/newsfirstlive-kannada/media/media_files/2025/11/03/darshan-and-pavitra-gowda-2025-11-03-21-22-55.jpg)
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಪವಿತ್ರ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇವತ್ತು ಬೆಂಗಳೂರಿನ ವಿಶೇಷ ನ್ಯಾಯಾಲಯವು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿದೆ. ಈ ಸಂದರ್ಭದಲ್ಲಿ ಕೇಸ್​ನ 14 ಆರೋಪಿಗಳು ಕೋರ್ಟ್​ಗೆ ಖುದ್ದು ಹಾಜರಿದ್ದರು.
ಗಮನ ಸೆಳೆದ ದರ್ಶನ್ ಮತ್ತು ಪವಿತ್ರಾ ಗೌಡ ಡ್ರೆಸ್​ಕೋಡ್​..!
ಬೆಂಗಳೂರಿನ 64 ಸಿಸಿಹೆಚ್ ಕೋರ್ಟ್‌ಗೆ ಖುದ್ದು ಹಾಜರಾಗಬೇಕು ಎಂದು ಎಲ್ಲಾ ಆರೋಪಿಗಳಿಗೆ ನ್ಯಾಯಾಧೀಶರು ಈ ಮೊದಲೇ ತಿಳಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 6 ಆರೋಪಿಗಳನ್ನು ಪೊಲೀಸರು ನ್ಯಾಯಾಲಕ್ಕೆ ಕರೆತಂದರು. ಉಳಿದಂತೆ ಜಾಮೀನಿನ ಮೇಲೆ ಹೊರಗಿದ್ದ 11 ಆರೋಪಿಗಳು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಇದನ್ನೂ ಓದಿ: ಬಿಗ್​ಬಾಸ್​ ಮನೆಯ ನೆಮ್ಮದಿ ಹಾಳು ಮಾಡವ್ರೆ ರಿಷಾ.. ಮುಖಕ್ಕೆ ಮಸಿ ಬಳಿದು ಆಕ್ರೋಶ..!
ಪೊಲೀಸ್ ಸರ್ಪಗಾವಲಿನಲ್ಲಿ ಇಬ್ಬರನ್ನೂ ಪ್ರತ್ಯೇಕ ವಾಹನದಲ್ಲಿ ಕರೆದುಕೊಂಡು ಬರಲಾಗಿತ್ತು. ಈ ವೇಳೆ ದರ್ಶನ್ ಹಾಗೂ ಪವಿತ್ರ ಗೌಡ ಒಂದೇ ಬಣ್ಣದ ಬಟ್ಟೆಗಳನ್ನ ತೊಟ್ಟಿದ್ದನ್ನ ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದರ್ಶನ್ ಚಳಿಗಾಗಿ ತೊಟ್ಟಿರೋ ಫುಲ್‌ಸ್ಲೀವ್ ಸ್ವೆಟ್ ಶರ್ಟ್ ಬಣ್ಣ ನೀಲಿಯಾಗಿತ್ತು. ಇನ್ನು, ಪವಿತ್ರ ಗೌಡ ಅವರ ಡ್ರೆಸ್ ಕೂಡ ನೀಲಿ ಬಣ್ಣದ್ದೇ ಆಗಿದೆ.
ಇದನ್ನು ಗಮನಿಸಿದ ಕೆಲವರು ಇಬ್ಬರು ಮಾತನ್ನಾಡಿಕೊಂಡೇ ಒಂದೇ ಬಣ್ಣದ ಬಟ್ಟೆ ಹಾಕಿಕೊಂಡು ಬಂದಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಜೈಲಿನಲ್ಲಿ ಇದೆಲ್ಲವೂ ಸಾಧ್ಯವೇ ಎಂಬ ಪ್ರಶ್ನೆ ಇದೆ. ಯಾಕೆಂದರೆ ಜೈಲಿನಲ್ಲಿ ಇಬ್ಬರಿಗೂ ಮಾತನ್ನಾಡುವ ಅವಕಾಶ ಇಲ್ಲ. ದರ್ಶನ್ ಮತ್ತು ಪವಿತ್ರ ಗೌಡ ಇಬ್ಬರೂ ಒಂದೇ ಜೈಲಿನಲ್ಲಿದ್ದರೂ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಜೈಲಿನ ವ್ಯವಸ್ಥೆ ಇದ್ದು, ಒಬ್ಬರಿಗೊಬ್ಬರು ಮಾತನ್ನಾಡಿಕೊಳ್ಳೋದು ಅಸಾಧ್ಯದ ಮಾತು. ಹಾಗಾಗಿ ಕೆಲವರು ಇದು ಕಾಕತಾಳಿಯ ಅಂದ್ಕೊಳ್ತಿದ್ದಾರೆ.
ಕೋರ್ಟ್​ನಲ್ಲಿ ಮಾತಾಡಿದ ಆರೋಪಿಗಳು
ಕೋರ್ಟ್​ನಲ್ಲಿ ಇಬ್ಬರ ನಡುವೆ ಸಂಭಾಷಣೆ ನಡೆದಿದೆ. ಎರಡನೇ ಬಾರಿಗೆ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಗೌಡ ಮುಖಾಮುಖಿ ಆಗಿದ್ದರು. ನ್ಯಾಯಾಧೀಶರ ಮುಂದೆ ಪವಿತ್ರಗೌಡ, ಪವಿತ್ರ ಗೌಡ ಹಿಂದೆ ದರ್ಶನ್ ನಿಂತಿದ್ದರು. ಆ ವೇಳೆ ಮುಂದೆ ಬಾ ಎಂದು ದರ್ಶನ್​​ಗೆ ಪವಿತ್ರ ಗೌಡ ಕರೆದಿದ್ದಾಳೆ. ಅದಕ್ಕೆ ದರ್ಶನ್ ಬರ್ತೀನಿ ಎಂದಿದ್ದಾರೆ. ಇನ್ನು, ವಿಚಾರಣೆ ವೇಳೆ ಇಬ್ಬರಿಗೂ ಮಾತನಾಡಲು ಅವಕಾಶ ಕೊಡಲಾಗಿತ್ತು.
ಇದನ್ನೂ ಓದಿ: ಬಿಗ್​ಬಾಸ್​ ಮನೆಯ ನೆಮ್ಮದಿ ಹಾಳು ಮಾಡವ್ರೆ ರಿಷಾ.. ಮುಖಕ್ಕೆ ಮಸಿ ಬಳಿದು ಆಕ್ರೋಶ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us