/newsfirstlive-kannada/media/media_files/2026/01/30/harshith-rana-2026-01-30-15-20-50.jpg)
ಟೀಮ್ ಇಂಡಿಯಾ ಆಟಗಾರ ಹರ್ಷಿತ್ ರಾಣಾ ದಿನೇ ದಿನೇ ತನ್ನ ಪರ್ಫಾಮೆನ್ಸ್​ನಿಂದ ಗಮನ ಸೆಳೆಯುತ್ತಿದ್ದಾರೆ. ಬೌಲಿಂಗ್, ಬ್ಯಾಟಿಂಗ್​​ನಿಂದ ಕಾಂಟ್ರಿಬ್ಯೂಟ್ ಮಾಡ್ತಿರುವ ರಾಣಾ ರೈಸಿಂಗ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಒಂದೇ ವರ್ಷದಲ್ಲಿ ರಾಣಾ, ಸ್ಟಾರ್​​ ಆಟಗಾರರನ್ನೂ ಸೈಡ್ ಹೊಡೆದಿದ್ದಾರೆ. ಹರ್ಷಿತ್ ರಾಣಾ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಬೌಲಿಂಗ್ ಮಾಡೋಕೂ ಸೈ.. ಬ್ಯಾಟಿಂಗ್ ಮಾಡೋಕೂ ಜೈ.. ಕೋಚ್ ಮತ್ತು ಕ್ಯಾಪ್ಟನ್ ಏನೇ ರೋಲ್ ಕೊಟ್ರೂ, ಜವಾಬ್ದಾರಿಯಿಂದ ನಿಭಾಯಿಸೋದನ್ನ ಈ ಯುವ ಕ್ರಿಕೆಟಿಗ ಕರಗತ ಮಾಡಿಕೊಂಡಿದ್ದಾನೆ. ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಒಂದೇ ವರ್ಷದಲ್ಲಿ ಈ ಆಟಗಾರ, ಸೆಲೆಕ್ಟರ್ಸ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ಗಮನ ಸೆಳೆದಿದ್ದಾನೆ. ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಅಂತ ಲೇಬಲ್ ಒತ್ತಿಸಿಕೊಂಡಿದ್ದಾನೆ.
ಇದನ್ನೂ ಓದಿ: 4 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್; ಲಾಕ್ ಆಗ್ತಿದ್ದಂತೆ ಡ್ರಾಮಾ ಬೇರೆ..!
/filters:format(webp)/newsfirstlive-kannada/media/media_files/2025/10/21/harshit-rana-2025-10-21-16-29-38.jpg)
ಡೆಲ್ಲಿ ಮೂಲದ ಹರ್ಷಿತ್ ರಾಣಾ ಸದ್ಯ ಮೂರೂ ಫಾರ್ಮೆಟ್​ ಪ್ಲೇಯರ್. ಟೆಸ್ಟ್, ODI ಮತ್ತು T20 ಕ್ರಿಕೆಟ್​​​ನಲ್ಲಿ ರಾಣಾ, ದರ್ಬಾರ್ ನಡೆಸುತ್ತಿದ್ದಾರೆ. ಒಂದೆಡೆ ಬೌಲಿಂಗ್​ನಲ್ಲಿ ರಾಣಾ ವಿಕೆಟ್ ಬೇಟೆಯಾಡ್ತಿದ್ರೆ, ಮತ್ತೊಂದೆಡೆ ಬ್ಯಾಟ್​​ನಿಂದ ರಾಣಾ ರನ್​​​​ ಕಾಣಿಕೆ ನೀಡ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ರಾಣಾ ಉಪಸ್ಥಿತಿ, ತಂಡದ ಬ್ಯಾಟಿಂಗ್ ಡೆಪ್ತ್ ಹೆಚ್ಚಿಸಿದೆ. ಸದ್ಯ ಆಲ್​ರೌಂಡರ್ ಲಿಸ್ಟ್​ನಲ್ಲಿ ಕಾಣಿಸಿಕೊಳ್ತಿರುವ ರಾಣಾ, ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
