ಬೆಂಗಳೂರು ವಾಹನ ಸವಾರರೇ ಅಲರ್ಟ್​.. ಸಂಚಾರ ಮಾರ್ಗದಲ್ಲಿ ಭಾರೀ ಬದಲಾವಣೆ..!

ರಾಜಧಾನಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಸಾರ್ವಜನಿಕರಿಗಾಗಿ ಬಿಗಿ ಭದ್ರತೆಯ ನಡುವೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.

author-image
Ganesh Kerekuli
Aero India ಎಫೆಕ್ಟ್! ಬೆಂಗಳೂರಲ್ಲಿ ಭಯಂಕರ ಟ್ರಾಫಿಕ್ ಜಾಮ್..!
Advertisment

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಸಾರ್ವಜನಿಕರಿಗಾಗಿ ಬಿಗಿ ಭದ್ರತೆಯ ನಡುವೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಭದ್ರತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ನಗರ ಸಂಚಾರ ಪೊಲೀಸರು ವಾಹನ ಸವಾರರಿಗೆ ಕೆಲವು ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ಕಲರ್ ಕೋಡ್ ಪಾಸ್ ಮೂಲಕ ಪ್ರವೇಶ

ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಈಗಾಗಲೇ ವಿಶೇಷ ಪಾಸ್‌ಗಳನ್ನು ವಿತರಿಸಲಾಗಿದೆ. ಗೊಂದಲ ನಿವಾರಿಸಲು ಪಾಸ್‌ಗಳಿಗೆ 'ಕಲರ್ ಕೋಡ್' ನೀಡಲಾಗಿದ್ದು, ನಿಗದಿತ ಬಣ್ಣದ ಪಾಸ್ ಹೊಂದಿರುವವರು ಅದಕ್ಕೆ ಸೂಚಿಸಲಾದ ಗೇಟ್‌ಗಳ ಮೂಲಕವೇ ಪ್ರವೇಶಿಸಬೇಕಿದೆ.

ಗೇಟ್-2: ತುರ್ತು ಸೇವಾ ವಾಹನಗಳ (ಆಂಬುಲೆನ್ಸ್, ಅಗ್ನಿಶಾಮಕ) ಪ್ರವೇಶಕ್ಕೆ ಮೀಸಲಿಡಲಾಗಿದೆ.

ಗೇಟ್-4: ಮಾಧ್ಯಮದ ಪ್ರತಿನಿಧಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ವಾಹನ ಸಂಚಾರ ನಿರ್ಬಂಧ (ಬೆಳಗ್ಗೆ 8.30 ರಿಂದ 10.30 ರವರೆಗೆ):

ಪರೇಡ್ ಹಿನ್ನೆಲೆಯಲ್ಲಿ ಮೈದಾನದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ:
ಕಬ್ಬನ್ ರಸ್ತೆ

  • ಕಾಮರಾಜ ರಸ್ತೆ
  • ಬಿಆರ್​ವಿ ರಸ್ತೆ

ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು

  • ಇನ್ಫೆಂಟ್ರಿ ರಸ್ತೆಯಿಂದ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ಈ ಕೆಳಗಿನ ಮಾರ್ಗವನ್ನು ಅನುಸರಿಸಲು ಸೂಚಿಸಲಾಗಿದೆ.
  • ಇನ್ ಫೆಂಟ್ರಿ ರಸ್ತೆಯಲ್ಲಿ ನೇರವಾಗಿ ಸಾಗಿ ಸಫೀನಾ ಪ್ಲಾಜಾ ಬಳಿ ಎಡತಿರುವು ಪಡೆಯುವುದು.
  • ಅಲ್ಲಿಂದ ಮೈನ್ ಗಾರ್ಡ್ ರಸ್ತೆ - ಆಲೀಸ್ ಸರ್ಕಲ್ - ಡಿಸ್ಪೆನ್ಸರಿ ರಸ್ತೆ ಮೂಲಕ ಸಾಗಿ ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ
  • ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆಯುವುದು.
  • ನಂತರ ಕಾಮರಾಜ ರಸ್ತೆ - ಕಬ್ಬನ್ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದು.

ವಾಹನ ನಿಲುಗಡೆ ನಿಷೇಧಿತ ಪ್ರದೇಶಗಳು (No Parking):

  • ಸುರಕ್ಷತೆಯ ದೃಷ್ಟಿಯಿಂದ ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ:
  • ಸೆಂಟ್ರಲ್ ಸ್ಟ್ರೀಟ್ ಮತ್ತು ಅನಿಲ್ ಕುಂಬ್ಳೆ ವೃತ್ತ.
  • ಶಿವಾಜಿನಗರ ಬಸ್ ನಿಲ್ದಾಣದ ಸುತ್ತಮುತ್ತ.
  • ಕಬ್ಬನ್ ರಸ್ತೆ (ಸಿಟಿಒ ವೃತ್ತದಿಂದ ಕೆ.ಆರ್. ರಸ್ತೆ ಜಂಕ್ಷನ್ ವರೆಗೆ).
  • ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ).
  • ಸಾರ್ವಜನಿಕರು ಮತ್ತು ವಾಹನ ಸವಾರರು ಸಂಚಾರ ಪೊಲೀಸರೊಂದಿಗೆ ಸಹಕರಿಸಿ, ಸುಗಮ ವ್ಯವಸ್ಥೆಗೆ ಅನುವು
  • ಮಾಡಿಕೊಡಬೇಕೆಂದು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ:77ನೇ ಗಣರಾಜ್ಯೋತ್ಸವ ಸಂಭ್ರಮ; ರಾಜ್ಯಪಾಲರ ಭಾಷಣದ ಮೇಲೆ ಭಾರೀ ಕುತೂಹಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bengaluru traffic republic day tableau Republic Day 2026 Republic Day Parade Manekshaw Parade Ground
Advertisment