್ಲೂ ಕಳೇಬರ ಸಿಕ್ಕಿಲ್ಲ. 13ನೇ ಸ್ಥಳ ಬಿಟ್ಟು ಹೊಸ ಹೊಸ ಸ್ಥಳಗಳಲ್ಲಿ ಶೋಧ ಮಾಡಿದ್ರೂ ಒಂದೇ ಒಂದು ಮೂಳೆ ಕೂಡ ಸಿಗ್ತಿಲ್ಲ.. ಹೀಗಾಗಿ.. ಎಲ್ಲರ ಚಿತ್ತ ಇದೀಗ ಪಾಯಿಂಟ್​ 13ರ ಮೇಲಿದೆ. ಈ ಸ್ಥಳದಲ್ಲಿ 15 ಅಡಿ ಆಳದಲ್ಲಿ ಹಲವು ಶವಗಳನ್ನು ಹೂತಿರೋದಾಗಿ ಅನಾಮಿಕ ವ್ಯಕ್ತಿ ಹೇಳಿದ್ದ.. ಈ ಕಾರಣಕ್ಕಾಗಿ ಎಸ್​ಐಟಿ ಅಧಿಕಾರಿಗಳ ತಂತ್ರಜ್ಞಾನದ ಮೊರೆ ಹೋಗಿದ್ದರು. ಡ್ರೋನ್ ರಾಡಾರ್ ಬಳಸಿ ಜಿಪಿಆರ್​ ವ್ಯವಸ್ಥೆ ಮೂಲಕ ಮಣ್ಣಿನೊಳಗೆ ಏನಿದೆ ಅಂದು ಪತ್ತೆ ಹಚ್ಚಲು ಕಾದು ಕುಳಿತಿದ್ರು.. ಇದೀಗ ಜಿಪಿಆರ್​​ ಯಂತ್ರ ಕೂಡ ಎಸ್​ಐಟಿ ಕೈ ಸೇರಿದೆ. ಆದ್ರೆ, ಇವತ್ತೂ ಕೂಡತ್ತು ಪಾಯಿಂಟ್​ 13ರಲ್ಲಿ ಪರಿಶೋಧನೆ ನಡೆದಿಲ್ಲ..
ಇದನ್ನೂ ಓದಿ:ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT ಅನ್ನು ಪೊಲೀಸ್ ಠಾಣೆ ಎಂದು ಘೋಷಿಸಿದ ಸರ್ಕಾರ
/filters:format(webp)/newsfirstlive-kannada/media/media_files/2025/08/06/dharmasthala-case-2025-08-06-06-58-48.jpg)
ಜಿಪಿಆರ್​ ವ್ಯವಸ್ಥೆ ಬಳಕೆಗೆ ಪ್ರದೇಶ ಕ್ಲಿಯರ್​ ಆಗಿರಬೇಕು.. ಸಣ್ಣ ಅಡಚಣೆ ಆದ್ರೂ, ಶೋಧ ಕಾರ್ಯಕ್ಕೆ ಅಡ್ಡಿ ಆಗಲಿದೆ. ಸದ್ಯ ಪಾಯಿಂಟ್​ 13ರಲ್ಲಿ ಮರ, ಗಿಡಗಂಡೆಗಳು ಹೆಚ್ಚಾಗಿರುವ ಕಾರಣ, ಅವುಗಳನ್ನು ತೆರವು ಮಾಡಲಾಗ್ತಿದೆ. ಈ ಹಿನ್ನೆಲೆ ಇವತ್ತಿನ ಕಾರ್ಯಾಚರಣೆ ಸ್ಥಗಿತಗೊಳಿಸಿ ನಾಳೆ ಜಿಪಿಆರ್​ ಮೂಲಕ ಸ್ಥಳ ಪರಿಶೋಧನೆಗೆ ಎಸ್​ಐಟಿ ತೀರ್ಮಾನಿಸಿದೆ.
