/newsfirstlive-kannada/media/media_files/2025/12/05/disoza-and-mithun-rai-2025-12-05-08-21-18.jpg)
ರಾಜ್ಯದಲ್ಲಿ ಗದ್ದುಗೆ ಗುದ್ದಾಟದ ಕಿಚ್ಚಿಗೆ ಹೈಕಮಾಂಡ್, ನಾಟಿ ಕೋಳಿ ಮದ್ದರೆದ್ರೂ ಅದ್ಯಾಕೋ ಸಂಪೂರ್ಣವಾಗಿ ಶಮನವಾಗ್ತಿಲ್ಲ. ಅದಿನ್ನು ಕೂಡ ಬೂದಿ ಮುಚ್ಚಿದ ಕೆಂಡವೇ. ಎರಡೆರಡು ಬಾರಿ ಬ್ರೇಕ್​ಫಾಸ್ಟ್​ ಮಾಡಿದ್ರೂ ಈ ಕಿತ್ತಾಟ ಬ್ರೇಕ್​ ಬೀಳ್ತಿಲ್ಲ. ಇದ್ರ ಮಧ್ಯೆ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಪರ ಜೈಕಾರ ಕೂಗಿದವರಿಗೆ ಕಾಂಗ್ರೆಸ್ ನೋಟಿಸ್ ಶಾಕ್ ಕೊಟ್ಟಿದೆ.
ಎರಡೆರಡು ಬ್ರೇಕ್​ಫಾಸ್ಟ್​​ಗಳ ಬಳಿಕ ದಿಢೀರ್​ ಅಂತ ದೆಹಲಿ ಚಲೋ ಎಂದಿದ್ದ ಡಿಸಿಎಂ ಡಿಕೆಶಿ ಹಸ್ತದೊಳ್ ಮತ್ತೊಂದು ಹಲ್​ಚಲ್​ ಸೃಷ್ಟಿಸಿದ್ರು.. ಆದ್ರೆ, ಡೆಲ್ಲಿಗೆ ಹೋದ ಡಿಕೆಶಿ ವಾಪಸ್ಸಾಗಿದ್ದಾರೆ. ವಾಪಸ್ ಆಗ್ತಿದ್ದಂತೆ ಕಾಂಗ್ರೆಸ್‌ನ ಕೆಲ ನಾಯಕರಿಗೆ ಡಿಕೆಶಿ ಶಾಕ್ ಕೊಟ್ಟಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಭೇಟಿ ವೇಳೆ ಅಶಿಸ್ತು ತೋರಿದ ಕೈ ಕಲಿಗಳಿಗೆ ನೋಟಿಸ್ ಅಸ್ತ್ರ ಪ್ರಯೋಗಿಸಿದ್ದಾರೆ.
ಐವಾನ್ ಡಿಸೋಜಾ, ಮಿಥುನ್ ರೈಗೆ ಎಐಸಿಸಿ ನೋಟಿಸ್!
ಕಾಂಗ್ರೆಸ್‌ನಲ್ಲಿ ಕಳೆದ ಕೆಲ ತಿಂಗಳಿಂದ ಸಿಎಂ ಗದ್ದುಗೆ ಗುದ್ದಾಟ ಮಿತಿಮೀರಿದೆ. ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಸಭೆ ಮಾಡಿ ಸಂಧಾನ ಮಾಡಿದ್ರೂ ಇದು ನಿಲ್ಲದಾಗಿದೆ. ಮಳೆ ನಿಂತ್ರೂ ಮರದ ಹನಿ ನಿಂತಿಲ್ಲ ಎನ್ನುವಂತೆ ಸಿಎಂ-ಡಿಸಿಎಂ ಸೈಲೆಂಟ್ ಆಗಿದ್ರೂ ಅವರ ಬೆಂಬಲಿಗರು ಸಿಎಂ ಘೋಷಣೆ ಕೂಗುತ್ತಲೇ ಇದ್ದಾರೆ. ಹೀಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಸಿಎಂ ಘೋಷಣೆ ಕೂಗಿದ್ದವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶಾಕ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಚಿನ್ನದ ಮೇಲೆ ಸಾಲ, ಪರ್ಸನಲ್ ಲೋನ್ -ಯಾವುದು ಬೆಸ್ಟ್​..?
ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ನಡುವಿನ ಸಂವಾದದ ಶತಮಾನೋತ್ಸವವನ್ನ ಮೊನ್ನೆ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೆ.ಸಿ.ವೇಣುಗೋಪಾಲ್ ಕೇರಳದಿಂದ ಮಂಗಳೂರಿಗೆ ಆಗಮಿಸಿದ್ರು. ವೇಣುಗೋಪಾಲ್ ಮಂಗಳೂರು ವಿಮಾನ ನಿಲ್ದಾಣದಿಂದ ಆಚೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹಾಗೂ ಅವರ ಬೆಂಬಲಿಗರು ಡಿಕೆಶಿ ಪರವಾಗಿ ಘೋಷಣೆ ಕೂಗಿದ್ದರು. ಡಿಕೆ ಡಿಕೆ ಎಂದು ಘೋಷಣೆ ಕೂಗಿದ್ದಲ್ಲದೇ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿದ್ರು. ಸಿಎಂ-ಡಿಕೆಶಿ ನಡುವಿನ ಕುರ್ಚಿ ಕದನ ಶಾಂತವಾಗಿರುವಾಗಲೇ ಈ ರೀತಿ ಘೋಷಣೆ ಕೂಗಿರುವುದು ಹೈಕಮಾಂಡ್​ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಕಾರಣ ಕೇಳಿ ಮಿಥುನ್ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಘೋಷಿಸಿದ್ದ ಪರಿಷತ್ ಸದಸ್ಯ ಐವಾನ್ ಡಿಸೋಜಾಗೂ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಸೂಕ್ತ ಕಾರಣ ನೀಡುವಂತೆ ಕಾಂಗ್ರೆಸ್ ನೋಟಿಸ್ ನೀಡಿದೆ. ಈ ಮೂಲಕ ಕೈನಲ್ಲಿ ಮತ್ತೆ ಸಿಎಂ ಕುರ್ಚಿಯ ಕಿತ್ತಾಟ ಹೆಚ್ಚಾಗದಂತೆ ಕ್ರಮಕೈಗೊಂಡಿದೆ.
ಇದನ್ನೂ ಓದಿ: ಪುಟಿನ್‌ಗೆ ಭಗವದ್ಗೀತೆ ಕೊಟ್ಟು ಪ್ರಧಾನಿ ಮೋದಿ ಹೇಳಿದ್ದೇನು..?
ಸಿಎಂ ಘೋಷಣೆ ಕೂಗಿರೋ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಜೈಕಾರ ಹಾಕೋದು ತಪ್ಪಲ್ಲ ಅಂದ್ರು. ಅಲ್ಲದೇ ವೇಣುಗೋಪಾಲರನ್ನು ಭೇಟಿ ಮಾಡಿದ ಬಗ್ಗೆಯೂ ತಿಳಿಸಿದ್ರು. ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದ್ರೆ, ಬೆಂಬಲಿಗರ ಹೈಡ್ರಾಮಾ ಆರ್ಭಟ ನಿಲ್ಲದಾಗಿದೆ. ಇದಕ್ಕೆ ಕಾಂಗ್ರೆಸ್ ನೋಟಿಸ್ ಮೂಲಕ ಶಿಸ್ತುಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಮೂಲಕ ಸಿಎಂ ಪಟ್ಟದಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
ಇದನ್ನೂ ಓದಿ: ಪುಟಿನ್ ಐಷಾರಾಮಿ ವಿಮಾನದ ಮೇಲಿನ ‘Россия’ ಪದದ ಅರ್ಥ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us