ಕಂಡಕಂಡಲ್ಲಿ ನಾಯಿಗೆ ಬಿಸ್ಕಟ್ ಹಾಕಿದ್ರೆ ಹುಷಾರ್​.. ಬೆಂಗಳೂರಿನ ಶ್ವಾನಪ್ರಿಯರು ಓದಲೇಬೇಕಾದ ಸ್ಟೋರಿ..!

ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಶ್ವಾನಪ್ರಿಯರು ಹಾಗೂ ಸಾರ್ವಜನಿಕರ ನಡುವಿನ ನಿತ್ಯದ ಜಗಳಕ್ಕೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ.

author-image
Ganesh Kerekuli
street dog
Advertisment

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಶ್ವಾನಪ್ರಿಯರು ಹಾಗೂ ಸಾರ್ವಜನಿಕರ ನಡುವಿನ ನಿತ್ಯದ ಜಗಳಕ್ಕೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ಮುಂದೆ ನೀವು ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಬಿಸ್ಕೆಟ್ ಅಥವಾ ಊಟ ಹಾಕುವಂತಿಲ್ಲ. ಹಾಗೇನಾದರೂ ಮಾಡಿದರೆ ದಂಡ ತೆರಬೇಕಾಗುತ್ತದೆ! ನಗರದಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಬಿಎ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: ಬಾಂಗ್ಲಾದೇಶದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದ ಬಿಜೆಪಿ!!

street dog (1)

450 ಅಧಿಕೃತ ಆಹಾರ ಕೇಂದ್ರಗಳು

ನಾಯಿಗಳಿಗೆ ಆಹಾರ ನೀಡಲೆಂದೇ ಜಿಬಿಎ ನಗರದಾದ್ಯಂತ 450 ಅಧಿಕೃತ ಕೇಂದ್ರಗಳನ್ನು (Feeding Centers) ಗುರುತಿಸಿದೆ. ಈ ಸ್ಥಳಗಳಲ್ಲಿ ಮಾತ್ರವೇ ಶ್ವಾನಗಳಿಗೆ ಆಹಾರ ನೀಡಬೇಕು. ಈ ಕೇಂದ್ರಗಳನ್ನು ಹೊರತುಪಡಿಸಿ ರಸ್ತೆ ಬದಿ, ಪಾದಚಾರಿ ಮಾರ್ಗ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳಗಳಲ್ಲಿ ಆಹಾರ ನೀಡಿದರೆ ದಂಡ ಹಾಕುವುದು ಖಚಿತ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಏಕೆ ಈ ಹೊಸ ರೂಲ್ಸ್?

ಪ್ರಾದೇಶಿಕ ಪ್ರವೃತ್ತಿ (Territorial Instinct): ನಾಯಿಗಳು ಸಹಜವಾಗಿ ಪ್ರಾದೇಶಿಕ ಪ್ರವೃತ್ತಿಯನ್ನು ಹೊಂದಿರುತ್ತವೆ. ಒಂದೇ ಕಡೆ ಆಹಾರ ಸಿಗುವುದರಿಂದ ಅವು ಆ ಜಾಗವನ್ನು ತಮ್ಮದೆಂದು ಭಾವಿಸಿ, ಅಲ್ಲಿ ಬರುವ ಅಪರಿಚಿತರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚು. ಇದನ್ನು ತಪಿಸಲು ನಿರ್ದಿಷ್ಟ ಜಾಗ ಗುರುತಿಸಲಾಗಿದೆ.

ಇದನ್ನೂ ಓದಿ: ಭಾರತೀಯ ಸೇನೆಯಿಂದ ಅಗ್ನಿವೀರ್‌ 2026ರ ನೇಮಕಾತಿಗೆ ಅರ್ಜಿ ಆಹ್ವಾನ: 25 ಸಾವಿರ ಹುದ್ದೆ ಭರ್ತಿಗೆ ನಿರ್ಧಾರ

Kolara dog (1)

ಸಂಘರ್ಷಕ್ಕೆ ಬ್ರೇಕ್: ರಸ್ತೆ ಬದಿ ಆಹಾರ ಹಾಕುವುದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿತ್ತು. ಇದರಿಂದ ಶ್ವಾನಪ್ರಿಯರು ಮತ್ತು ಸಾರ್ವಜನಿಕರ ನಡುವೆ ಜಗಳವಾಗುತ್ತಿತ್ತು. ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಆಹಾರ ನೀಡುವವರಿಗೆ ಷರತ್ತುಗಳೇನು?

  • ಜಿಬಿಎ ಗುರುತಿಸಿದ ಅಧಿಕೃತ ಸ್ಥಳಗಳಲ್ಲಿ 'ಆಹಾರ ಕೇಂದ್ರ' ಎಂಬ ಫಲಕ ಅಳವಡಿಸಲಾಗುತ್ತದೆ.
  • ಆಹಾರ ನೀಡುವವರು ಆ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕಡ್ಡಾಯ.
  • ಜನದಟ್ಟಣೆ (Crowd) ಕಡಿಮೆ ಇರುವ ಸಮಯದಲ್ಲಿ ಮಾತ್ರ ಆಹಾರ ನೀಡಬೇಕು ಎಂದು ಸೂಚಿಸಲಾಗಿದೆ.

ವಲಯವಾರು ಆಹಾರ ಕೇಂದ್ರಗಳ ಪಟ್ಟಿ ಇಲ್ಲಿದೆ:

  • ಬೆಂಗಳೂರು ಪೂರ್ವ (East)    150
  • ಬೆಂಗಳೂರು ಕೇಂದ್ರ (Central)    90
  • ಬೆಂಗಳೂರು ಪಶ್ಚಿಮ (West)    85
  • ಬೆಂಗಳೂರು ಉತ್ತರ (North)    70
  • ಬೆಂಗಳೂರು ದಕ್ಷಿಣ (South)    55

ಒಟ್ಟಿನಲ್ಲಿ ಪ್ರಾಣಿ ಪ್ರಿಯರು ಇನ್ಮುಂದೆ ರಸ್ತೆಯಲ್ಲಿ ಹೋಗುವಾಗ ನಾಯಿ ಕಂಡರೆ ಅಲ್ಲೇ ಬೈಕ್ ನಿಲ್ಲಿಸಿ ಬಿಸ್ಕೆಟ್ ಹಾಕುವ ಮುನ್ನ, ಅದು 'ಫೀಡಿಂಗ್ ಝೋನ್' ಹೌದೋ, ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಚಿನ್ನ ಅಡವಿಟ್ಟ ಗ್ರಾಹಕರಿಗೆ ಬಿಗ್ ಶಾಕ್; 4 ಕೋಟಿ ಮೌಲ್ಯದ ಚಿನ್ನ ಕದ್ದ ಬ್ಯಾಂಕ್​ನ ಅಸಿಸ್ಟೆಂಟ್ ಮ್ಯಾನೇಜರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

street dog
Advertisment