/newsfirstlive-kannada/media/media_files/2025/08/07/dharmastala-1-2025-08-07-14-34-39.jpg)
ಧರ್ಮಸ್ಥಳದಲ್ಲಿ ನಿಗೂಢ ಅಸ್ಥಿಪಂಜರಗಳ ಪತ್ತೆ ಕಾರ್ಯ ನಡೆಯುತ್ತಿದೆ. ಇವತ್ತು ಭಾನುವಾರ ಉತ್ಖನನ ಕಾರ್ಯಕ್ಕೆ ಬ್ರೇಕ್ ಬಿದ್ದಿದೆ. ನಾಳೆಯಿಂದ ಮತ್ತೆ ಅಸ್ಥಿಪಂಜರಗಳಿಗಾಗಿ ಎಸ್‌ಐಟಿ ತನಿಖೆ ಚುರುಕುಗೊಳ್ಳಲಿದೆ. ಇದ್ರ ಮಧ್ಯೆ ಎಸ್‌ಐಟಿ ತನಿಖೆಗೆ ಕೊಟ್ಟಿರೋ ಸರ್ಕಾರದ ನಡೆಯನ್ನ ಕಾಂಗ್ರೆಸ್ ಹಿರಿಯ ನಾಯಕನೇ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಉಗ್ರರ ಟಾರ್ಗೆಟ್ ಆಗಿತ್ತು ಧರ್ಮಸ್ಥಳದ ಮಂಜುನಾಥ ದೇಗುಲ.. ಕುಕ್ಕರ್ ಬ್ಲಾಸ್ಟ್ ಕೇಸ್ನ ಸತ್ಯ ಬಯಲು
‘ಅಸ್ಥಿಪಂಜರ’ಗಳ ಹುಡುಕಾಟ!
ಅನಾಮಿಕ ದೂರುದಾರನ ಆರೋಪವನ್ನ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಕೊಟ್ಟಿದೆ. ಇದೀಗ ಕಂಡಕಂಡಲ್ಲಿ ಭೂಮಿಯನ್ನ ಅಗೆಯುತ್ತಾ ಅಸ್ಥಿಪಂಜರದ ಸರ್ಚಿಂಗ್ ನಡೀತಿದೆ. ಇದ್ರ ಮಧ್ಯೆ ಧರ್ಮಸ್ಥಳದ ಪರ ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿ ಧ್ವನಿ ಎತ್ತಿದ್ದಾರೆ. ಧರ್ಮಸ್ಥಳಕ್ಕೆ ಅವಹೇಳನ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳೇ ಏನು ಮಾಡುತ್ತಿದ್ದೀರಿ ಅಂತ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದ ಅಪ್ಪು ಕೋಣ ಇನ್ನಿಲ್ಲ
ಧರ್ಮಸ್ಥಳದ ವಠಾರವನ್ನು ಎಸ್ಐಟಿಯವರು ಅಗೆಯುತ್ತಿದ್ದಾರೆ. ಧರ್ಮಸ್ಥಳ ಹೆಮ್ಮೆಯ ಸ್ಥಳ. ಪೂಜಾರಿ ಇವತ್ತು ಬಾಯಿ ಬಿಟ್ಟಿದ್ದಾನೆ. ಧರ್ಮಸ್ಥಳವನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಯಮನಿಂದಲೂ ಸಾಧ್ಯವಿಲ್ಲ. ಕುದ್ರೋಳಿ ದೇವಸ್ಥಾನದಲ್ಲಿ ಮಾತ್ರ ಭಕ್ತನಲ್ಲ, ನಾನು ಧರ್ಮಸ್ಥಳದ ಭಕ್ತ. ಎಸ್‌ಐಟಿಯವರು ಹುಡುಕಿದ್ರೂ ಏನು ಸಿಗುತ್ತಿಲ್ಲ.
ಮುಖ್ಯಮಂತ್ರಿಯವರೇ ಏನು ಮಾಡುತ್ತಿದ್ದೀರಿ ನೀವು. ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ. ಅದಕ್ಕೆ ಬಿಡೋದಿಲ್ಲ. ಧರ್ಮಸ್ಥಳದ ಹೆಸರು ಹಾಳು ಮಾಡೋದಕ್ಕೆ ಪೂಜಾರಿ ಬಿಡೋದಿಲ್ಲ. ಮಸೀದಿ, ಚರ್ಚ್‌ಗಳಲ್ಲಿ ಶವ ಹೂತಿಡಲಿಲ್ವಾ? ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ?
ಜನಾರ್ದನ್ ಪೂಜಾರಿ, ಕಾಂಗ್ರೆಸ್ ಹಿರಿಯ ನಾಯಕ
ಡಿ ಗ್ರೂಪ್ ನೌಕರರಿಗೆ ನೋಟಿಸ್!
