/newsfirstlive-kannada/media/media_files/2025/09/27/yellow-metro-line-2025-09-27-13-37-23.jpg)
ಬೆಂಗಳೂರು: ಸೆಪ್ಟೆಂಬರ್ ಅಂತ್ಯಕ್ಕೆ ಹಳದಿ ಮಾರ್ಗದ ಮೆಟ್ರೋಗೆ ಹೊಸ ರೈಲು ಸೇರ್ಪಡೆ ಆಗುತ್ತಿದ್ದು, ಅಕ್ಟೋಬರ್ 2 ಅಥವಾ 3ನೇ ವಾರದಲ್ಲಿ ಸಂಚಾರ ಆರಂಭಿಸುವ ಸಾಧ್ಯತೆಯಿದೆ. ಇದೊಂದು ಮೆಟ್ರೋ ಪ್ರಯಾಣಿಕರ ಖುಷಿ ಸುದ್ದಿಯಾಗಿದ್ದು ನಿಲ್ದಾಣದಲ್ಲಿ ಕಾಯುವ ಸಮಯ ಇನ್ನಷ್ಟು ಕಡಿಮೆ ಆಗಲಿದೆ.
ಮೊನ್ನೆ ಮೊನ್ನೆ ಆರಂಭವಾಗಿದ್ದ ಹಳದಿ ಮಾರ್ಗದ ಮೆಟ್ರೋ ಪ್ರತಿ 19 ನಿಮಿಷಕ್ಕೆ ಒಂದು ರೈಲು ಸಂಚಾರ ಮಾಡುತ್ತಿತ್ತು. ಇನ್ಮುಂದೆ ಈ ಸಮಯ ಇನ್ನೂ ಕಡಿಮೆ ಆಗಲಿದ್ದು ಪ್ರತಿ 15 ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸಲಿದೆ.
ಪಶ್ಚಿಮ ಬಂಗಾಳದ ತಿಟಾಗಢ ರೈಲ್ ಸಿಸ್ಟಂ ಕಾರ್ಯಗಾರದಿಂದ 5ನೇ ರೈಲಿನ ಕೋಚ್​ಗಳು ರಾವಾನೆ ಆಗುತ್ತಿದ್ದು, ಹೆಬ್ಬಗೋಡಿಯಲ್ಲಿನ ನಮ್ಮ ಮೆಟ್ರೋಗೆ ತಲುಪಿದ ಬಳಿಕ ಇನ್ಸ್​ಪೆಕ್ಷನ್ ಬೇ ಲೈನ್​ನಲ್ಲಿ ಆರಂಭಿಕ ಪರೀಕ್ಷೆಗಳು ನಡೆಯಲಿವೆ. ಪ್ರಧಾನಿ ಮೋದಿ ಆಗಸ್ಟ್ 10 ರಂದು ಹಳದಿ ಮಾರ್ಗವನ್ನು ಉದ್ಘಾಟನೆ ಮಾಡಿದ್ದರು. ಆಗಸ್ಟ್ 11 ರಿಂದ ಅರ್.ವಿ ರಸ್ತೆ ಟು ಡೆಲ್ಟಾ ಎಲೆಕ್ಟ್ರಾನಿಕ್ಸ್ ನಡುವೆ ಹಳದಿ ಮಾರ್ಗದ ರೈಲುಗಳು ಸಂಚರಿಸಿದ್ದವು. ಇದೀಗ ಇನ್ನೊಂದು ರೈಲು ಹಳದಿ ಮಾರ್ಗಕ್ಕೆ ಸೇರ್ಪಡೆ ಆಗುತ್ತಿರುವುದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ.