/newsfirstlive-kannada/media/media_files/2025/08/26/dharmasthala-chennayya-2025-08-26-15-39-12.jpg)
ಧರ್ಮಸ್ಥಳ ಪ್ರಕರಣದ ಎಸ್ಐಟಿ ತನಿಖೆಯು ಮತ್ತೊಂದು ಹಂತಕ್ಕೆ ತಲುಪಿದೆ. ಬುರುಡೆ ಚೆನ್ನಯ್ಯನ ವಿಚಾರಣೆ ನಡೆಸ್ತಿದ್ದ ಅಧಿಕಾರಿಗಳು ಇಂದು ಧರ್ಮಸ್ಥಳದಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.
ಬೆಂಗಳೂರಿಗೆ ಯಾಕೆ..?
ಬೆಂಗಳೂರಿನ ಬಗಲಕುಂಟೆ ಸಮೀಪದ ಮಲ್ಲಸಂದ್ರಕ್ಕೆ ಚೆನ್ನಯ್ಯನ ಕದುಕೊಂಡು ಬರಲಾಗಿದೆ. ಮಲ್ಲಸಂದ್ರದ BHEL ಲೇಔಟ್ನಲ್ಲಿ ಜಯಂತ್ ಟಿ ಮನೆ ಇದೆ. ಈ ಜಯಂತ್ ಟಿ, ಧರ್ಮಸ್ಥಳ ಪ್ರಕರಣದ ಎರಡನೇ ದೂರುದಾರ. ಈ ಜಯಂತ್ ನೀತಿ ಎಂಬ NGO ನಡೆಸ್ತಿದ್ದಾನೆ. ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಮೃತದೇಹಗಳನ್ನು ಹೂತು ಹಾಕಿದ್ದಾರೆ. ಯುವತಿಯ ಮೃತದೇಹವನ್ನು ಹೂತು ಹಾಕಿರೋದನ್ನು ತಾನು ನೋಡಿದ್ದೇನೆ ಎಸ್ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ಈ ಜಯಂತ್ ನಿವಾಸದಲ್ಲಿ ಚೆನ್ನಯ್ಯ ಆಶ್ರಯ ಪಡೆದಿದ್ದ ಎಂಬ ಮಾಹಿತಿ ಇದೆ. ಹೀಗಾಗಿ ಬೆಂಗಳೂರಿಗೆ ಆತನ ಕರೆದುಕೊಂಡು ಬರಲಾಗಿದೆ.
ಇದನ್ನೂ ಓದಿ: ಸುಜಾತಾ ಭಟ್ ಕಟ್ಟಿದ ಕಟ್ಟು ಕಥೆಗೆ ಮೇಜರ್ ಟ್ವಿಸ್ಟ್..
ಜಯಂತ್ ಟಿ.ವಾಸವಿದ್ದ ಮನೆಯಲ್ಲಿ SIT ಸ್ಥಳ ಮಹಜರು ನಡೆಸಿದ್ದಾರೆ. ಜಯಂತ್ ಕುಟುಂಬಸ್ಥರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಜಯಂತ್ ಮನೆಯಲ್ಲೇ ಚೆನ್ನನ ಕೂರಿಸಿಕೊಂಡು ವಿಚಾರಣೆ ನಡೆಯುತ್ತಿದೆ. ಚೆನ್ನ ಯಾವಾಗ ಮನೆಗೆ ಬಂದಿದ್ದ? ಎಷ್ಟು ದಿನ ಮನೆಯಲ್ಲಿದ್ದ? ಅನ್ನೋದ್ರ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಮಾಹಿತಿಗಳ ಪ್ರಕಾರ, ತಿಮರೋಡಿ ಸಂಪರ್ಕದ ಬಳಿಕ ಚಿನ್ನಯ್ಯ ಬೆಂಗಳೂರಿನಲ್ಲಿದ್ದ. ಹಲವು ಬಾರಿ ಬೆಂಗಳೂರಿಗೆ ಬಂದು ಹೋಗಿದ್ದ. ಕಳೆದ ಆರು ತಿಂಗಳ ಹಿಂದೆ ಚೆನ್ನ ಇಲ್ಲೇ ಇದ್ದ ಬಗ್ಗೆ ಮಾಹಿತಿ ಇದೆ. ಅಲ್ಲದೇ ಚಿನ್ನಯ್ಯನ ರಹಸ್ಯ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಇರಿಸಲಾಗಿತ್ತು. ಇಲ್ಲಿಂದಲೇ ವಕೀಲರ ಜೊತೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಧರ್ಮಸ್ಥಳ ಪ್ರಕರಣದ ಹಿಂದಿನ ಸೂತ್ರಧಾರಿಗಳ ಪತ್ತೆಹಚ್ಚಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