/newsfirstlive-kannada/media/media_files/2025/08/12/kn_rajanna-1-2025-08-12-07-41-24.jpg)
ರಾಜ್ಯದಲ್ಲಿ ಕುರ್ಚಿ ಕಿತ್ತಾಟ.. ಕ್ರಾಂತಿ ಕಥಾನಕದ ಬಳಿಕ ಬ್ರೇಕ್‌ಫಾಸ್ಟ್ ಮಾಡಿ ಶಾಂತಿಯಾಗಿದೆ. ಕ್ರಾಂತಿಯ ಜನಕ ಕೆ.ಎನ್. ರಾಜಣ್ಣ ಪುತ್ರನ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನಲ್ಲಿ ರಾಜಣ್ಣನನ್ನ ಮೂಲೆಗುಂಪು ಮಾಡಿರೋ ನೆಪದಲ್ಲೇ ರಾಜೇಂದ್ರ ತುಳಿದಿರೋ ಹಾದಿ ಮತ್ತೊಂದು ಚರ್ಚೆಯನ್ನೇ ಹುಟ್ಟುಹಾಕಿದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರ ವಿರುದ್ಧವೇ ಸಿಡಿದೆದ್ದು ಮಂತ್ರಿ ಸ್ಥಾನ ಕಳೆದುಕೊಂಡವರು ಕೆ.ಎನ್. ರಾಜಣ್ಣ.. ತಂದೆಯನ್ನ ವಜಾ ಮಾಡಿದ ಕೋಪ ಪುತ್ರ ರಾಜೇಂದ್ರಗೂ ಇದೆ. ಜೊತೆಗೆ ಕೈನಲ್ಲಿ ತಮ್ಮ ತಂದೆಯಂತೆ ತಮ್ಮನ್ನೂ ಮೂಲೆಗುಂಪು ಮಾಡುವ ಸಾಧ್ಯತೆ ಇದೆ. ಹೀಗಾಗಿ ಆರ್. ರಾಜೇಂದ್ರ ಕಮಲ ಮನೆಯ ಬಾಗಿಲು ತಟ್ಟಲು ಮುಂದಾದ್ರಾ ಎಂಬ ಪ್ರಶ್ನೆ ಮೂಡಿದೆ. ಅದಕ್ಕೂ ಪ್ರಬಲ ಕಾರಣವೂ ಇದೆ.
ಇದನ್ನೂ ಓದಿ: ವಿಪಕ್ಷಗಳ ಕಣ್ಣು ಕುಕ್ಕಿದ ಸಿದ್ದು, ಡಿಕೆಶಿ ವಾಚ್.. ಹೀಗೂ ಉಂಟಾ?
/filters:format(webp)/newsfirstlive-kannada/media/media_files/2025/12/03/rajendra-rajanna-1-2025-12-03-11-11-35.jpg)
ರಾಜೇಂದ್ರ ಅಚ್ಚರಿ ಹೆಜ್ಜೆ!
ಕಾಂಗ್ರೆಸ್ ಪರಿಷತ್ ಸದಸ್ಯರಾದ ಆರ್. ರಾಜೇಂದ್ರ ಮೊನ್ನೆಯಷ್ಟೇ ಕೇಂದ್ರ ಸಚಿವ ವಿ. ಸೋಮಣ್ಣರನ್ನ ಭೇಟಿಯಾಗಿದ್ದರು. ಇದ್ರ ಬೆನ್ನಲ್ಲೇ ನಿನ್ನೆ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿಯನ್ನ ರಾಜೇಂದ್ರ ಭೇಟಿ ಮಾಡಿದ್ದಾರೆ. ಸಿಎಂ ಕುರ್ಚಿಗಾಗಿ ಸಿಎಂ-ಡಿಸಿಎಂ ಪೈಪೋಟಿ ಬೆನ್ನಲ್ಲೆ ರಾಜಣ್ಣ ಪುತ್ರ ಅಚ್ಚರಿಯ ನಡೆ ಅನುಸರಿಸಿದ್ದಾರೆ. ಬಿಜೆಪಿ ನಾಯಕರ ಜೊತೆ ರಾಜೇಂದ್ರ ಮಾತುಕತೆ ಮಾಡ್ತಿರೋದು ಯಾಕೆ ಎಂಬ ಚರ್ಚೆ ಶುರುವಾಗಿದೆ. ಅಲ್ಲದೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ಎಂಎಲ್‌ಸಿ ರಾಜೇಂದ್ರ ಬಿಜೆಪಿ ನಾಯಕರನ್ನ ಜೊತೆ ಸರಣಿ ಭೇಟಿ ಮಾಡ್ತಿರೋದು ಭಾರೀ ಕುತೂಹಲ ಹುಟ್ಟಿಸಿದೆ.
