ದರ್ಶನ್​ ಅಂಡ್ ಗ್ಯಾಂಗ್​ಗೆ ಮತ್ತೆ ಸಂಕಷ್ಟ ಶುರು..

ರೇಣುಕಾಸ್ವಾಮಿ ಕೊ* ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​ನಲ್ಲಿ ಟ್ರಯಲ್ ಶುರುವಾಗಿದೆ. ಇವತ್ತು ಕೋರ್ಟ್​ನಲ್ಲಿ ಮಹತ್ವದ ಬೆಳವಣಿಗೆ ಆಗಲಿದ್ದು, ದರ್ಶನ್ ಅಂಡ್ ಗ್ಯಾಂಗ್​​​ಗೆ ಮತ್ತೆ ಸಂಕಷ್ಟದ ಆತಂಕ ಶುರುವಾಗಿದೆ.

author-image
Ganesh Kerekuli
Darshan
Advertisment

ಬೆಂಗಳೂರು: ರೇಣುಕಾಸ್ವಾಮಿ ಕೊ* ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​ನಲ್ಲಿ ಟ್ರಯಲ್ ಶುರುವಾಗಿದೆ. ಇವತ್ತು ಕೋರ್ಟ್​ನಲ್ಲಿ ಮಹತ್ವದ ಬೆಳವಣಿಗೆ ಆಗಲಿದ್ದು, ದರ್ಶನ್ ಅಂಡ್ ಗ್ಯಾಂಗ್​​​ಗೆ ಮತ್ತೆ ಸಂಕಷ್ಟದ ಆತಂಕ ಶುರುವಾಗಿದೆ. 

ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಹೆಚ್ 57 ಕೋರ್ಟ್​, ರೇಣುಕಾಸ್ವಾಮಿ ತಂದೆ-ತಾಯಿಗೆ ನೋಟಿಸ್​ ಕೊಟ್ಟಿತ್ತು. ಅದರಂತೆ ಚಿತ್ರದುರ್ಗದ ವಿಆರ್​ಎಸ್​ ನಿವಾಸದಿಂದ ರೇಣುಕಾಸ್ವಾಮಿ ತಂದೆ-ತಾಯಿ ತೆರಳಿದ್ದಾರೆ. ತಂದೆ-ಕಾಶೀನಾಥಯ್ಯ ಹಾಗೂ ತಾಯಿ-ರತ್ನಪ್ರಭ ಕೋರ್ಟ್​ಗೆ ಹಾಜರಾಗುವ ಮೊದಲು ದೇವರ ದರ್ಶನ ಮಾಡಲಿದ್ದಾರೆ. 

ದೇವರ ದರ್ಶನ ಮುಗಿಸಿ ನೇರವಾಗಿ ಕೋರ್ಟ್​ಗೆ ಹಾಜರಾಗಲಿದ್ದಾರೆ. ರೇಣುಕಾಸ್ವಾಮಿ ತಂದೆ, ತಾಯಿ ಪ್ರಕರಣ ಮುಖ್ಯ ಸಾಕ್ಷಿಗಳಾಗಿದ್ದಾರೆ. ಕಾಶಿನಾಥಯ್ಯ 7ನೇ ಮುಖ್ಯಸಾಕ್ಷಿ ಆಗಿದ್ದರೆ, ರತ್ನಪ್ರಭ 8ನೇ ಮುಖ್ಯ ಸಾಕ್ಷಿ ಆಗಿದ್ದಾರೆ. ಆರೋಪಿ ದರ್ಶನ್​ ಅಂಡ್ ಗ್ಯಾಂಗ್​ಗೆ ಮತ್ತೆ ಸಂಕಷ್ಟ ಶುರುವಾಗಿದೆ.

ಇದನ್ನೂ ಓದಿ: IPL Auction: ಆರ್​​ಸಿಬಿ ಭರ್ಜರಿ ಬೇಟೆ.. ಹೊಸದಾಗಿ ತಂಡಕ್ಕೆ ಯಾರೆಲ್ಲ ಬಂದ್ರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Pavitra Gowda Renukaswamy case darshan thoogudeepa
Advertisment