/newsfirstlive-kannada/media/media_files/2025/08/30/bda-2025-08-30-22-24-20.jpg)
ಹೊಸ ಪರ್ವಕ್ಕೆ ಅಣಿಯಾಗಿರೋ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾಸ್ಟರ್​ ಪ್ಲಾನ್​ ರೂಪಿಸಿದೆ. ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆಗೆ ಬ್ರೇಕ್ ಹಾಕಲು ಹೊಸ ಮಾರ್ಗ ಹುಡುಕಿದೆ. 2041 ಅನ್ನೋ ಪ್ಲಾನ್ ಮೂಲಕ ಬೆಂಗಳೂರಿಗೆ ಭದ್ರ ಬುನಾದಿ ಹಾಕಲು ಸಿದ್ಧತೆ ನಡೆಸಿದೆ.
ಬಿಡಿಎನಲ್ಲಿ ಬದಲಾವಣೆ ಪರ್ವ.. ಮಾಸ್ಟರ್​ ಪ್ಲಾನ್-2041!
ಬಿಡಿಎನಲ್ಲಿ ಬದಲಾವಣೆ ಪರ್ವ ಶುರುವಾಗಿದೆ.. ಹಿಂದಿನ ನ್ಯೂನತೆ ಸರಿಪಡಿಸಿ ನಗರಕ್ಕೆ ಭದ್ರ ಬುನಾದಿ ಹಾಕಲು ಬಿಡಿಎ ಸಜ್ಜಾಗಿದೆ.. RMP-2041 ಪ್ಲಾನ್​ ಹಿಡಿದು ಬಿಡಿಎ ಬದಲಾವಣೆ ಪರ್ವಕ್ಕೆ ನಾಂದಿಹಾಡಿದೆ.
ಉದ್ದೇಶವೇನು?
- ಬಿಡಿಎನಲ್ಲಿ ಪ್ರಸ್ತುತ ಪರಿಷ್ಕೃತ ಮಾಸ್ಟರ್​​​ ಪ್ಲಾನ್​​-2015 ಬಳಕೆ
- ವಿಸ್ತರಣೆ, ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ ನಿಯಂತ್ರಣ
- ಉತ್ತಮ ಜೀವನ ಗುಣಮಟ್ಟಕ್ಕೆ ಮೂಲ ಸೌಕರ್ಯಗಳ ಅಭಿವೃದ್ಧಿ
- ಅನಧಿಕೃತ ಲೇಔಟ್​ಗಳು & ಕಟ್ಟಡಗಳಿಗೆ ಕಡಿವಾಣ ಹಾಕುವುದು
- ನಗರಕ್ಕೆ ಅಗತ್ಯವಾದ ಫ್ಲೈಓವರ್​​ಗಳನ್ನು ನಿರ್ಮಾಣ ಮಾಡುವುದು
- ಎಲ್ಲಾ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವುದು
- ವಿಶೇಷವಾಗಿ ಗುಣಮಟ್ಟದ ಸಾರಿಗೆ ವ್ಯವಸ್ಥೆಯನ್ನ ರೂಪಿಸುವುದು
- ಕೃಷಿ, ವಸತಿ, ವಾಣಿಜ್ಯ, ಸರ್ಕಾರಿ ಉದ್ದೇಶದ ಜಮೀನಿನ ಮಾಹಿತಿ
RMP-2041 ರಚನೆ ಹೇಗೆ?
BDAಯಿಂದ ಟೆಂಡರ್ ಅಡಿ ಹೈಟೆಕ್ ತ್ರಿಡಿ ಡೋನ್ ಸಮೀಕ್ಷೆ ನಡೆಸಲಾಗುತ್ತೆ.. ಆಧುನಿಕ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ.. 1,240 ಚದರ ಕಿ.ಮೀ. ವಿಸ್ತೀರ್ಣ ಒಳಗೊಂಡ ಬೆಂಗಳೂರು ನಗರದ ಮೂಲ ನಕ್ಷೆ, ಭೂ ಬಳಕೆಯ ನಕ್ಷೆ, ಡಿಜಿಟಲ್ ಎಲಿವೇಶನ್​​ ಬಳಕೆ ಮಾಡಲಾಗುತ್ತೆ.. ಭೌಗೋಳಿಕ ಮಾಹಿತಿ ವ್ಯವಸ್ಥೆ ವಿಧಾನದ ಮೂಲಕ ಸಮೀಕ್ಷೆ ನಡೆಸಲಾಗುತ್ತೆ.. ಕರಡು ಸಿದ್ಧವಾದ ನಂತರ ಈ ಬಗ್ಗೆ ಗೆಜೆಟ್‌ನಲ್ಲಿ ಪ್ರಕಟಣೆ ಮಾಡುವ ಸಾಧ್ಯತೆ ಇದೆ.. ಬಳಿಕ ಸಾರ್ವಜನಿಕರಿಗೆ ಸಲಹೆ, ಆಕ್ಷೇಪಣೆಗೆ 60 ದಿನ ಕಾಲಾವಕಾಶ ಇರುತ್ತೆ.. 2026ರ ಮಧ್ಯಭಾಗದ ವೇಳೆಗೆ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಇದಾಗಿದೆ.. ಸದ್ಯ ಪರಿಷ್ಕೃತ ಮಾಸ್ಟರ್​​​ ಸಿದ್ಧಪಡಿಸಲು BDA ಟೆಂಡರ್​ ಕರೆದಿದೆ.. ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಏಜೆನ್ಸಿ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 30ಕ್ಕೆ ಬಿಡಿಎ ಡೆಡ್​ಲೈನ್​ ನೀಡಿದೆ.
ಇದನ್ನೂ ಓದಿ:ಹುಬ್ಬಳ್ಳಿ ಈದ್ಗಾ ಮೈದಾನ ಇನ್ಮುಂದೆ ‘ರಾಣಿ ಚೆನ್ನಮ್ಮ ಮೈದಾನ’
ಮಾಸ್ಟರ್ ಪ್ಲಾನ್-2041ನ್ನು ಪರಿಷ್ಕರಣೆಗೆ BDAಗೆ ಅಧಿಕಾರ ಇಲ್ಲ ಎಂಬ ವಾದದಿಂದ ಸದ್ಯ ಹೈಕೋರ್ಟ್​​ನಲ್ಲಿ ಹಿನ್ನಡೆಯಾಗಿದೆ.. ಸದ್ಯ ಹೈಕೊರ್ಟ್​ ಹಸಿರು ನಿಶಾನೆ ತೋರಿದ್ರೆ ಬಿಡಿಎನಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ.. ಒಟ್ನಲ್ಲಿ ಮಾಸ್ಟರ್ ಪ್ಲಾನ್-2041 ಮೂಲಕ ಬಿಡಿಎ ಇಂಥದ್ದೊಂದು ಪ್ಲಾನ್​ ಮಾಡಿರೋದು ರಾಜಧಾನಿಗೆ ವರವಾಗೋದು ನಿಶ್ಚಿತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us