/newsfirstlive-kannada/media/post_attachments/wp-content/uploads/2024/10/TULASI-BENEFITS-2.jpg)
ತುಳಸಿ ಗಿಡದ ಎಲೆಯಿಂದ ಚಹಾ ತಯಾರಿಸಿ (Thulasi Chaha) ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚು ಹೆಚ್ಚು ಉಪಯೋಗ ಇದೆ. ನಮ್ಮ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಪೂಜ್ಯನೀಯ ಸ್ಥಾನ ನೀಡುತ್ತಾ ಬಂದಿದ್ದೇವೆ. ಈಗಲೂ ಕೂಡ ಇದನ್ನೇ ಮುಂದುವರೆಸಿಕೊಂಡು ಬರುತ್ತಿದ್ದೇವೆ. ತುಳಸಿ ಚಹಾ ಕುಡಿಯುವುದು ಆರೋಗ್ಯ ಏನೇನು ಪ್ರಯೋಜನಗಳು ಇವೆ?.
ತುಳಸಿ ಚಹಾದ ಚಮತ್ಕಾರ..!
ತುಳಸಿ ಎಲೆಯಿಂದಾಗುವ ಪ್ರಯೋಜನದ ಬಗ್ಗೆ ಆಯುರ್ವೇದ ತಜ್ಞರು ಕೂಡ ಸಲಹೆ ನೀಡುತ್ತಾರೆ. ಮನೆ ಮುಂದೆ ತುಳಸಿ ಗಿಡ ಇರಬೇಕು ಅಂತಾ ಹಿಂದೂ ಸಂಪ್ರದಾಯ ಹೇಳುತ್ತೆ. ಇದರಿಂದ ಪಾಸಿಟೀವ್​ ಎನರ್ಜಿ ಬರುತ್ತದೆ. ಅದೇ ರೀತಿ ತುಳಸಿ ಎಲೆಯಿಂದ ಚಹಾ ಮಾಡಿ ಕುಡಿಯುವುದರಿಂದ ನಮ್ಮ ಆರೋಗ್ಯ ಉತ್ತಮ, ದೇಹದ ರೋಗನಿರೋಧಕ ಬಲಗೊಳ್ಳುವುದರ ಜೊತೆಗೆ ಕೊಲೆಸ್ಟ್ರಾಲ್ ರೋಗಗಳು ನಿಯಂತ್ರಣಕ್ಕೆ ಬರುತ್ತವೆ.
ಇದನ್ನೂ ಓದಿ: ನವರಾತ್ರಿ ಉಪವಾಸ.. ಆರೋಗ್ಯದ ಎಚ್ಚರಿಕೆ ಏನು, ಈ ರೀತಿಯಾಗಿ ಮಾಡಲೇಬೇಡಿ!
/filters:format(webp)/newsfirstlive-kannada/media/media_files/2025/09/24/thulasi-tea-2025-09-24-17-31-26.jpg)
ಅಷ್ಟೇ ಅಲ್ಲದೇ ತುಳಸಿ ಎಲೆ ಚಹಾ ಕುಡಿಯುವುದರಿಂದ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ. ಜೊತೆಗೆ ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ತುಳಸಿ ತುಂಬಾ ಪ್ರಯೋಜನಕಾರಿ ಆಗಿದೆ. ಚಹಾವು ಅನಿಲ, ಆಮ್ಲೀಯತೆ, ಮಲಬದ್ಧತೆ ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಬಾಯಿಯ ಆರೋಗ್ಯ: ತುಳಸಿ ಚಹಾದಿಂದ ಮುಖ್ಯವಾದ ಪ್ರಯೋಜನ ಎಂದರೆ ಬಾಯಿಯ ಆರೋಗ್ಯ ಸುಧಾರಿಸುತ್ತದೆ.
ಶೀತ, ಕೆಮ್ಮು ನಿವಾರಣೆ: ಉರಿಯೂತದ ಗುಣಲಕ್ಷಣ ಹೊಂದಿದ ತುಳಸಿ, ಶೀತ, ಕೆಮ್ಮು ಹಾಗೂ ಉಸಿರಾಟದ ಸೋಂಕುಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಆಗಿರುತ್ತದೆ.
ಒತ್ತಡ ನಿವಾರಣೆ: ತುಳಸಿ ಚಹಾದಲ್ಲಿರುವ ಅಡಾಪ್ಟೋಜೆನಿಕ್ (Adaptogenic) ಗುಣಲಕ್ಷಣಗಳು ಕಾರ್ಟಿಸೋಲ್ (cortisol) ಎಂಬ ಒತ್ತಡದ ಹಾರ್ಮೋನ್ ಮಟ್ಟವನ್ನು ನಿಯಂತ್ರಿಸುತ್ತವೆ. ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತವೆ.
ರೋಗನಿರೋಧಕ ಶಕ್ತಿ ಅಧಿಕ: ತುಳಸಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು (Antioxidants) ದೇಹದ ರೋಗನಿರೋಧಕ ಶಕ್ತಿಯನ್ನ ಸುಧಾರಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