38 ವರ್ಷಗಳ ಹಿಂದಿನ ಅಸಹಜ ಸಾವಿನ ಕೇಸ್​ಗೆ ಮರಜೀವ
ಧರ್ಮಸ್ಥಳ ಗ್ರಾಮದ ಸುತ್ತ ಶವ ಹೂತಿಟ್ಟ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಇಷ್ಟು ದಿನ ಮಣ್ಣಲ್ಲಿ ಮರೆಯಾಗಿರುವ ರಹಸ್ಯವನ್ನು ಎಸ್​ಐಟಿ ಕೆದಕುತ್ತಿದ್ದಂತೆ.. ಹಳೆ ಪ್ರಕರಣಗಳಿಗೂ ಮರು ಜೀವ ಬರತೊಡಗಿವೆ.. 38 ವರ್ಷಗಳ ಹಿಂದೆ ಸಾವನ್ನಪ್ಪಿದ್ದ ಪದ್ಮಲತಾ ಸಾ*ವಿನ ಪ್ರರಣದ ಮರು ತನಿಖೆಗೆ ಆಗ್ರಹ ಕೇಳಿ ಬಂದಿದೆ.
ಯಾರು ಈ ಪದ್ಮಲತಾ?
- ಬೆಳ್ತಂಗಡಿ ತಾ. ಧರ್ಮಸ್ಥಳದ ಬೋಳಿಯಾರ್ ನಿವಾಸಿ ಪದ್ಮಲತಾ
- 1986 ಡಿಸೆಂಬರ್​ 22 ರಂದು ಕಾಲೇಜಿನಿಂದ ವಾಪಸ್​ ಬಂದಿದ್ರು
- ಧರ್ಮಸ್ಥಳ ಗ್ರಾಮದವರೆಗೆ ಬಂದು ನಾಪತ್ತೆಯಾಗಿದ್ದ ಪದ್ಮಲತಾ
- ನಾಪತ್ತೆಯಾದ 56 ದಿನಗಳ ಬಳಿಕ ನೇತ್ರಾವತಿ ತೀರದಲ್ಲಿ ಶ*ವ ಪತ್ತೆ
- 1987 ಫೆಬ್ರವರಿ 17ರಂದು ನದಿ ತೀರದಲ್ಲಿ ಕೊಳತೆ ಸ್ಥಿತಿಯಲ್ಲಿ ಪತ್ತೆ
- ಡ್ರಸ್, ವಾಚ್ ಮೂಲಕ ಪದ್ಮಲತಾ ಎಂದು ಗುರುತಿಸಿದ್ದ ಕುಟುಂಬ
- ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸಿದ್ದರೂ ಪತ್ತೆಯಾಗದ ಕೇಸ್
ಇದೀಗ ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣವನ್ನು ಎಸ್​ಐಟಿ ಕೈಗೆತ್ತಿಕೊಂಡಿದ್ದು, ನಮಗೆ ನ್ಯಾಯ ಸಿಗಬಹುದು ಎಂಬ ನಂಬಿಕೆಯಿಂದ.. ಪದ್ಮಲತಾ ಸಹೋದರಿಂದ ಇಂದ್ರಾವತಿ, ಸಿಪಿಐಎಂ ಮುಖ್ಯಸ್ಥ ಬಿ ಎಂ ಭಟ್ ನೇತೃತ್ವದಲ್ಲಿ ಆಗಮಿಸಿ ಎಸ್​ಐಟಿಗೆ ದೂರು ಸಲ್ಲಿಸಿದ್ದಾರೆ. ಇನ್ನು ತನಿಖಾ ದೃಷ್ಟಿಯಿಂದ ನಾವು ಶವವನ್ನು ಹೂತಿಟ್ಟಿದ್ದು, ಅದರ ಮರು ತನಿಖೆ ಮಾಡುವಂತೆ ಪಾಂಗಳ ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ 6 ಜನರ ಬಂಧನ.. ಇನ್ನುಳಿದವರಿಗಾಗಿ ಹುಡುಕಾಟ ನಡೆಸಿದ ಪೊಲೀಸರು
/filters:format(webp)/newsfirstlive-kannada/media/media_files/2025/08/05/dharmasthala-case-2025-08-05-14-49-49.jpg)
ಒಟ್ಟಾರೆ.. ಧರ್ಮಸ್ಥಳದಲ್ಲಿ ಮಣ್ಣು ಸೇರಿರುವ ನಿಗೂಢ ಸಾವಿನ ಪ್ರಕರಣಗಳು ಒಂದೊಂದಾಗೇ ಮರು ಜೀವ ಪಡೆದುಕೊಳ್ತಿವೆ. ಕಲ್ಲೇರಿಯ 14 ವರ್ಷದ ಬಾಲಕಿ ಆಯ್ತು.. ಈಗ 39 ವರ್ಷಗಳ ಹಿಂದಿನ ಪದ್ಮಲತಾ ಪ್ರಕರಣವೂ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆ ಗೋಚರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us