ಸಿ.ಜೆ.ರಾಯ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ವಶಕ್ಕೆ ಸಿಕ್ಕ ಡೈರಿಯಲ್ಲಿ ನಟಿಯರು, ರಾಜಕಾರಣಿಗಳ ಹೆಸರು ಪತ್ತೆ!

ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ.ರಾಯ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ತನಿಖೆ ನಡೆಸುತ್ತಿರುವ ಅಶೋಕನಗರ ಪೊಲೀಸರು, ನಿನ್ನೆ ರಾತ್ರಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಯ ಮೇಲೆ ದಾಳಿ ನಡೆಸಿ ಅಲ್ಲಿನ ಪ್ರಮುಖ ದಾಖಲೆಗಳ ಜೊತೆಗೆ ಡೈರಿಯನ್ನು ವಶಪಡಿಸಿಕೊಂಡಿದ್ದಾರೆ.

author-image
Ganesh Kerekuli
CONFIDENT GROUP OWNER CJ ROY SUICIDE
Advertisment

ಬೆಂಗಳೂರು: ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ.ರಾಯ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಶೋಕನಗರ ಪೊಲೀಸರು, ನಿನ್ನೆ ರಾತ್ರಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಯ ಮೇಲೆ ದಾಳಿ ನಡೆಸಿ ಅಲ್ಲಿನ ಪ್ರಮುಖ ದಾಖಲೆಗಳ ಜೊತೆಗೆ ಸಿ.ಜೆ.ರಾಯ್ ಅವರ ವೈಯಕ್ತಿಕ ಡೈರಿಯನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಡೈರಿಯಲ್ಲಿದೆ ನಟಿಯರು, ರಾಜಕಾರಣಿಗಳ ಹೆಸರು!

ಪೊಲೀಸರು ವಶಪಡಿಸಿಕೊಂಡಿರುವ ಈ ಡೈರಿಯಲ್ಲಿ ಹಲವು ಪ್ರಮುಖ ನಟಿಯರು, ಮಾಡೆಲ್‌ಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಹೆಸರುಗಳು ಉಲ್ಲೇಖವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಸಿ.ಜೆ.ರಾಯ್ ಅವರು ತಮ್ಮ ಉದ್ಯಮದ ಭಾಗವಾಗಿ ಆಯೋಜಿಸುತ್ತಿದ್ದ ಹಲವು ಕಾರ್ಯಕ್ರಮಗಳಿಗೆ ಈ ನಟಿಯರನ್ನು ಮತ್ತು ಮಾಡೆಲ್‌ಗಳನ್ನು ಆಹ್ವಾನಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಡಾ.ಸಿ.ಜೆ.ರಾಯ್ ಕೇಸ್: ಐಟಿ ಅಧಿಕಾರಿಗಳ ಮೇಲೆ ಆರೋಪವಿಲ್ಲ! ಎಂಡಿ ಟಿ.ಎ. ಜೋಸೆಫ್ ನೀಡಿದ ದೂರಿನಲ್ಲೇನಿದೆ?

cj roy

ತನಿಖೆಯ ಹಾದಿ ಬದಲಿಸಿದ 'ಡೈರಿ' ಅಂಶಗಳು:

  • ಡೈರಿಯಲ್ಲಿ ಹೆಸರುಗಳನ್ನು ಯಾವ ಉದ್ದೇಶಕ್ಕಾಗಿ ಬರೆಯಲಾಗಿದೆ ಎಂಬ ಬಗ್ಗೆ ಪೊಲೀಸರು ಈಗ ಇಂಚಿಂಚೂ ತನಿಖೆ
  • ನಡೆಸುತ್ತಿದ್ದಾರೆ.
  • ಬರೀ ಈವೆಂಟ್‌ಗಳ (Events) ಆಯೋಜನೆಗಾಗಿ ಈ ಹೆಸರುಗಳನ್ನು ಪಟ್ಟಿ ಮಾಡಲಾಗಿದೆಯೇ?
  • ಅಥವಾ ಈ ವ್ಯಕ್ತಿಗಳಿಗೂ ಮತ್ತು ಸಿ.ಜೆ.ರಾಯ್ ಅವರಿಗೂ ಬೇರೆ ಯಾವುದಾದರೂ ವ್ಯವಹಾರಿಕ ಅಥವಾ ವೈಯಕ್ತಿಕ ಸಂಬಂಧವಿತ್ತೇ?
  • ಅವರ ಸಾವಿಗೆ ಅಥವಾ ಅವರು ಅನುಭವಿಸುತ್ತಿದ್ದ ಒತ್ತಡಕ್ಕೆ ಈ ಹೆಸರುಗಳಿಗೂ ಏನಾದರೂ ಸಂಬಂಧವಿದೆಯೇ?
  • ಎಂಬಿತ್ಯಾದಿ ಆಯಾಮಗಳಲ್ಲಿ ಅಶೋಕನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಕೇರಳದ 16 ಪ್ರಾಜೆಕ್ಟ್ ಗಳ ನಂಟು