ಟೆಸ್ಟ್, ODI ಮತ್ತು T20.. ಮೂರೂ ಫಾರ್ಮೆಟ್​​​ಗಳ ಡೆಬ್ಯೂ ಪಂದ್ಯಗಳಲ್ಲೇ ಹರ್ಷಿತ್ ಮಿಂಚಿನ ಆಟ ಪ್ರದರ್ಶಿಸಿದ್ದಾರೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ನ್ಯೂಜಿಲೆಂಡ್ ಜೊತೆಗೆ ಇಂಡಿಯಾ ‘ಎ’ ಪರವೂ ರಾಣಾ, ಜಬರ್​ದಸ್ತ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇಂದೋರ್ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಅರ್ಧಶತಕ ಸಿಡಿಸಿದ ರಾಣಾ, ಬೌಲಿಂಗ್​​ನಲ್ಲಿ 3 ಪ್ರಮುಖ ವಿಕೆಟ್ ಕಬಳಿಸಿ, ಕ್ವಾಲಿಟಿ ಆಲ್​ರೌಂಡರ್ ಎನಿಸಿಕೊಂಡ್ರು.
24 ವರ್ಷದ ಯಂಗ್ ಌಂಡ್ ಡ್ಯಾಶಿಂಗ್ ಆಲ್​ರೌಂಡರ್ ರಾಣಾ ಸದ್ಯ ಮೂರೂ ಫಾರ್ಮೆಟ್​​ಗಳಲ್ಲಿ ಟೀಮ್ ಇಂಡಿಯಾಕ್ಕೆ ಬೇಕಾಗಿರೋ ಆಲ್​ರೌಂಡರ್. ಈಗಾಗಲೇ ರಾಣಾ, ಮೊಹಮ್ಮದ್ ಸಿರಾಜ್, ಆರ್ಷ್​​ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣರಂತಹ ಬೌಲರ್​ಗಳನ್ನೇ ಹಿಂದಿಕ್ಕಿದ್ದಾರೆ. ಮೂರೂ ಫಾರ್ಮೆಟ್​ಗಳಲ್ಲೂ ಪ್ಲೇಯಿಂಗ್ ಇಲೆವೆನ್​​ಗೆ ಫಿಟ್ ಆಗೋ ಆಟಗಾರ ಅದು ಹರ್ಷಿತ್ ರಾಣಾ.
ಇದನ್ನೂ ಓದಿ:ಬೆಂಗಳೂರಲ್ಲಿ ಮಹಿಳೆ ಮೇಲೆ ಸಾಕು ನಾಯಿ ರಣ ಭೀಕರ ದಾಳಿ; ಮುಖ, ಕುತ್ತಿಗೆಗೆ ಬರೋಬ್ಬರಿ 20 ಹೊಲಿಗೆ..
ಮುಂದಿನ ತಿಂಗಳು ಭಾರತದಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಈಗಾಗಲೇ ವಿಶ್ವಕಪ್ ತಂಡದಲ್ಲಿ ಹರ್ಷಿತ್ ರಾಣಾ ಸ್ಥಾನ ಪಡೆದಿದ್ದಾರೆ. ರಾಣಾ ಪ್ಲೇಯಿಂಗ್​ನಲ್ಲಿ ಸ್ಥಾನ ಪಡೆಯೋದು ಬಹುತೇಕ ಖಚಿತ. ಟಿ-20 ಕ್ರಿಕೆಟ್​​​ಗೆ ಆಲ್​ರೌಂಡರ್​​ಗಳ ಅವಶ್ಯಕತೆ ಹೆಚ್ಚು ಇದೆ. ಹಾಗಾಗಿ ರಾಣಾ, ಶಿವಂ ದುಬೆಯನ್ನ ಓವರ್​ಟೇಕ್ ಮಾಡಿ ಹಾರ್ದಿಕ್ ಪಾಂಡ್ಯ ಜೊತೆ ಆಲ್​ರೌಂಡರ್​ ಖೋಟಾದಲ್ಲಿ ಅವಕಾಶ ಪಡೆಯೋದು ಕನ್ಫರ್ಮ್ ಆಗಿದೆ.
