/newsfirstlive-kannada/media/media_files/2025/09/22/gaming-chair-2025-09-22-15-49-46.jpg)
ಬೆಂಗಳೂರು:ಸಿಲಿಕಾನ್​ ಸಿಟಿಯಲ್ಲಿ ವಾಹನ ದಟ್ಟಣೆ ಹೆಚ್ಚಾದಂತೆ ನಿತ್ಯ ಟ್ರಾಫಿಕ್​ ಕಿರಿಕಿರಿ ಕೂಡ ಹೆಚ್ಚಾಗುತ್ತಿದೆ. ಜನರು ಒಂದ್ಕಡೆಯಿಂದ ಮತ್ತೊಂದ್ಕಡೆಗೆ ಹೋಗಲು ಹರಸಾಹಸವನ್ನೇ ಪಡಬೇಕಾಗುತ್ತದೆ. ಅಂತದ್ರಲ್ಲಿ ಆಟೋ ಚಾಲಕ ಒಬ್ಬರು ತಮ್ಮ ಆಟೋದಲ್ಲಿ ಎರ್ಗಾನೊಮಿಕ್ ಗೇಮಿಂಗ್ ಚೇರ್ ಅಳವಡಿಸಿದ್ದಾರೆ.
ಎರ್ಗಾನೊಮಿಕ್ ಗೇಮಿಂಗ್ ಚೇರ್ ಆಟೋವನ್ನ ನರಸಿಂಹ ಕಂದೂರಿ ಎಂಬುವವರು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಆಟೋ ಚಾಲಕ ನರಸಿಂಹ ಕಂದೂರಿ ಎಂಬುವವರು ತಮ್ಮ ಆಟೋದಲ್ಲಿ ಎರ್ಗಾನೊಮಿಕ್ ಗೇಮಿಂಗ್ ಚೇರ್ ಅಳವಡಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಬ್ಬ ಆಟೋ ಚಾಲಕ ಅಖಿಲೇಶ್ ಯಾದವ್ ಕೂಡ ತಮ್ಮ ಆಟೋಗೆ ಗೇಮಿಂಗ್​ ಚೇರ್​ ಅಳವಡಿಸಿದ್ದು, ಸದ್ಯ ಎರ್ಗಾನೊಮಿಕ್ ಗೇಮಿಂಗ್ ಚೇರ್ ಆಟೋ ಭಾರೀ ವೈರಲ್​ ಆಗ್ತಿದೆ.
ಗೇಮಿಂಗ್ ಚೇರ್ ವಿಶೇಷತೆ ಏನು..?
ಗೇಮಿಂಗ್ ಚೇರ್​ನಲ್ಲಿ ದೀರ್ಘಕಾಲ ಕುಳಿತು ಯಾವುದಾದರೂ ಗೇಮ್ ಆಡಿದರೆ ಬೇಸರ ಎನಿಸುವುದಿಲ್ಲ. ಗೇಮಿಂಗ್​ಗೆ ತಕ್ಕಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ನಮ್ಮ ದೇಹದ ಭಾಗ ಸೊಂಟದ ಬೆಂಬಲದಿಂದ ಆರ್ಮ್‌ರೆಸ್ಟ್‌ಗಳು ಮತ್ತು ಬೆನ್ನುಹೊರೆಯ ನೈಸರ್ಗಿಕ ವಕ್ರತೆಯನ್ನು ಬೆಂಬಲಿಸುವಂತ ವೈಶಿಷ್ಟ್ಯ ಇರುತ್ತದೆ. ಅಂದರೆ ಆರೋಗ್ಯಕ್ಕೆ ಒಳ್ಳೆಯದು. ಈ ಚೇರ್ ಉಪಯೋಗಿಸುವುದರಿಂದ ಬೆನ್ನು, ಕುತ್ತಿಗೆ ನೋವು ಹೆಚ್ಚಾಗಿ ಬರುವುದಿಲ್ಲ. ಗೇಮಿಂಗ್​ಗೆ ಇದು ಹೆಚ್ಚು ಆರಾಮದಾಯಕ. ಹೀಗಾಗಿ ಆಟೋ ಚಾಲಕ ಅಳವಡಿಕೆ ಮಾಡಿಕೊಂಡಿರಬಹುದು.