ಬೈಕ್ ಟ್ಯಾಕ್ಸಿಯಿಂದ ಬದುಕು ಕಟ್ಟಿಕೊಂಡವ್ರಿಗೆ ಶಾಕ್.. ಸರ್ಕಾರದ ಸಮಿತಿಯಿಂದ ಕಠಿಣ ಕ್ರಮಕ್ಕೆ ಶಿಫಾರಸು..!

ಬೆಂಗಳೂರು ಟ್ರಾಫಿಕ್​ಗೆ ‘ಬೈಕ್ ಟ್ಯಾಕ್ಸಿ’ ಮತ್ತಷ್ಟು ಹೊರೆಯಾಯ್ತಾ..? ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ ರಾಜ್ಯ ಸರ್ಕಾರ ರಚನೆ ಮಾಡಿರುವ ಸಮಿತಿ ಮಾಡಿರುವ ಸ್ಪಷ್ಟ ಶಿಫಾರಸುಗಳು.

author-image
Ganesh Kerekuli
Bike taxi
Advertisment
  • ಬೆಂಗಳೂರು ಟ್ರಾಫಿಕ್​ಗೆ ಇನ್ನಷ್ಟು ಹೊರೆ ಅನುಮತಿ ಕೊಡೋದು ಬೇಡ
  • ಸರ್ಕಾರದ ಉನ್ನತಾಧಿಕಾರಿಗಳ ಸಮಿತಿಯಿಂದ ಸ್ಪಷ್ಟ ಶಿಫಾರಸು
  • ಹೈಕೋರ್ಟ್​ಗೆ ವರದಿ ಸಲ್ಲಿಕೆ ಮಾಡಿದ ಉನ್ನತಾಧಿಕಾರಿಗಳ ಸಮಿತಿ

ಬೆಂಗಳೂರು ಟ್ರಾಫಿಕ್​ಗೆ ‘ಬೈಕ್ ಟ್ಯಾಕ್ಸಿ’ ಮತ್ತಷ್ಟು ಹೊರೆಯಾಯ್ತಾ..? ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ ರಾಜ್ಯ ಸರ್ಕಾರ ರಚನೆ ಮಾಡಿರುವ ಸಮಿತಿ ಮಾಡಿರುವ ಸ್ಪಷ್ಟ ಶಿಫಾರಸುಗಳು. 

ಹಿಂದೆ ಬೈಕ್ ಟ್ಯಾಕ್ಸಿ ಕುರಿತು ವರದಿ ನೀಡಲು ಸರ್ಕಾರ ಸಮಿತಿ ರಚಿಸಿತ್ತು. ಸಾರಿಗೆ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚನೆ ಆಗಿರುವ ಉನ್ನತಾಧಿಕಾರಿಗಳ ಸಮಿತಿಯು, ಬೈಕ್ ಟ್ಯಾಕ್ಸಿ ಅನುಮತಿ ಮಾಡೋದು ಬೇಡ ಎಂದು ವರದಿಯಲ್ಲಿ ಉಲ್ಲೇಖ ಮಾಡಿದೆ. ಜೊತೆಗೆ ಬೈಕ್ ಟ್ಯಾಕ್ಸಿ ಅನುಮತಿಯಿಂದಾಗೋ ಸಮಸ್ಯೆ ಬಗ್ಗೆ ವರದಿ ಸಿದ್ಧಪಡಿಸಿ ಹೈಕೋರ್ಟ್​ಗೆ ಮಾಹಿತಿ ನೀಡಿದೆ. 

ಸಮಿತಿಯ ವಾದವೇನು..? 