ಇತ್ತೀಚಿಗಷ್ಟೆ ಹರ್ಷಿತ್ ರಾಣಾ ವಿರುದ್ಧ ಭಾರೀ ಟೀಕೆಗಳು ಕೇಳಿಬಂದಿತ್ತು. ರಾಣಾ, ಕೋಚ್ ಗೌತಮ್ ಗಂಭೀರ್​​ರ ಚೇಲಾ. ಹಾಗಾಗಿ ತಂಡದಲ್ಲಿ ಅವಕಾಶ ಪಡೆಯುತ್ತಿದ್ದಾರೆ ಅಂತ ಹೇಳಲಾಗ್ತಿತ್ತು. ಮತ್ತೊಂದೆಡೆ ಭಾರತ ತಂಡದ ಮಾಜಿ ನಾಯಕ ಹಾಗೆ ಮಾಜಿ ಚೀಫ್ ಸೆಲೆಕ್ಟರ್ ಕ್ರಿಸ್ ಶ್ರೀಕಾಂತ್, ರಾಣಾ ವಿರುದ್ಧ ಒಂದೆಜ್ಜೆ ಮುಂದೆ ಹೋಗಿ ಟೀಕಿಸಿದ್ರು. ರಾಣಾ, ಕೋಚ್ ಗಂಭೀರ್​ರ YES MAN ಆಗಿದ್ದಾರೆ. ಅದಕ್ಕೆ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಅಂತ ಬಹಿರಂಗವಾಗಿ ಟೀಕಿಸಿದ್ರು.
ಅದೇ ಶ್ರೀಕಾಂತ್, ರಾಣಾ ವಿಚಾರದಲ್ಲಿ ಯು-ಟರ್ನ್ ಹೊಡೆದಿದ್ದಾರೆ. ಹರ್ಷಿತ್ ರಾಣಾ, ದಿನೇ ದಿನೇ ಮೆಚ್ಯೂರ್ಡ್ ಪ್ಲೇಯರ್ ಆಗ್ತಿದ್ದಾರೆ. ಬಾಲ್, ಬ್ಯಾಟ್​ನಿಂದ ಕಾಣಿಕೆ ನೀಡಿ ತಂಡದ ಪ್ರಮುಖ ಆಲ್​ರೌಂಡರ್​ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ರಾಣಾ, ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್ ಅಂತೆಲ್ಲಾ ಹಾಡಿ ಹೊಗಳಿದ್ರು. ಏನೇ ಇರಲಿ.. ಅನುಭವದಿಂದ ಪ್ರತಿಯೊಬ್ಬರೂ ಪಾಠ ಕಲಿಯುತ್ತಾರೆ. ಇದು ರಾಣಾಗೂ ಅನ್ವಯವಾಗುತ್ತದೆ. ರಾಣಾ, ಎಲ್ಲಾ ಫಾರ್ಮೆಟ್​ಗಳಲ್ಲೂ ಟೀಮ್ ಇಂಡಿಯಾಕ್ಕೆ ಕಾಂಟ್ರಿಬ್ಯೂಟ್ ಮಾಡಿ ಗ್ರೇಟ್ ಆಲ್​ರೌಂಡರ್ ಆಗಲಿ ಅನ್ನೋದೇ, ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಶಯ.
ಇದನ್ನೂ ಓದಿ:ಮೈಸೂರು ದಸರಾ ವಜ್ರಮುಷ್ಠಿ ಕಾಳಗದ ರೂವಾರಿ, ಟೈಗರ್ ಬಾಲಾಜಿ ನಿಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us