ಸದ್ಯ ಕಾನ್ಫಿಡೆಂಟ್ ಗ್ರೂಪ್ ವತಿಯಿಂದ ಕೇರಳದಲ್ಲಿ ಒಟ್ಟು 16 ಬೃಹತ್ ಪ್ರಾಜೆಕ್ಟ್‌ಗಳ ಕೆಲಸ ನಡೆಯುತ್ತಿದೆ. ಈ ಪ್ರಾಜೆಕ್ಟ್‌ಗಳಿಗೆ ಸಂಬಂಧಿಸಿದಂತೆ ರಾಯ್ ಅವರು ಕೇರಳ ಮತ್ತು ಕರ್ನಾಟಕದಲ್ಲಿ ದೊಡ್ಡ ಮಟ್ಟದ ಈವೆಂಟ್‌ಗಳನ್ನು ಮಾಡುತ್ತಿದ್ದರು. ಈ ಕಾರ್ಯಕ್ರಮಗಳಿಗೆ ಸ್ಯಾಂಡಲ್‌ವುಡ್ ಸೇರಿದಂತೆ ವಿವಿಧ ಚಿತ್ರರಂಗದ ತಾರೆಯರನ್ನು ಮತ್ತು ರಾಜಕಾರಣಿಗಳನ್ನು ಕರೆಸಲಾಗುತ್ತಿತ್ತು. ಡೈರಿಯಲ್ಲಿರುವ ಹೆಸರುಗಳು ಈ ಪ್ರಾಜೆಕ್ಟ್‌ಗಳಿಗೆ ಸಂಬಂಧಿಸಿದ್ದಿರಬಹುದು ಎಂಬುದು ಪ್ರಾಥಮಿಕ ಅಂದಾಜು.

ಪೊಲೀಸ್ ಕಣ್ಗಾವಲಿನಲ್ಲಿ ಡೈರಿ

ಸಿ.ಜೆ.ರಾಯ್ ಅವರ ಜೀವನದ ಕೊನೆಯ ದಿನಗಳ ಬಗ್ಗೆ ಮತ್ತು ಅವರ ಮನಸ್ಥಿತಿಯ ಬಗ್ಗೆ ಈ ಡೈರಿ ಪ್ರಮುಖ ಮಾಹಿತಿಯನ್ನು ಬಿಟ್ಟುಕೊಡುವ ಸಾಧ್ಯತೆಯಿದೆ. ಪೊಲೀಸರು ಡೈರಿಯ ಪ್ರತಿಯೊಂದು ಪುಟವನ್ನೂ ಕೂಲಂಕುಷವಾಗಿ ಅಧ್ಯಯನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಹಲವು ಪ್ರಭಾವಿ ವ್ಯಕ್ತಿಗಳಿಗೆ ನೋಟಿಸ್ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಉದ್ಯಮ ಲೋಕದ ದಿಗ್ಗಜರೊಬ್ಬರ ಸಾವಿನ ಹಿಂದಿರುವ ಅಸಲಿ ಸತ್ಯ ಹೊರಬರಲು ಈ ಡೈರಿ 'ಕೀ' ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್ ರಾಣಾ.. ಇವ್ರ ಆಲ್​ರೌಂಡ್ ಆಟಕ್ಕೆ ಫಿದಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Confident group Income tax department raid Babu c Joseph CJ Roy
Advertisment