ಬೆಂಗಳೂರು ನಗರದಲ್ಲಿ 2015- 2025ರವರೆಗೆ ಶೇಕಡ 42 ಜನಸಂಖ್ಯೆ ಹೆಚ್ಚಾಗಿದೆ. ಬೈಕ್‌ಗಳ ಸಂಖ್ಯೆ ಶೇ.98ರಷ್ಟು, ಕಾರುಗಳ ಸಂಖ್ಯೆ ಶೇ.79ರಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 82.83 ಲಕ್ಷ ಬೈಕ್‌, 23.83 ಲಕ್ಷ ಕಾರು, ಒಟ್ಟು 1.06 ಕೋಟಿ ವಾಹನಗಳಿವೆ. ಇದರಿಂದಲೇ ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಟ್ರಾಫಿಕ್ ಪ್ರಮಾಣ ಹೆಚ್ಚಾಗುತ್ತಿದೆ. 

ಇದನ್ನೂ ಓದಿ:ಕಾಂಗ್ರೆಸ್ ಪಾಳಯದಲ್ಲಿ ಮತ್ತೊಂದು ಸುದ್ದಿ.. ರಾಜಣ್ಣ ಪುತ್ರನ ನಡೆಗೆ ಕೈಪಡೆ ‘ಶಾ’ಕ್​​!

ಹೀಗಿದ್ದಾಗ, ಬೈಕ್‌ ಟ್ಯಾಕ್ಸಿ ಸೇವೆ ಕಾನೂನು ಬದ್ಧಗೊಳಿಸಿದ್ರೆ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ರಸ್ತೆ ಅಪಘಾತಗಳು ಹಾಗೂ ಮಹಿಳಾ ಸುರಕ್ಷತೆಗೂ ಸವಾಲು ಎದುರಾಗೋವುದು ಪಕ್ಕಾ. ಸೇವೆಗೆ ಅನುಮತಿಸಿದ್ರೆ ಮಹಿಳಾ ಪ್ರಯಾಣಿಕರ ಮೇಲಿನ ದೌರ್ಜನ್ಯ ಹೆಚ್ಚುವ ಸಾಧ್ಯತೆ ಇದೆ. ಬೈಕ್‌ ಟ್ಯಾಕ್ಸಿ ಬದಲು ಜನರು ಬಿಎಂಟಿಸಿ ಬಳಕೆಗೆ ಹೆಚ್ಚಿನ ಒಲವು ತೋರಬೇಕಾಗಿದೆ. 

ಇದರಿಂದ ಸಂಚಾರ ದಟ್ಟಣೆ ಕಡಿಮೆ ಜೊತೆಗೆ ಮಾಲಿನ್ಯ ಪ್ರಮಾಣವೂ ಇಳಿಕೆಯಾಗಲಿದೆ.  2 ಕಿ.ಮೀ.ಗೆ ₹48 ಪ್ರಯಾಣ ಶುಲ್ಕ, ಸಾರಿಗೆಗಿಂತ ಬೈಕ್ ಟ್ಯಾಕ್ಸಿ ಪ್ರಯಾಣದ ದರ ದುಬಾರಿಯಾಗಲಿದೆ. ಬಿಎಂಟಿಸಿ ಬಸ್‌ನಲ್ಲಿ 2 ಕಿ.ಮೀ.ಗೆ ₹6, 25ರಿಂದ 30 ಕಿ.ಮೀ. ₹32 ದರ ಕೊಡಬೇಕಾಗಿದೆ. ಅಪಘಾತದ ಸಂದರ್ಭದಲ್ಲಿ ವಿಮಾ ಮೊತ್ತ ದೊರೆಯದಂತಹ ಪರಿಸ್ಥಿತಿ ಇದೆ. ಅದರಿಂದ ಬೈಕ್‌ ಟ್ಯಾಕ್ಸಿ ಚಾಲಕರಿಗಿಂತ ಪ್ರಯಾಣಿಕರಿಗೆ ಹೆಚ್ಚಿನ ಸಮಸ್ಯೆಯಾಗುತ್ತದೆ. ಹೀಗಾಗಿ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸದಿರುವುದು ಉತ್ತಮ ಎಂದ ಸಮಿತಿಯ ಅಭಿಪ್ರಾಯವಾಗಿದೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bike taxi
Advertisment