/newsfirstlive-kannada/media/media_files/2025/10/18/sana-sucied-1-2025-10-18-16-02-54.jpg)
ಸೀನಿಯರ್ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ
ಬೆಂಗಳೂರು:ಬಿಬಿಎ ವಿದ್ಯಾರ್ಥಿನಿ ಸೀನಿಯರ್​ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ದಾರುಣ ಘಟನೆ ಬೆಂಗಳೂರಿನ ಬಾಗಲೂರಿನಲ್ಲಿ ನಡೆದಿದೆ. ಸನಾ ಪರ್ವಿನ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದು, ಆತ್ಮಹತ್ಯೆಗೆ ಪಾಸ್ ಔಟ್ ವಿದ್ಯಾರ್ಥಿಯೇ ಕಾರಣ ಅಂತ ಆಕೆಯ ಪೋಷಕರು ಆರೋಪಿಸಿದ್ದಾರೆ.
ಆಗಿದ್ದೇನು?
ಸನಾ ಪರ್ವಿನ್ ಮೂಲತಃ ಕೊಡಗಿನ ಗರಗಂದೂರು ಗ್ರಾಮದಳಾಗಿದ್ದು, ಬಾಗಲೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಸನಾ ಪರ್ವಿನ್ ಓದುತ್ತಿರುವ ಕಾಲೇಜಿನಲ್ಲೇ ರಿಫಾಸ್ ಎಂಬಾತ ಓದುತ್ತಿದ್ದ. ಆದ್ರೆ ಆತ ಪಾಸ್​ ಔಟ್​​ ಆದ ಮೇಲೂ ಕಾಲೇಜಿಗೆ ಬಂದು ವಿದ್ಯಾರ್ಥಿನಿ ಸನಾಗೆ ಕಿರುಕುಳ ನೀಡ್ತಿದ್ದ. ಇದೇ ಕಾರಣಕ್ಕೆ ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಆರೋಪಿಸಲಾಗಿದೆ. ತಾನು ವಾಸವಿದ್ದ ಪಿಜಿನಲ್ಲೇ ಸನಾ ನೇಣಿಗೆ ಶರಣಾಗಿದ್ದಾಳೆ. ಇತ್ತ ಮಗಳ ಸಾವಿಗೆ ಪಾಸ್ ಔಟ್ ವಿದ್ಯಾರ್ಥಿ ರಿಫಾಸ್ ಕಾರಣ ಅಂತ ಪೋಷಕರು ಆರೋಪಿಸುತ್ತಿದ್ದಾರೆ. ಸದ್ಯ ಪ್ರಕರಣ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್​​ ದಾಖಲಾಗಿದೆ.