ಧರ್ಮಸ್ಥಳ ಗ್ರಾಮದ ಸುತ್ತಾ ಈಗಾಗಲೇ 16 ಸ್ಥಳಗಳಲ್ಲಿ ಎಸ್‌ಐಟಿ ಉತ್ಖನನ ಮಾಡಿದೆ. ಈಗಾಗಲೇ ಅಸ್ಥಿಪಂಜರ ಶೋಧಕಾರ್ಯ ಬಾಹುಬಲಿ ಬೆಟ್ಟದತ್ತ ಬಂದಿದೆ. ಇವತ್ತು ಭಾನುವಾರವಾಗಿದ್ದು, ಶೋಧಕಾರ್ಯದಿಂದ ಎಸ್‌ಐಟಿ, ಎಫ್‌ಎಸ್‌ಎಲ್ ತಂಡ, ಕಂದಾಯ ಅಧಿಕಾರಿಗಳು, ಕಾರ್ಮಿಕರು ಬಿಡುವು ಪಡೆದುಕೊಂಡಿದ್ದಾರೆ. ನಾಳೆಯಿಂದ ಮತ್ತೆ ರತ್ನಗಿರಿ ರಹಸ್ಯ ಭೇದಿಸಲು ಎಸ್‌ಐಟಿ ಶೋಧಕಾರ್ಯ ಮುಂದುವರಿಯಲಿದೆ. ಇದ್ರ ಮಧ್ಯೆ ಈ ಹಿಂದೆ ಅನಾಮಿಕ ಶ*ವಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು. ಡಿ ಗ್ರೂಪ್ ನೌಕರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಎಸ್‌ಐಟಿ ಸಜ್ಜಾಗಿದೆ.
ಅಸ್ಥಿಪಂಜರ ರಹಸ್ಯ ಬೆನ್ನತ್ತಿ..
ಅನಾಮಿಕ ದೂರುದಾರ ನೀಡಿರುವ ಹೇಳಿಕೆಯ ಬಗ್ಗೆ ಎಸ್‌ಐಟಿ ಕೂಲಂಕುಷ ಪರಿಶೀಲನೆಗೆ ಮುಂದಾಗಿದೆ. ಈಗಾಗಲೇ 1995 ರಿಂದ 2014ರವರೆಗೆ ಅನಾಮಿಕನೊಂದಿಗೆ ಕೆಲಸ ಮಾಡಿದ ಸಫಾಯಿ ಕರ್ಮಚಾರಿಗಳ ವಿಚಾರಣೆ ನಡೆದಿದೆ. ಇದೀಗ 1995 ರಿಂದ 2014 ರ ವರಗೆ ಧರ್ಮಸ್ಥಳ ಗ್ರಾಮದಲ್ಲಿ ನಡೆದ UDR, ಕೊಲೆ, ಅನಾಥ ಶ*ವತ್ತೆ ಪ್ರಕರಣಗಳ ತನಿಖೆಯನ್ನ ಎಸ್‌ಐಟಿ ಆರಂಭಿಸಿದೆ. ಆ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರ ಲೀಟ್, ಡಿ ಗ್ರೂಪ್ ನೌಕರರ ದಾಖಲೆಗಳನ್ನ ಎಸ್‌ಐಟಿ ಪರಿಶೀಲನೆ ನಡೆಸುವಲ್ಲಿ ನಿರತವಾಗಿದೆ. ದಾಖಲೆಗಳು ದೊರೆತ ಮೇಲೆ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಹಾಗೂ ಡಿ ಗ್ರೂಪ್ ನೌಕರರಿಗೆಲ್ಲಾ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ 6 ಜನರ ಬಂಧನ.. ಇನ್ನುಳಿದವರಿಗಾಗಿ ಹುಡುಕಾಟ ನಡೆಸಿದ ಪೊಲೀಸರು
ನೇತ್ರಾವತಿ ತಟದಲ್ಲಿ ನಡೆದಿರೋ ಅಧರ್ಮದ ಕೂಪವನ್ನ ಭೇದಿಸಲು ಎಸ್‌ಐಟಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಈಗ ಸಿಕ್ಕಿರೋ ಮೂಳೆಗಳ ಹಿಂದಿನ ಮರ್ಮವನ್ನ ಕೂಲಂಕುಷವಾಗಿ ಪರಿಶೀಲನೆ ನಡೆಸ್ತಿದೆ. ಇದ್ರ ಮಧ್ಯೆ ಧರ್ಮಸ್ಥಳಕ್ಕೆ ಅಪಮಾನ ಅಂತ ತನಿಖೆಗೆ ಅನುಮತಿ ನೀಡಿದ ಸರ್ಕಾರದ ನಡೆಯನ್ನೇ ಕೆಲವರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT ಅನ್ನು ಪೊಲೀಸ್ ಠಾಣೆ ಎಂದು ಘೋಷಿಸಿದ ಸರ್ಕಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