/filters:format(webp)/newsfirstlive-kannada/media/media_files/2025/12/03/rajendra-rajanna-2025-12-03-11-11-50.jpg)
ಡೆಲ್ಲಿಯಲ್ಲಿ ಕುಳಿತು ಅಂಕ ಗಣಿತದ ಲೆಕ್ಕ ಹಾಕ್ತಿದ್ದ ಅಮಿತ್​​​ ಶಾ, ಕರ್ನಾಟಕ ಪಾಲಿಟಿಕ್ಸ್​​ ಮೇಲೆ ಕಣ್ಣೀಟ್ಟು ದಾಳ ಉರುಳಿಸಿದಂಗೆ ಕಾಣಿಸ್ತಿದೆ. ಸೆಪ್ಟೆಂಬರ್​​ನಲ್ಲೇ ಕ್ರಾಂತಿ ಗೀತೆ ಹಾಡಿದ್ದ ರಾಜಣ್ಣ, ಈ ಪವರ್​​ ಫೈಟ್​​ನ ಕೇಂದ್ರ ಬಿಂದು. ಅದೇ ರಾಜಣ್ಣ ಪುತ್ರ ರಾಜೇಂದ್ರ, ದೆಹಲಿಯಲ್ಲಿ ಪವರ್​​​ ಗೇಮ್​​​ಗೆ ಬಿಗ್​​​ ಟ್ವಿಸ್ಟ್​​ ಕೊಟ್ಟಿದ್ದಾರೆ.. ಅಂದ್ಹಾಗೆ ಸಹಕಾರ ಸಮಾವೇಶದ ನೆಪದಲ್ಲಿ ನವೆಂಬರ್​​ 20ರಂದು ರಾಜಣ್ಣ ಪುತ್ರ ರಾಜೇಂದ್ರ ಅಮಿತ್​ ಶಾರನ್ನ ಭೇಟಿ ಮಾಡಿದ್ರು. ಈ ವೇಳೆ ಪ್ರತ್ಯೇಕ ಕೊಠಡಿಯಲ್ಲಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಇತ್ತು. ಈ ಭೇಟಿಯಲ್ಲಿ ಕೈಕುಲುಕಿ ಬೆನ್ನುತಟ್ಟಿ ಎಲ್ಲ ಸರಿಹೋಗುತ್ತೆ ಅಂತ ಅಮಿತ್​​​ ಶಾ ಹೇಳಿದ ಮಾತು, ಭಾರೀ ಚರ್ಚೆಗೆ ಗ್ರಾಸ ಆಗಿದೆ.
/filters:format(webp)/newsfirstlive-kannada/media/media_files/2025/12/03/rajendra-2025-12-03-11-12-29.jpg)
ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಒಂದ್ವೇಳೆ ಅಧಿಕಾರ ಬದಲಾವಣೆಯಲ್ಲಿ ಡಿಕೆಶಿ ಕೈ ಮೇಲಾದ್ರೆ ರಾಜಣ್ಣ ಮತ್ತು ಪುತ್ರ ರಾಜೇಂದ್ರಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕ್ರಾಂತಿಯ ಹರಿಕಾರ ಕೆ.ಎನ್. ರಾಜಣ್ಣನ ಪುತ್ರನ ಈ ರೀತಿಯ ಯೋಚನೆ ಮಾಡಿದ್ರಾ? ಎಂಬ ಪ್ರಶ್ನೆ ಮೂಡಿದೆ. ಆದ್ರೆ, ಇದಕ್ಕೆಲ್ಲಾ ಕಾಲವೇ ಉತ್ತರ ಕೊಡಬೇಕಿದೆ.
ವಿಶೇಷ ವರದಿ: ಗಣಪತಿ, ಪೊಲಿಟಿಕಲ್ ಬ್ಯುರೋ
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us