/newsfirstlive-kannada/media/media_files/2025/12/05/aryan-khan-2025-12-05-09-04-09.jpg)
ಬೆಂಗಳೂರು: ಬಾಲಿವುಡ್​ ಸ್ಟಾರ್​ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ವಿರುದ್ಧ ಬೆಂಗಳೂರಿನಲ್ಲಿ ಕೇಸ್​ ದಾಖಲಾಗಿದೆ. ವಕೀಲ ಹುಸೇನ್ ಓವೈಸಿ ಅನ್ನೋರು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆಯೇ ದೂರು ದಾಖಲಿಸಿದ್ದಾರೆ. ಆರ್ಯನ್​ ಖಾನ್ ಜೊತೆ ಪಬ್​ನಲ್ಲಿ ಇದ್ದವರನ್ನೂ ವಿಚಾರಣೆ ನಡೆಸುವಂತೆ ವಕೀಲರು ದೂರು ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಅವರಿಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ..?
ನವೆಂಬರ್ 28 ರಂದು ಅಶೋಕನಗರದಲ್ಲಿ SOURBERRY ಪಬ್ ಓಪನಿಂಗ್ ಆಗಿತ್ತು. ಈ ಪಬ್​ಗೆ ನವೆಂಬರ್29 ರಂದು ಆರ್ಯನ್ ಖಾನ್ ಅತಿಥಿಯಾಗಿ ಬಂದಿದ್ದ. ಆರ್ಯನ್ ಖಾನ್ ಜೊತೆ ಪಬ್​ಗೆ ಕಾಂಗ್ರೆಸ್ ಯುವ ನಾಯಕ ನಲಪಾಡ್ ಹಾಗೂ ಸಚಿವ ಜಮೀರ್ ಪುತ್ರ ಝೈದ್ ಖಾನ್ ಬಂದಿದ್ದರು. ಈ ವೇಳೆ ಆರ್ಯನ್ ಖಾನ್, ಮಿಡಲ್ ಫಿಂಗರ್ ತೋರಿಸಿ ದುರ್ವತನೆ ತೋರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:ಐವಾನ್ ಡಿಸೋಜಾ, ಮಿಥುನ್ ರೈಗೆ ಬಿಗ್​ ಶಾಕ್ ಕೊಟ್ಟ ಕಾಂಗ್ರೆಸ್​..!
ಪಬ್​ನಲ್ಲಿ ಹತ್ತಾರು ಮಂದಿ ಮಹಿಳೆಯರಿದ್ದರು. ಅವರ ಗೌರವಕ್ಕೆ ಆರ್ಯನ್ ಖಾನ್ ದಕ್ಕೆ ತಂದಿದ್ದಾರೆ. ಮಹಿಳೆಯರ ಗೌರವಕ್ಕೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಲಾಗಿದೆ.
ಎಚ್ಚೆತ್ತುಕೊಂಡ ಪೊಲೀಸರು..!
ಇನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಆರ್ಯನ್ ಖಾನ್ ಬೆಂಗಳೂರಿಗೆ ಬಂದಿದ್ದು ಯಾವಾಗ? ಯಾವ ಪಬ್​​ಗೆ ಹೋಗಿದ್ದ? ಅಲ್ಲಿ ಯಾವೆಲ್ಲ ಸೆಲೆಬ್ರೆಟಿಗಳು, ರಾಜಕಾರಣಿಗಳ ಪುತ್ರರು ಭಾಗಿಯಾಗಿದ್ದರು ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ:ಪುಟಿನ್ ಐಷಾರಾಮಿ ವಿಮಾನದ ಮೇಲಿನ ‘Россия’ ಪದದ ಅರ್ಥ ಏನು?
ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಅಶೋಕನಗರದಲ್ಲಿರುವ ಪಬ್​ನಲ್ಲಿ ಘಟನೆ ನಡೆದಿದೆ. ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಅವರು ಖುದ್ದು ವಿಡಿಯೋ ಪರಿಶೀಲನೆ ಮಾಡಿದ್ದಾರೆ. ವೈರಲ್ ಆಗಿರೋ ವಿಡಿಯೋವನ್ನು ಪರಿಶೀಲಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಅಂತೆಯೇ ಪಬ್ ಯಾವುದೆಂದು ಖಚಿತವಾಗ್ತಿದ್ದಂತೆ ಕಬ್ಬನ್ ಪಾರ್ಕ್ ಎಸಿಪಿ ಪ್ರಿಯದರ್ಶಿನಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ನಿನ್ನೆ ರಾತ್ರಿ ಪಬ್​ಗೆ ಭೇಟಿ ನೀಡಿ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಪರಿಶೀಲನೆ ಮಾಡಿ ಆರ್ಯನ್ ಖಾನ್ ವರ್ತನೆಯನ್ನು ಗಮನಿಸಿದ್ದಾರೆ. ಸಾರ್ವಜನಿಕವಾಗಿ ಮಧ್ಯದ ಬೆರಳು ತೋರಿಸಿದ್ದಾ..? ಯಾರಿಗೆ ತೋರಿಸಿದ್ದು..? ಮಹಿಳೆಗೆ ತೋರಿಸಿದ್ದಾ..? ಉದ್ದೇಶ ಪೂರ್ವಕ ವರ್ತನೆಯಾ ಎಂದು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us