ಎದೆ ಸೀಳಿ ಬೆನ್ನಿನಲ್ಲಿ ಸಿಲುಕಿದ ಗುಂಡು.. ತನಿಖೆಯ ಸ್ಫೋಟಕ ಮಾಹಿತಿ ಇಲ್ಲಿದೆ..!

ಖ್ಯಾತ ಉದ್ಯಮಿ ಡಾ.ಸಿ.ಜೆ. ರಾಯ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಘಟನಾ ಸ್ಥಳದ ಪರಿಶೀಲನೆ ಹಾಗೂ ಪ್ರಾಥಮಿಕ ತನಿಖೆಯಿಂದ ಹಲವು ಮಹತ್ವದ ಸಂಗತಿಗಳು ಹೊರಬಂದಿವೆ.

author-image
Ganesh Kerekuli
cj roy
Advertisment
  • ಬಳಸಿದ ಆಯುಧ: NP ಬೋರ್ 0.25 ಪಿಸ್ತೂಲ್ (ಪರವಾನಗಿ ಹೊಂದಿದ್ದು)
  • ಗುಂಡು ಹೊಕ್ಕ ಹಾದಿ: ಎದೆಯ ಎಡಭಾಗದಿಂದ ಪ್ರವೇಶಿಸಿ ಬೆನ್ನಿನಲ್ಲಿ ಲಾಕ್
  • ತನಿಖಾ ಹಂತ: ಪಿಸ್ತೂಲ್ ವಶ, ಎಫ್‌ಎಸ್‌ಎಲ್‌ಗೆ ರವಾನೆ

ಬೆಂಗಳೂರು: ಖ್ಯಾತ ಉದ್ಯಮಿ ಡಾ.ಸಿ.ಜೆ. ರಾಯ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಘಟನಾ ಸ್ಥಳದ ಪರಿಶೀಲನೆ ಹಾಗೂ ಪ್ರಾಥಮಿಕ ತನಿಖೆಯಿಂದ ಹಲವು ಮಹತ್ವದ ಸಂಗತಿಗಳು ಹೊರಬಂದಿವೆ.

ನೇರವಾಗಿ ಎದೆಗೆ ಗುಂಡು

ಪ್ರಾಥಮಿಕ ತನಿಖೆಯ ವರದಿಯ ಪ್ರಕಾರ, ಡಾ. ಸಿ.ಜೆ. ರಾಯ್ ಅವರು ತಮ್ಮ ಬಲಗೈಯಿಂದ ಎದೆಯ ಎಡಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದಾರೆ. ಗನ್ ಅನ್ನು ಎದೆಯ ಮೇಲಿಟ್ಟುಕೊಂಡು ಅತ್ಯಂತ ಸಮೀಪದಿಂದ ಗುಂಡು ಹಾರಿಸಿರುವುದು ಪತ್ತೆಯಾಗಿದೆ.
ಗುಂಡು ಹಾರಿದ ರಭಸಕ್ಕೆ ಅದು ಎದೆಯ ಎಡಭಾಗದ ಮೂಲಕ ದೇಹವನ್ನು ಪ್ರವೇಶಿಸಿ, ನೇರವಾಗಿ ಬೆನ್ನಿನ ಭಾಗಕ್ಕೆ ತಲುಪಿದೆ. ಎದೆಯ ಮೇಲ್ಭಾಗದ ಮಾಂಸಖಂಡಗಳು ಚದುರದೆ, ಗುಂಡು ನೇರವಾಗಿ ದೇಹದೊಳಗೆ ಆಳವಾಗಿ ಇಳಿದು ಬೆನ್ನಿನಲ್ಲಿ ಸಿಲುಕಿಕೊಂಡಿದೆ (Locked) ಎಂದು ತಿಳಿದುಬಂದಿದೆ. ಕೇವಲ ಒಂದು ಸುತ್ತು ಗುಂಡು ಹಾರಿಸಿಕೊಂಡಿರುವುದು ಸ್ಥಳದ ಪರಿಶೀಲನೆಯ ವೇಳೆ ಖಚಿತಪಟ್ಟಿದೆ.

ಇದನ್ನೂ ಓದಿ:Budget 2026: ಮಧ್ಯಮ ವರ್ಗದವರು, ರೈತರಿಗೆ ಭರ್ಜರಿ ಸಿಹಿ ಸುದ್ದಿ! 13 ಲಕ್ಷದವರೆಗೆ ಸಿಗಲಿದೆಯೇ ತೆರಿಗೆ ವಿನಾಯಿತಿ?

ಪರವಾನಗಿ ಪಡೆದ ಪಿಸ್ತೂಲ್ ಬಳಕೆ

ಡಾ. ಸಿ.ಜೆ. ರಾಯ್ ಅವರು NP ಬೋರ್ 0.25 (NP Bore 0.25) ಪಿಸ್ತೂಲ್ ಬಳಸಿದ್ದಾರೆ. ಇದು ಪರವಾನಗಿ ಪಡೆದ ಪಿಸ್ತೂಲ್ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಸದ್ಯ ಪೊಲೀಸರು ಈ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಘಟನಾ ಸ್ಥಳದ ಕೂಲಂಕುಷ ಪರಿಶೀಲನೆ ನಡೆಸಲಾಗಿದ್ದು, ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗಾಗಿ (FSL) ಪಿಸ್ತೂಲ್ ಅನ್ನು ಕಳುಹಿಸಿಕೊಡಲಾಗಿದೆ. ಎಫ್‌ಎಸ್‌ಎಲ್ ವರದಿ ಬಂದ ನಂತರ ಸಾವಿನ ಹಿಂದಿನ ಮತ್ತಷ್ಟು ತಾಂತ್ರಿಕ ಕಾರಣಗಳು ಸ್ಪಷ್ಟವಾಗಲಿವೆ.

ಇದನ್ನೂ ಓದಿ: ಸಿ.ಜೆ.ರಾಯ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ವಶಕ್ಕೆ ಸಿಕ್ಕ ಡೈರಿಯಲ್ಲಿ ನಟಿಯರು, ರಾಜಕಾರಣಿಗಳ ಹೆಸರು ಪತ್ತೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Confident group Income tax department raid Babu c Joseph CJ Roy
Advertisment