/newsfirstlive-kannada/media/media_files/2025/10/03/darshan-2025-10-03-08-43-31.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್​ಗೆ (Darshan Thoogudeepa) ಈ ಬಾರಿಯೂ ನಾಡಹಬ್ಬ ದಸರಾ ಮಿಸ್ ಆಗಿದೆ. ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ನಿನ್ನೆ ಆಯುಧ ಪೂಜೆ ನೆರವೇರಿಸಿ ದರ್ಶನ್​​ಗೆ ಸ್ವೀಟ್ ನೀಡಿದ್ದಾರೆ.
ರೇಣುಕಾಸ್ವಾಮಿ ಪ್ರಕರಣಕ್ಕೂ ಮುನ್ನ ದರ್ಶನ್ ಪ್ರತಿವರ್ಷ ದಸರಾವನ್ನು ವಿಜ್ರಂಭಣೆಯಿಂದ ಆಚರಿಸುತ್ತಿದ್ದರು. ತಮ್ಮ ಬಳಿಯಿರುವ ಐಷಾರಾಮಿ ಕಾರುಗಳಿಗೆ ಪೂಜೆ ಸಲ್ಲಿಸಿ ನವ ದಸರಾಆಚರಣೆ ಮಾಡ್ತಿದ್ದರು. ಆದ್ರೀಗ ಜೈಲಾಧಿಕಾರಿಗಳು ನಿನ್ನೆ ಕೊಟ್ಟಿರುವ ಸಿಹಿ ತಿಂಡಿಯನ್ನ ತಿಂದು ಭಾವುಕರಾಗಿದ್ದಾರೆ ಎನ್ನಲಾಗಿದೆ.
ಇನ್ನು ಸಿಬ್ಬಂದಿ ದರ್ಶನ್​ಗೆ ಸಿಹಿಕೊಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಈ ವೇಳೆ ದರ್ಶನ್ ಅವರ ಮ್ಯಾನೇಜರ್ ನಾಗರಾಜ್, ಹಿಂದೆ ದಸರಾ ಸೆಲೆಬ್ರೇಟ್ ಮಾಡ್ತಿದ್ದ ದಿನಗಳನ್ನು ನೆನಪು ಮಾಡಿಕೊಂಡರು. ಶಿಷ್ಯಂದಿರ ಮಾತಿಗೆ ನಕ್ಕು ದರ್ಶನ್ ಸುಮ್ಮನಾಗಿದ್ದಾರೆ. ಸದ್ಯ ಕ್ವಾರಂಟೀನ್ ಸೆಲ್​​ನಲ್ಲಿರುವ ದರ್ಶನ್​​ ಒಳಗಡೆ ಇರುವ ಸೆಲ್​​ಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಜನರ ಮಧ್ಯೆ ‘ಭೀಮಾ’ ಎಂದು ಕೂಗಿದ ಶಿವಣ್ಣ.. ಗಜರಾಜನ ರಿಯಾಕ್ಷನ್ ಹೆಂಗಿತ್ತು..? VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