/newsfirstlive-kannada/media/media_files/2025/09/27/vs-sajjanar-2025-09-27-15-52-58.jpg)
ಹೈದರಾಬಾದ್: ಹುಬ್ಬಳ್ಳಿ ಮೂಲದ ವಿ.ಸಿ ಸಜ್ಜನರ್ ಹೈದರಾಬಾದ್​ನ ಕಮಿಷನರ್ ಆಗಿ ನೇಮಕವಾಗಿದ್ದಾರೆ. ಹೈದರಾಬಾದ್ ಕಮಿಷಿನರ್ ಆಗಿದ್ದ ಸಿ.ವಿ ಆನಂದ್​ರನ್ನು ಗೃಹ ಇಲಾಖೆ ವಿಶೇಷ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಲಾಗಿದೆ. ಇನ್ಮುಂದೆ ಹೈದರಾಬಾದ್​​ ದೊಡ್ಡ ನಗರಕ್ಕೆ ವಿ.ಸಿ ಸಜ್ಜನರ್ ಪೊಲೀಸ್ ಕಮಿಷನರ್ ಆಗಿ ತಮ್ಮ ಕಾರ್ಯನಿರ್ವಹಿಸಲಿದ್ದಾರೆ.
2019 ರ ನವೆಂಬರ್ 29 ರಂದು ಹೈದರಾಬಾದ್​ನ ಹೊರವಲಯದಲ್ಲಿ, ಪಶುವೈದ್ಯೆ ಪ್ರಿಯಾಂಕ ರೆಡ್ಡಿಯೆಂಬ ಯುವತಿ ಮೇಲೆ ನಾಲ್ವರು ಭೀಕರವಾಗಿ ಹಲ್ಲೆ ನಡೆಸಿ ಅತ್ಯಾಚಾರ ಮಾಡಿದ್ದರು. ಆಗ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿ.ಎಸ್ ಸಜ್ಜನರ್ ನಾಲ್ವರು ಆರೋಪಿಗಳಿಗೆ ಎನ್​ಕೌಂಟರ್ ಮಾಡಿದ್ದರು. ಪ್ರಸ್ತುತ ಹೈದರಾಬಾದ್​ನಲ್ಲಿ ವಿ.ಸಿ ಸಜ್ಜನರ್​ನನ್ನು ‘ಸೂಪರ್ ಕಾಪ್’ ಎಂದೇ ಕರೆಯಲಾಗುತ್ತದೆ.