ಅಧಿಕೃತವಾಗಿ ರಚನೆಗೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ; ಸೀತಾರಾಮನ್ ಸೇರಿ 75 ಸದಸ್ಯರು..!

ಅಧಿಕೃತವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚನೆ ಆಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಉಪಾಧ್ಯಕ್ಷರಾಗಿದ್ದಾರೆ. ಕರ್ನಾಟಕ ಸರ್ಕಾರ ‘ಗ್ರೇಟರ್ ಬೆಂಗಳೂರು’ ಯೋಜನೆ ಮೂಲಕ ಬೆಂಗಳೂರು ನಗರದ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ.

author-image
Ganesh Kerekuli
greater bengalore pradhikara
Advertisment

ಬೆಂಗಳೂರು: ಅಧಿಕೃತವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚನೆ ಆಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಉಪಾಧ್ಯಕ್ಷರಾಗಿದ್ದಾರೆ. 

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್, ರಾಜ್ಯದ ಸಚಿವರಾಗಿರುವ ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್, ಭೈರತಿ ಸುರೇಶ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಜಮೀರ್ ಅಹಮ್ಮದ್ ಸೇರಿ ಬೆಂಗಳೂರಿನ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಅಧಿಕಾರಿಗಳು ಒಟ್ಟು 75 ಮಂದಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯರುಗಳಾಗಿದ್ದಾರೆ. ಜೊತೆಗೆ ಹಿರಿಯ ಐಎಎಸ್ ಅಧಿಕಾರಿಗಳು ಕೂಡ ಪ್ರಾಧಿಕಾರದ ಸದಸ್ಯರಾಗಿದ್ದಾರೆ. 

ಬೆಂಗಳೂರು ನಗರ ವಿಸ್ತರಣೆ..


ಕರ್ನಾಟಕ ಸರ್ಕಾರ ‘ಗ್ರೇಟರ್ ಬೆಂಗಳೂರು’ ಯೋಜನೆ ಮೂಲಕ ಬೆಂಗಳೂರು ನಗರದ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಬಿಬಿಎಂಪಿ ಸುತ್ತ ಮುತ್ತಲಿನ ಪಟ್ಟಣ ಮತ್ತು ಗ್ರಾಮ ಪಂಚಾಯತ್‌ಗಳನ್ನು ಸೇರಿಸಿ, ನಗರದ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡ ಐದು ಹೊಸ ನಗರ ಪಾಲಿಕೆಗಳನ್ನು ರಚಿಸಲಾಗುತ್ತದೆ. ಈ ಯೋಜನೆಯಿಂದ ಬಿಬಿಎಂಪಿಯ ವ್ಯಾಪ್ತಿ ದ್ವಿಗುಣವಾಗುವ ನಿರೀಕ್ಷೆಯಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಸಹ ಇದರ ಅಡಿಯಲ್ಲಿ  ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ:ಬಾಲಿವುಡ್ ನಟಿ ಶ್ರೀದೇವಿ ಆಸ್ತಿ ಮೇಲೆ ಮೂವರ ಕಣ್ಣು! ಹೈಕೋರ್ಟ್ ಮೆಟ್ಟಿಲೇರಿದ ಪತಿ ಬೋನಿಕಪೂರ್

ಬೆಂಗಳೂರು ನಗರ ಜಿಲ್ಲೆಯ 86 ಗ್ರಾಮ ಪಂಚಾಯಿತಿಗಳ ಪೈಕಿ ಶೇಕಡಾ 50ರಷ್ಟು ಮತ್ತು ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಕೆಲವು ಭಾಗಗಳು ಈ ವ್ಯಾಪ್ತಿಗೆ ಬರುತ್ತವೆ. ಬೆಂಗಳೂರು ನಗರದ ಸುತ್ತಲೂ ಆರು ಉಪ ನಗರಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ಬಿಡದಿಯಲ್ಲಿ ಒಂದು ದೊಡ್ಡ ಉಪನಗರ ನಿರ್ಮಿಸುವ ಯೋಜನೆ ಪ್ರಾರಂಭವಾಗಿದೆ. ಇದಕ್ಕಾಗಿ 10 ಸಾವಿರ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮುಂತಾದ ಕಡೆಗಳಲ್ಲೂ ಉಪನಗರಗಳನ್ನು ನಿರ್ಮಿಸಲು ಸರ್ಕಾರ ಸಿದ್ಧತೆ ನಡೆಸಿದೆ.

6 ಉಪನಗರ

ಈ ಆರು ಉಪ ನಗರಗಳ ನಡುವಿನ ಪ್ರದೇಶವನ್ನು ಗ್ರೇಟರ್‌ ಬೆಂಗಳೂರು ಎಂದು ಕರೆಯಲಾಗುತ್ತದೆ. ಉಪ ನಗರಗಳನ್ನು ಅಭಿವೃದ್ಧಿಪಡಿಸಲು ಸರಕಾರವು ಒಪ್ಪಿಗೆ ನೀಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ  ಕೂಡ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024 ರ ಅಡಿಯಲ್ಲೇ ಬರುತ್ತದೆ. ಬಿಡಿಎಯ ಎಲ್ಲಾ ಪ್ರದೇಶಗಳು ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಸೇರುತ್ತವೆ. ಈಗ ಬಿಬಿಎಂಪಿಯ ವ್ಯಾಪ್ತಿ 708 ಚದರ ಕಿಲೋಮೀಟರ್ ಆಗಿದೆ. ಇದಕ್ಕೆ 250 ಚದರ ಕಿಲೋಮೀಟರ್ ಪ್ರದೇಶವನ್ನು ಸೇರಿಸಿದರೆ ಗ್ರೇಟರ್‌ ಬೆಂಗಳೂರು ಸುಮಾರು 1050 ಚದರ ಕಿ.ಮೀ. ಆಗಲಿದೆ.

ಗ್ರೇಟರ್​​ ಬೆಂಗಳೂರು ಐದು ವಿಭಾಗಗಳಾಗಿ ವಿಂಗಡಣೆ ಆಗಿದೆ. 5 ನಗರ ಪಾಲಿಕೆ ಮಾಡಿ ಸರ್ಕಾರ ಅಸ್ತು ಎಂದಿದೆ. ಬಿಬಿಎಂಪಿ ಕೇಂದ್ರ ಕಚೇರಿ ಇನ್ನು ಮುಂದೆ ಜಿಬಿಎ ಕೇಂದ್ರ ಕಚೇರಿಯಾಗಿ ಮಾರ್ಪಾಡು ಆಗಲಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ಕೇಂದ್ರ ನಗರ ಪಾಲಿಕೆಯನ್ನಾಗಿ ವಿಂಗಡಿಸಲಾಗಿದೆ. 

ಇದನ್ನೂ ಓದಿ: SIT ವಿಚಾರಣೆಯಲ್ಲಿ ಸುಜಾತಾ ಭಟ್​; ಪ್ರಶ್ನೆಗಳ ಸುರಿಮಳೆ..


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru News Greater Bengaluru Authority
Advertisment