ಚಿನ್ನಾ ಚಿನ್ನಾ ಎಂದ ಮಂಜುನಾಥ್ ಪತ್ನಿ ಲೀಲಾಗೆ ಬಿಯರ್​ಬಾಟಲ್ ನಿಂದ ಚುಚ್ಚಲು ಮುಂದಾಗಿದ್ದ ..!

ಪತಿ ಮಂಜುನಾಥ್ ಮತ್ತು ಪತ್ನಿ ಲೀಲಾ ನಡುವಿನ ಕೌಟುಂಬಿಕ ಕಲಹ ತಿರುವು ಪಡೆದುಕೊಂಡಿದೆ. ಲೀಲಾ ಲೀಲಾ ನೀನೆ ನನ್ನ ಚಿನ್ನಾ ಎಂದು ಹೇಳುತ್ತಿದ್ದ ಪತಿ ಮಂಜುನಾಥ್, ಲೀಲಾ ಕೊಲೆಗೈಯಲು ಯತ್ನಿಸಿದ್ದಾನೆ. ಬಸವನಪುರದ ಸಂತು ಮನೆಗೆ ಹೋಗಿ ಬಿಯರ್​ ಬಾಟಲ್​ನಿಂದ ಲೀಲಾಳನ್ನ ಕೊಲೆಗೈಯಲು ಮುಂದಾಗಿದ್ದಾನೆ.

author-image
Ganesh Kerekuli
leela santhu new

ಸಂತು ಲೀಲಾ Photograph: (ಸಂತು ಲೀಲಾ)

Advertisment
  • ಪತ್ನಿ ಲೀಲಾ ಮೇಲೆ ಬಿಯರ್ ಬಾಟಲ್‌ ನಿಂದ ಹಲ್ಲೆಗೆ ಮಂಜುನಾಥ್ ಯತ್ನ
  • ಈ ವೇಳೆ ಅಡ್ಡಬಂದ ಸಂತು ಮೇಲೆ ಬಾಟಲ್ ನಿಂದ ಹಲ್ಲೆ
  • ಸಂತು ಕೈಗೆ ಗಾಯವಾಗಿ ಆಸ್ಪತ್ರೆಗೆ ದಾಖಲು

ಬೆಂಗಳೂರು:  ಪತಿ ಮಂಜುನಾಥ್ ( manjunath) ಪತ್ನಿ ಲೀಲಾ (Leela) ಇವರ  ಕೌಟುಂಬಿಕ ಕಲಹ ತಿರುವು ಪಡೆದುಕೊಂಡಿದೆ. ಲೀಲಾ ಲೀಲಾ ನೀನೆ ನನ್ನ ಜೀವ  ಎಂದು ಹೇಳುತ್ತಿದ್ದ ಪತಿ ಮಂಜುನಾಥ್ ಲೀಲಾ ಅವರನ್ನ ಕೊಲೆಗೈಯಲು ಯತ್ನಿಸಿದ್ದಾನೆ. ಬಸವನಪುರದ ಲವ್ವರ್  ಸಂತು ಮನೆಯಲ್ಲಿ ಲೀಲಾ ವಾಸ ಇದ್ದಾಳೆ. ಪತಿ ಮಂಜುನಾಥ್ ಸೀದಾ ಸಂತು  ಮನೆಗೆ ಹೋಗಿ, ಬಿಯರ್​ ಬಾಟಲ್​ನಿಂದ ಲೀಲಾಳನ್ನ ಕೊಲೆಗೈಯಲು ಮುಂದಾಗಿದ್ದಾನೆ. ಗಲಾಟೆ ವೇಳೆ  ಲೀಲಾ ಪ್ರಿಯಕರ ಸಂತು ಅಡ್ಡ ಬಂದಿದ್ದರಿಂದ ಸಂತು  ಮೇಲೆ ಹಲ್ಲೆ ನಡೆಸಿದ್ದಾನೆ.. 

ಬಿಯರ್ ಬಾಟಲಿಯಿಂದ ಚುಚ್ಚಿದ ಮಂಜ..!

ರಾಜ್ಯದಲ್ಲಿ ಕೌಟುಂಬಿಕ ಕಲಹವೊಂದು ಸಿನಿಮೀಯ ರೀತಿಯಲ್ಲಿ  ಭಾರೀ ಸುದ್ದಿಯಾಗ್ತಿದೆ. ಬೆಂಗಳೂರಿನ ಅನೇಕಲ್ ಬಳಿಕ ಲೀಲಾ  ತನಗೆ ಪತಿ ಮಂಜುನಾಥ್​ ಬೇಡವೇ ಬೇಡ ಎಂದು ಪ್ರಿಯಕರ ಸಂತು ಜೊತೆ ವಾಸವಾಗಿದ್ದಾಳೆ. ಇದನ್ನೆಲ್ಲಾ ಸಹಿಸಲಾಗದ ಮಂಜುನಾಥ್​ ಬಸವನಪುರದ ಸಂತು ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾನೆ.

leela santhu
ಕೌಟುಂಬಿಕ ಕಲಹ Photograph: (ಕೌಟುಂಬಿಕ ಕಲಹ)

ಇವರಿಗೆ ಒಟ್ಟು ಮೂವರು ಮಕ್ಕಳಿದ್ದು, ಇಬ್ಬರು ಗಂಡು ಮಕ್ಕಳನ್ನು ಮಂಜುನಾಥ್ ತನ್ನ ಜೊತೆಗೆ ಇಟ್ಟುಕೊಂಡಿದ್ದರೆ,ಲೀಲಾ ತನ್ನ ಮಗಳೊಂದಿಗೆ ಸಂತುವಿನ ಜೊತೆ ವಾಸವಾಗಿದ್ದಳು.ಮಕ್ಕಳು ಕರೆಯುತ್ತಿದ್ದಾರೆ, ದಯವಿಟ್ಟು ಬಾ, ಎಂದು ಕಣ್ಣೀರು ಹಾಕಿದ್ದರೂ ಲೀಲಾ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಇದ್ದರಿಂದ ಸಿಟ್ಟಿಗೆದ್ದ ಮಂಜುನಾಥ್​ ಬಿಯರ್ ಬಾಟಲಿ ನಿಂದ ಹೊಡೆದು ಲೀಲಾ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ. ಆ ವೇಳೆ ಸಂತು ತಕ್ಷಣ ಸಿನಿಮಾ ಸ್ಟೈಲ್‌ನಲ್ಲಿ ಅಡ್ಡಗಟ್ಟಿ ಲೀಲಾಳನ್ನು ರಕ್ಷಿಸಿದ್ದಾನೆ.  ಆ ವೇಳೆ ಸಂತುಗೆ ಕೈಗೆ ಗಾಯವಾಗಿದೆ.  ಗಾಯಾಳು ಸಂತು ಜಿಗಣಿಯ ವಿಜಯಶ್ರೀ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 

ಇದನ್ನೂ ಓದಿ: ಐ ಲವ್ ಮೊಹಮ್ಮದ್ ವಿವಾದ ಆರಂಭವಾಗಿದ್ದು ಎಲ್ಲಿಂದ? ದಾವಣಗೆರೆ ತಲುಪಿದ್ದು ಹೇಗೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

leela,manjunath attack
Advertisment