/newsfirstlive-kannada/media/media_files/2025/09/17/megha-1-2025-09-17-10-30-26.jpg)
ಬೆಂಗಳೂರು: ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 32 ವರ್ಷದ ಗೃಹಿಣಿ ನಿದ್ರೆ ಮಾತ್ರೆ ಸೇವಿಸಿ ಜೀವಬಿಟ್ಟಿದ್ದಾಳೆ. ಮೇಘಾ ಮೃತ ದುರ್ದೈವಿ, ಹೆಗ್ಗನಹಳ್ಳಿ ನಿವಾಸಿ ಆಗಿದ್ದರು.
ಮೃತಳ ಪೋಷಕರು ಆಕೆಯ ಪತಿ ರಾಜೇಶ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ರಾಜೇಶ್ನನ್ನ ಪ್ರೀತಿಸಿ ಮದುವೆಯಾಗಿದ್ದರು. ಅದಕ್ಕೆ ಸಾಕ್ಷಿಯಾಗಿ 11 ತಿಂಗಳ ಮಗು ಕೂಡ ಇದೆ. ಇದೀಗ ವರದಕ್ಷಿಣೆ ಕಿರುಕುಳಕ್ಕೆ ಮಗಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಅಂತಾ ಪೋಷಕರು ಆರೋಪಿಸಿದ್ದಾರೆ.
ಹೆಗ್ಗನಹಳ್ಳಿ ನಿವಾಸದಲ್ಲಿ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಮಲಗಿದ್ದಳು. ವಿಷಯ ಗೊತ್ತಾಗುತ್ತಿದ್ದಂತೆಯೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಜೀವಕಳೆದುಕೊಂಡಿದ್ದಾಳೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:‘ಆನೆ ಮೇಲಿನ ಅಂಬಾರಿ..’ ನಟಿ ಮಯೂರಿ ಈಗ ಏನ್ಮಾಡ್ತಿದ್ದಾರೆ..? Photos
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